ಕೇಂದ್ರ ಬಜೆಟ್​ 2022: ಬಜೆಟ್​ ಮಂಡನೆಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ

Nirmala 1
Published on

ನವದೆಹಲಿ: ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರಿಂದು ತಮ್ಮ ನಾಲ್ಕನೇ ಬಜೆಟ್​ ಮಂಡಿಸಲಿದ್ದು, ಆಯವ್ಯಯ ಮಂಡನೆಗೂ ಮುನ್ನ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡರು.

ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡನೆಗೆ ಅನುಮೋದನೆ ಪಡೆದುಕೊಂಡರು.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.

ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಆರಂಭವಾಗಲಿದ್ದು, ಕರೊನಾ ಅಲೆಗಳಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇಂದಿನ ಬಜೆಟ್ ಮಹತ್ವದ್ದಾಗಿದ್ದು, ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ ಸಿಗಲಿದೆ? ರಾಜ್ಯದ ಪಾಲಿಗೆ ಏನೇನು ಬರಲಿದೆ? ಜನರಿಗೆ ಸಿಗುತ್ತಾ ತೆರಿಗೆ ವಿನಾಯಿತಿ? ಕರೋನದಿಂದ ಆದಾಯ ಕಳೆದುಕೊಂಡಿರುವ ವಲಯಕ್ಕೆ ಕೊಡುತ್ತಾ ಕೇಂದ್ರ ಗುಡ್ ನ್ಯೂಸ್? ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಇಳಿಕೆ ಆಗುತ್ತಾ ಏರಿಕೆ ಆಗುತ್ತಾ? ಆರೋಗ್ಯ ಉಪಕರಣಗಳು ಮತ್ತು ಔಷಧಿಗಳ ಮೇಲೆ ಹಾಕ್ತಿರುವ ತೆರಿಗೆ ಕಡಿಮೆ ಆಗುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಂದಿನ ಬಜೆಟ್​ನಲ್ಲಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net