More

    ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ

    ರಾಣೆಬೆನ್ನೂರ: ಬೇರೆ ಯಾವುದೇ ದೇಶದ ಸರ್ಕಾರಗಳು ತಮ್ಮ ಪ್ರಜೆಗಳನ್ನು ಯೂಕ್ರೇನ್​ನಿಂದ ಕರೆಯಿಸಿಕೊಳ್ಳುವ ಕೆಲಸ ಮಾಡಿಲ್ಲ. ಆದರೆ, ಭಾರತ ಸರ್ಕಾರ ಮಾತ್ರ ಯೂಕ್ರೇನ್​ನಲ್ಲಿರುವ ಭಾರತೀಯರನ್ನು ಕರೆಯಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿದೆ. ಇದಕ್ಕಾಗಿ ನಾಲ್ವರು ಕೇಂದ್ರ ಸಚಿವರನ್ನು ಯೂಕ್ರೇನ್ ಅಕ್ಕಪಕ್ಕದ ದೇಶಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

    ಯುದ್ಧದಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡ್ರ ಮನೆಗೆ ಶನಿವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತೀಯ ವಾಯುಸೇವೆ ಹಾಗೂ ನಾಗರಿಕ ವಿಮಾನಗಳು ಭಾರತೀಯರನ್ನು ತರುವ ಕೆಲಸ ಮಾಡುತ್ತಿವೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುವುದು. ಯುದ್ಧಕ್ಕೆ ತಾತ್ಕಾಲಿಕ ವಿರಾಮ ಘೊಷಣೆಯಾಗಿದ್ದು, ಆದಷ್ಟು ಶೀಘ್ರ ನವೀನ ಮೃತದೇಹ ಹಾಗೂ ಅಲ್ಲಿ ಸಿಲುಕಿರುವ ಎಲ್ಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗುವುದು ಎಂದರು.

    ಯೂಕ್ರೇನ್​ನಲ್ಲಿ 20 ಸಾವಿರ ಭಾರತೀಯರು ಸಿಲುಕಿದ್ದು, ಅದರಲ್ಲಿ 18 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಅವರಲ್ಲಿ ನವೀನ ಮೃತಪಟ್ಟಿರುವುದು ದುರ್ದೈವದ ಸಂಗತಿ. ಇದು ತುಂಬಾ ಆಕಸ್ಮಿಕ ಘಟನೆಯಾಗಿದೆ. ನಮ್ಮ ರಾಯಭಾರಿ ಕಚೇರಿ ನಾಲ್ಕು ಬಾರಿ ಭಾರತದ ವಿದ್ಯಾರ್ಥಿಗಳಿಗೆ ಯುದ್ಧದ ಮುನ್ಸೂಚನೆ ನೀಡಿತ್ತು. ಅಲ್ಲಿರುವ ವಿಶ್ವವಿದ್ಯಾಲಯಗಳ ಬೇಜವಾಬ್ದಾರಿ ಯಿಂದ ನಮ್ಮ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವಂತಾಗಿದೆ. ಇದೇ ಗ್ರಾಮದ ಇನ್ನಿಬ್ಬರು ವಿದ್ಯಾರ್ಥಿಗಳು ಅಲ್ಲಿನ ಹಳ್ಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಮೆರಿಟ್ ವಿದ್ಯಾರ್ಥಿಗಳಿಗೆ ನೀಟ್ ಸೀಟು ಸಿಗುತ್ತದೆ, ನೀಟ್ ಬಂದ ಮೇಲೆ ಬಡವರ ಮಕ್ಕಳಿಗೂ ಸೀಟು ಸಿಗುತ್ತಿದೆ. ನಮ್ಮ ನವೀನ ಪ್ರತಿಭಾವಂತ ಆಗಿದ್ದರೂ ಸೀಟು ಸಿಗದಿರೋದು ದುಃಖದ ಸಂಗತಿ ಎಂದರು. ಶಾಸಕ ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts