More

    ಕಡಿಮೆ ಅವಧಿಯ ಸೇವೆ ಸಲ್ಲಿಸಿದ ಸೈನಿಕರಿಗೂ ಪಿಂಚಣಿ- ಕೇಂದ್ರದ ಮಹತ್ತರ ನಿರ್ಧಾರ

    ನವದೆಹಲಿ: ಸೇನೆಯಲ್ಲಿ ಕರ್ತವ್ಯದಲ್ಲಿ ಇರುವ ಸಮಯದಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ನ್ಯೂನತೆಗೆ ಒಳಗಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗದ ಯೋಧರಿಗೆ ಸಿಗುವ ಪಿಂಚಣಿ ಸೌಲಭ್ಯದಲ್ಲಿ ಕೇಂದ್ರ ಸರ್ಕಾರ ಮಹತ್ತರ ಆದೇಶವೊಂದನ್ನು ಪ್ರಕಟಿಸಿದೆ.

    ಇಂಥ ಸೈನಿಕರಿಗೆ ಪಿಂಚಣಿ ಸಿಗಲು ಇಲ್ಲಿಯವರೆಗೆ ಇರುವ ನಿಯಮದ ಪ್ರಕಾರ ಕನಿಷ್ಠ 10 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಿತ್ತು. ಇದಕ್ಕೆ ಇನ್‌ವ್ಯಾಲಿಡೇಟ್‌ ‍ಪೆನ್ಷನ್‌ ಎನ್ನಲಾಗುತ್ತದೆ. ಆದರೆ ಇನ್ನುಮುಂದೆ 10 ವರ್ಷಗಳಿಗಿಂತಲೂ ಕಡಿಮೆ ಸೇವೆ ಸಲ್ಲಿಸಿರುವವರೂ ಈ ಪಿಂಚಣಿ ಪಡೆಯಲು ಅರ್ಹರಿರುತ್ತಾರೆ.

    ಇದನ್ನೂ ಓದಿ: ಕರೊನಾ ಚಿಕಿತ್ಸೆನೂ ಕೊಟ್ಟರು, ಕೋಟಿ ಶುಲ್ಕನೂ ಬಿಟ್ಟರು, ವಿಮಾನಕ್ಕೂ ಕಳುಹಿಸಿದರು!

    ಈ ಕುರಿತು ರಕ್ಷಣಾ ಸಚಿವಾಲಯವು ಆದೇಶ ಹೊರಡಿಸಿದೆ. ಇಲ್ಲಿಯವರೆಗೆ 10 ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸಿರುವ ಯೋಧರು ಮಾನಸಿಕವಾಗಿ ಅಥವಾ ದೈಹಿಕವಾಗಿ ದುರ್ಬಲರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಗ್ರ್ಯಾಚ್ಯುಟಿಗೆ (ಇನ್‌ವ್ಯಾಲಿಡೇಟ್‌ ಗ್ರ್ಯಾಚ್ಯುಟಿ) ಮಾತ್ರ ಅರ್ಹರಾಗುತ್ತಿದ್ದರು. ಆದರೆ ಅವರಿಗೆ ಇನ್‌ವ್ಯಾಲಿಡೇಟ್‌ ಪೆನ್ಷನ್‌ ಸಿಗುತ್ತಿರಲಿಲ್ಲ. ಆದರೆ ಇದೀಗ ಎಲ್ಲರೂ ಇದಕ್ಕೆ ಅರ್ಹರು ಎಂದು ಸಚಿವಾಲಯ ಹೇಳಿದೆ.

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕುರಿತಾದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. 2019ರ ಜನವರಿ 4 ಅಥವಾ ಅದಕ್ಕಿಂತ ಮುಂಚೆ ಸಶಸ್ತ್ರಪಡೆಯಲ್ಲಿ ಕಾರ್ಯನಿರತರಾಗಿದ್ದ ಎಲ್ಲ ಸೈನಿಕರಿಗೆ ಇದರ ಲಾಭ ಸಿಗಲಿದೆ ಎಂದು ಸಚಿವಾಲಯ ಹೇಳಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts