More

    ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ; ಚೀನಾ ಸಿಲ್ಕ್​ ಬ್ಯಾನ್​…? ಸ್ವಾವಲಂಬನೆಗೆ ಸೂತ್ರ…!

    ನವದೆಹಲಿ: ಸ್ವಾವಲಂಬಿ ಭಾರತದತ್ತ ಮತ್ತೊಂದು ಹೆಜ್ಜೆಯಾಗಿ ಚೀನಾದಿಂದ ಆಮದಾಗುವ ರೇಷ್ಮೆಯನ್ನು ಬ್ಯಾನ್​ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ, ದೇಶದಲ್ಲಿ ತಯಾರಾಗುವ ಹತ್ತಿ ಹಾಗೂ ಉಣ್ಣೆಯ ಗುಣಮಟ್ಟವನ್ನು ವೃದ್ಧಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆ ಮೂಲಕ ಭಾರತದ ಜವಳಿ ಆಮದನ್ನು ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ.

    ಜವಳಿ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸಲು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸಂಸದೀಯ ಸ್ಥಾಯಿ ಸಮಿತಿಗೆ ಸ್ಪಷ್ಟಪಡಿಸಿದೆ. ಜತೆಗೆ ಬಳಕೆ ಹಾಗೂ ಸಾಮರ್ಥ್ಯವೃದ್ಧಿಗೆ ಅಗತ್ಯ ತಾಂತ್ರಿಕತೆ ಬಳಕೆಗೂ ಉತ್ತೇಜನ ನೀಡಲಿದೆ.

    ಇದನ್ನೂ ಓದಿ; ರಷ್ಯಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ; ‘ಸ್ಪುಟ್ನಿಕ್​-ವಿ’ಗೆ ಸಿಕ್ತು ಜಾಗತಿಕ ಮನ್ನಣೆ 

    ಮುಂದಿನ ವರ್ಷದ ಹೊತ್ತಿಗೆ ಚೀನಾದಿಂದ ಕಚ್ಚಾ ರೇಷ್ಮೆ ಆಮದನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ. ಜತೆಗೆ, ದೇಶದಲ್ಲಿ ಇದರ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಇಷ್ಟಕ್ಕೂ ಚೀನಾದಿಂದ ಭಾರತಕ್ಕೆ ಕಳಪೆ ಕಚ್ಚಾ ರೇಷ್ಮೆ ಆಮದಾಗುತ್ತಿದೆ. ಇದನ್ನು ಬಳಸಿ ತಯಾರಾಗುತ್ತಿರುವ ವಸ್ತ್ರಗಳ ಗುಣಮಟ್ಟ ಕೂಡ ಕಳಪೆಯಾಗಿರುತ್ತದೆ. ಹೀಗಾಗಿ ಚೀನಾದಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ಕಾಲಮಿತಿ ಯೋಜನೆ ರೂಪಿಸಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

    ಸದ್ಯ ರೇಷ್ಮೆ ಅತಿ ದೊಡ್ಡ ಉತ್ಪಾದಕ ರಾಷ್ಟವೆಂದರೆ ಚೀನಾ ಹಾಗೂ ಅದನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿರುವ ದೇಶ ಭಾರತವಾಗಿದೆ. ಆತ್ಮನಿರ್ಭರ್​ ಯೋಜನೆಯಡಿಯಲ್ಲಿ ಇದನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts