More

    “ಸೆಂಟ್ರಲ್ ವಿಸ್ತಾ ಖರ್ಚಲ್ಲಿ 62 ಕೋಟಿ ಡೋಸ್​ ಕರೊನಾ ಲಸಿಕೆ ನೀಡಬಹುದು”

    ನವದೆಹಲಿ : ಕರೊನಾ ಸಾಂಕ್ರಾಮಿಕದ ನಡುವೆ ದೆಹಲಿಯ ಸೆಂಟ್ರಲ್​ ವಿಸ್ತಾ ಯೋಜನೆಗಾಗಿ 20 ಸಾವಿರ ಕೋಟಿ ರೂಪಾಯಿ ವ್ಯಯ ಮಾಡುವುದು ಎಷ್ಟು ಸಮಂಜಸ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಅದೇ ಹಣದಲ್ಲಿ 62 ಕೋಟಿ ಕರೊನಾ ಲಸಿಕೆಯ ಡೋಸ್​ಗಳನ್ನು ಸರ್ಕಾರ ಖರೀದಿಸಬಹುದು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಬಹುದು ಎಂದಿದ್ದಾರೆ.

    ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ಅವರು, ಈ ಬಗ್ಗೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕರೊನಾ ಸಾಂಕ್ರಾಮಿಕವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಕೂಡ ಟೀಕೆ ಮಾಡಿದ ಪ್ರಿಯಾಂಕಾ ಗಾಂಧಿ, ಅಷ್ಟೊಂದು ಹಣವನ್ನು ಆಸ್ಪತ್ರೆಯ ಬೆಡ್​ಗಳು ಮತ್ತು ವೈದ್ಯಕೀಯ ಉಪಕರಣಗಳಿಗಾಗಿ ಬಳಸಬಹುದಾಗಿರುವಾಗ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸುತ್ತಿರುವುದು ಖಂಡನೀಯ ಎಂದರು.

    ಸಭೆಯ ನಂತರದಲ್ಲಿ ಗಾಂಧಿ ಅವರು, “ಪ್ರಧಾನಿಯ ಹೊಸ ನಿವಾಸ ಮತ್ತು ಸೆಂಟ್ರಲ್ ವಿಸ್ತಾ ವೆಚ್ಚ = 20,000 ಕೋಟಿ ರೂ. = 62 ಕೋಟಿ ಲಸಿಕೆ ಡೋಸ್​ಗಳು = 22 ಕೋಟಿ ರೆಮ್​ಡೆಸಿವಿರ್​ ವಯಲ್​​ಗಳು = 3 ಕೋಟಿ 10 ಲೀಟರ್​ ಆಕ್ಸಿಜನ್ ಸಿಲಿಂಡರ್​​ಗಳು = 12,000 ಬೆಡ್​​ಗಳುಳ್ಳ 13 ಏಮ್ಸ್​ ಆಸ್ಪತ್ರೆಗಳು. ಯಾಕೆ ?” ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

    ನೋಂದಣಿ ಕಾರ್ಯ ಸ್ಥಗಿತ : ಮೇ 23 ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಂದ್​

    ಕರೊನಾಘಾತ : ಗಂಗಾನದಿಯಲ್ಲಿ ಹರಿದುಬಂದವು 40ಕ್ಕೂ ಹೆಚ್ಚು ಹೆಣಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts