More

    ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್​ ಗ್ರೀನ್​ ಸಿಗ್ನಲ್​

    ನವದೆಹಲಿ: ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಯ ಕುರಿತು ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಮಂಗಳವಾರ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಅನುಮೋದನೆ ನೀಡಿದೆ.

    ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್​, ದಿನೇಶ್​ ಮಹೇಶ್ವರಿ ಮತ್ತು ಸಂಜೀವ್​ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸೆಂಟ್ರಲ್ ವಿಸ್ಟಾ ಯೋಜನೆಯ ದಾಖಲೆಗಳನ್ನು ಅನುಮೋದಿಸಿದೆ.

    ಇದನ್ನೂ ಓದಿ: ಕಗ್ಗತ್ತಲಿನಲಿ ಮಂಗಳೂರಿನ ದಾರಿಮೇಲೆ ಕಂಡುಬಂದ ‘ಭೂತ’: ವಿಡಿಯೋ ವೈರಲ್​

    ಡಿಡಿಎ ಕಾಯ್ದೆಯಡಿ ಕೇಂದ್ರದಿಂದ ಅಧಿಕಾರ ಚಲಾಯಿಸುವುದು ನ್ಯಾಯಸಮ್ಮತ ಮತ್ತು ಸೂಕ್ತವಾಗಿದೆ ಹಾಗೂ ಮಾರ್ಚ್ ಅಧಿಸೂಚನೆಗಳು ಸೇರಿದಂತೆ ಮಾಸ್ಟರ್ ಪ್ಲ್ಯಾನ್ 2021ರ ಭೂ ಬಳಕೆಯಲ್ಲಿನ ಮಾರ್ಪಾಡುಗಳು ದೃಢಪಟ್ಟಿದೆ ಎಂದು ನ್ಯಾಯಾಲಯ ತಿಳಿಸಿದೆ.

    ಪರಿಸರ ಸಮಿತಿಯ ಶಿಫಾರಸ್ಸು ಸರಿಯಾಗಿದೆ. ಪರಿಸರ ಸಚಿವಾಲಯದ ಪರಿಸರ ಅನುಮತಿಯ ಶಿಫಾರಸುಗಳು ಮಾನ್ಯ ಮತ್ತು ಸೂಕ್ತವಾಗಿದೆ ಮತ್ತು ನಾವು ಅದನ್ನು ಎತ್ತಿಹಿಡಿಯುತ್ತೇವೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಯೋಜನೆಯ ಮುಂದುವರಿಕೆಗೆ ಅಸ್ತು ಎಂದಿದೆ. ಅಲ್ಲದೆ, ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳನ್ನು ಬಳಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

    ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಕರೆಂಟ್ ಶಾಕ್?; ಯೂನಿಟ್​ಗೆ 1.39 ರೂ. ಹೆಚ್ಚಳಕ್ಕೆ ಶೀಘ್ರ ಪ್ರಸ್ತಾವನೆ

    ಪರಿಸರ ಇಲಾಖೆಯ ಅನುಮತಿ ಪಡೆಯಲಾಗಿಲ್ಲ ಎನ್ನುವುದು ಯೋಜನೆ ಕುರಿತು ವ್ಯಕ್ತವಾಗಿದ್ದ ಪ್ರಮುಖ ಆಕ್ಷೇಪಗಳಲ್ಲಿ ಒಂದಾಗಿದೆ. 2019ರ ಸೆಪ್ಟೆಂಬರ್ ಘೋಷಿಸಲಾದ ಸೆಂಟ್ರಲ್ ವಿಸ್ಟಾ ಯೋಜನೆ ಹೊಸ ಸಂಸತ್ ಕಟ್ಟಡ ನಿರ್ಮಾಣದ ಉದ್ದೇಶ ಹೊಂದಿದೆ. ದೇಶದ 75ನೇ ಸ್ವಾತಂತ್ರ್ಯೋತ್ಸವ ವೇಳೆಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2024ರೊಳಗೆ ಸಾಮಾನ್ಯ ಕಾರ್ಯಾಲಯ (ಸೆಕ್ರಟೆರಿಯೇಟ್) ಕಟ್ಟಡ ನಿರ್ವಿುಸುವುದು ಕೂಡ ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿದೆ.

    ಸಂಸತ್ ಭವನದ ಭೂಮಿ ಪೂಜೆ : ಐತಿಹಾಸಿಕ ಭಾಷಣದಲ್ಲಿ ಅನುಭವ ಮಂಟಪ ಸ್ಮರಿಸಿದ್ರು ಪ್ರಧಾನಿ ಮೋದಿ

    ಸಂಸತ್ ಭವನದ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂ ಅನುಮತಿ- ಆದರೂ ಕೇಂದ್ರಕ್ಕೆ ಹಿನ್ನಡೆ…

    ಹೊಸ ಸಂಸತ್ ಭವನಕ್ಕೆ 10ರಂದು ಮೋದಿ ಶಿಲಾನ್ಯಾಸ; 2022ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts