More

    ಕರೊನಾ ಹೆಚ್ಚಿರುವ ಆರು ರಾಜ್ಯಗಳಿಗೆ ಕೇಂದ್ರದ ತಂಡಗಳು

    ನವದೆಹಲಿ : ಹೆಚ್ಚು ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳನ್ನು ದಾಖಲಿಸುತ್ತಿರುವ ಆರು ರಾಜ್ಯಗಳಿಗೆ, ಕರೊನಾ ನಿಯಂತ್ರಣ ಕ್ರಮಗಳಲ್ಲಿ ಸಹಾಯ ಮಾಡುವುದಕ್ಕಾಗಿ, ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಂಡಗಳನ್ನು ಕಳುಹಿಸಿದೆ. ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರ ರಾಜ್ಯಗಳಿಗೆ ಈ ತಂಡಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.

    ಈ ತಂಡಗಳು ತಲಾ ಒಬ್ಬ ವೈದ್ಯ ಮತ್ತು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿರುತ್ತವೆ. ಆಯಾ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಹತ್ತಿರದಿಂದ ಅಧ್ಯಯನ ಮಾಡಿ, ಅಡಚಣೆಗಳನ್ನು ನಿವಾರಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಯತ್ನವನ್ನು ಬಲಪಡಿಸಲಿವೆ ಎನ್ನಲಾಗಿದೆ.

    ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!

    “ಈ ತಂಡಗಳು ಕೂಡಲೇ ರಾಜ್ಯಗಳಿಗೆ ಭೇಟಿ ನೀಡಿ, ಕೋವಿಡ್​ ನಿರ್ವಹಣೆಯ ಒಟ್ಟಾರೆ ಅನುಷ್ಠಾನವನ್ನು ಪರಿವೀಕ್ಷಣೆ ಮಾಡಲಿವೆ. ವಿಶೇಷವಾಗಿ ಟೆಸ್ಟಿಂಗ್​, ಸರ್ವೇಲೆನ್ಸ್ ಮತ್ತು ಕಂಟೈನ್​ಮೆಂಟ್​ ಆಪ್​ರೇಷನ್​ಗಳು, ಕೋವಿಡ್ ಮುನ್ನೆಚ್ಚರಿಕಾ ನಡವಳಿಕೆ ಮತ್ತು ಅದರ ಜಾರಿ ಬಗ್ಗೆ ಗಮನ ಹರಿಸಲಿವೆ. ಜೊತೆಗೆ, ಆಸ್ಪತ್ರೆ ಬೆಡ್​ಗಳು, ಆಂಬುಲೆನ್ಸ್​, ವೆಂಟಿಲೇಟರ್ಸ್, ಮೆಡಿಕಲ್ ಆಕ್ಸಿಜನ್ ಮುಂತಾದ ಸೌಕರ್ಯಗಳ ಲಭ್ಯತೆ ಹಾಗೂ ಕರೊನಾ ಲಸಿಕಾ ಅಭಿಯಾನದ ಪ್ರಗತಿಯನ್ನು ಮೇಲ್ವಿಚಾರಣೆ ನಡೆಸಿ, ಸೂಕ್ತ ಸಲಹೆಗಳನ್ನು ನೀಡುತ್ತವೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ

    ಬೆಂಗಳೂರಲ್ಲಿ ಕೇಳಿಬಂತು ಜೋರು ಶಬ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts