More

    ತನಿಖಾ ಸಂಸ್ಥೆಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಜತೆ ಹೊಂದಾಣಿಕೆ ಉತ್ತಮ: ಶಿವಸೇನಾ ಶಾಸಕ

    ಮುಂಬೈ: ಕೇಂದ್ರ ತನಿಖಾ ಸಂಸ್ಥೆಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ ಎಂದು ಶಿವಸೇನಾ ಪಕ್ಷದ ಶಾಸಕ ಪ್ರತಾಪ್​ ಸರ್ನಾಯಕ್​​​ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ತನಿಖಾ ಸಂಸ್ಥೆಗಳ ಕಿರುಕುಳದಿಂದ ಪಕ್ಷದ ಸದಸ್ಯರನ್ನು ಉಳಿಸಿ ಎಂದು ಕೇಳಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಪ್ರತಾಪ್​ ಸರ್ನಾಯಕ್​​​ ಬರೆದಿರುವ ಪತ್ರದ ಸಾರಾಂಶ ಹೀಗಿದೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಪಕ್ಷದ ದೃಷ್ಟಿಯಿಂದ ಉತ್ತಮ. ಪ್ರತಾಪ್ ಸರ್ನಾಯಕ್​​​ , ಅನಿಲ್ ಪರಬ್, ರವೀಂದ್ರ ವೈಕರ್ ಮತ್ತು ಅವರ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಗಳ ಮೇಲಿನ ಅನಗತ್ಯ ಕಿರುಕುಳವು ಹೊಂದಾಣಿಕೆ ರಾಜಕೀಯದಿಂದ ನಿಲ್ಲುತ್ತದೆ ಎಂದು ಅನೇಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ನಮಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿವೆ. ಒಂದು ಪ್ರಕರಣದಲ್ಲಿ ಜಾಮೀನು ಪಡೆಯುತ್ತಿದ್ದಂತೆ, ಉದ್ದೇಶಪೂರ್ವಕವಾಗಿ ಮತ್ತೊಂದು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ” ಎಂದಿದ್ದಾರೆ.

    “ಅಭಿಮನ್ಯುವಿನಂತೆ ಹೋರಾಡುವ ಬದಲು ಬಿಲ್ಲುಗಾರ ಅರ್ಜುನನಂತೆ ಹೋರಾಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಸರನಾಯಕ್​ ಹೇಳಿದ್ದಾರೆ. ವಿಶೇಷವೆಂದರೆ, ಶಾಸಕ ಪ್ರತಾಪ್ ಸರ್ನಾಯಕ್​​​ ಮತ್ತು ಅವರ ಕುಟುಂಬದ ವಿರುದ್ಧದ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ.

    ಟಾಪ್ಸ್ ಗ್ರುಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್‌ನಲ್ಲಿ ಇಡಿ ಅಧಿಕಾರಿಗಳು ಸರ್ನಾಯಕ್​​​ ಅವರ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಡಿಸೆಂಬರ್ 10 ರಂದು ಅವರನ್ನು ಪ್ರಶ್ನಿಸಲಾಯಿತು. ಇದಾದ ಬಳಿಕ ಎರಡು ಬಾರಿ ಕರೆಸಲಾಯಿತು, ಆದರೆ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಅವರು ಹಾಜರಾಗಲಿಲ್ಲ.

    5600 ಕೋಟಿ ರೂ. ಮೌಲ್ಯದ ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ (ಎನ್ಎಸ್ಇಎಲ್) ಹಗರಣಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಸರ್ನಾಯಕ್​​​ ಒಡೆತನದ ಸಂಸ್ಥೆಗೆ ಸೇರಿದ 112 ಪ್ಲಾಟ್‌ಗಳನ್ನು ಇಡಿ ಸ್ವಾಧೀನಕ್ಕೆ ತೆಗೆದುಕೊಂಡಿತು.

    ಸರ್ನಾಯಕ್​​​ , ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಗೆ ಬರೆದ ಪತ್ರದಲ್ಲಿ, “ನಾನು ಕಳೆದ 7 ತಿಂಗಳಿಂದ ಯಾರಿಗೂ ತೊಂದರೆ ನೀಡದೆ ನನ್ನ ಕುಟುಂಬದೊಂದಿಗೆ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಮುಂದಿನ ವರ್ಷ ಮುಂಬೈ, ಥಾಣೆ ಮತ್ತು ಇತರ ಮಹಾನಗರ ಪಾಲಿಕೆಗಳಿಗೆ ಚುನಾವಣೆಗಳಿವೆ. ನಮ್ಮ (ಬಿಜೆಪಿ ಮತ್ತು ಶಿವಸೇನೆ) ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದಿದೆ, ಮೈತ್ರಿ ನಾಯಕರ ವೈಯಕ್ತಿಕ ಸಂಬಂಧಗಳು ಅನೇಕ ನಾಯಕರಲ್ಲಿ ಹಾಗೇ ಉಳಿದಿವೆ. ಅದನ್ನು ತಕ್ಷಣ ಸರಿಹೊಂದಿಸುವುದು ಉತ್ತಮ” ಎಂದಿದ್ದಾರೆ.ಅಲ್ಲದೆ, ಮುಂಬರುವ ಬಿಎಂಸಿ ಮತ್ತು ಥಾಣೆ ಪುರಸಭೆ ಚುನಾವಣೆಗಳಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

    ಪ್ರತಾಪ ಸರ್ನಾಯಕ್​​​​ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್​, ಈ ಪತ್ರವು ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರಿಗೆ ರಾಜ್ಯದಲ್ಲಿ ಕಿರುಕುಳ ನೀಡುತ್ತಿರುವ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದೆ ಎಂದಿದ್ದಾರೆ.

    ನಿಮ್ಮ ಫೋನ್ ಕಳವಾಗಿದೆಯೇ/ ಕಳೆದು ಹೋಗಿದೆಯೇ? ಗೂಗಲ್​ನ ಈ ಫೀಚರ್​ನಿಂದ ಮರಳಿ ಪಡೆಯಬಹುದು!

    ಅಪ್ಪಂದಿರ ದಿನವೇ ತಂದೆ ಜತೆ ನೇಣಿಗೆ ಶರಣಾದ ಸ್ಪೂರ್ತಿ-ಕೀರ್ತಿ: ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ

    ಮೃತಳು ಸತ್ತ ಘಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರ ಸಂಚು ಬಿಚ್ಚಿಟ್ಟ ಟೆಕ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts