More

    ಮಾಲ್ಡೀವ್ಸ್​ನಲ್ಲಿ ತಾರೆಯರ ಮೋಜು-ಮಸ್ತಿ

    ಬೆಂಗಳೂರು: ಕಳೆದ ತಿಂಗಳಷ್ಟೇ ‘ಹಂಗಾಮಾ – 2’ ಎಂಬ ಬಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪ್ರಣೀತಾ ಸುಭಾಷ್, ಇದೀಗ ಎಲ್ಲ ಕೆಲಸಗಳನ್ನು ಮುಗಿಸಿ ಮಾಲ್ಡೀವ್ಸ್​ಗೆ ಫ್ಲೈಟು ಹತ್ತಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಅಲ್ಲಿನ ಸಮುದ್ರ ತೀರದಲ್ಲಿ ಪ್ರಣೀತಾ ರಜೆ ಕಳೆಯಲಿದ್ದಾರೆ.

    ಸಾಮಾನ್ಯವಾಗಿ ನಟ-ನಟಿಯರೆಲ್ಲ ವರ್ಷಕ್ಕೆ ಒಂದು ಸಲ ವಿದೇಶಕ್ಕೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಬರುವುದುಂಟು. ಆದರೆ, ಈ ಬಾರಿ ಕರೊನಾದಿಂದಾಗಿ ಯಾರೂ, ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎಲ್ಲವೂ ಸಹಜಸ್ಥಿತಿಗೆ ಬರುತ್ತಿರುವಂತೆ ಒಬ್ಬೊಬ್ಬರೇ ಸಿನಿಮಾಗಳಿಂದ ಬಿಡುವು ಪಡೆದು, ವಿಶ್ರಾಂತಿಗೆ ಹೊರಟು ನಿಂತಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಯೂರೋಪ್ ಕಡೆಗೆ ಹೋಗುವುದುಂಟು. ಆದರೆ, ಕರೊನಾ ಅಲ್ಲಿನ್ನೂ ಪೂರ್ತಿಯಾಗಿ ತಗ್ಗಿಲ್ಲವಾದ್ದರಿಂದ, ಮಾಲ್ಡೀವ್ಸ್​​ನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಬರೀ ಪ್ರಣೀತಾ ಅಷ್ಟೇ ಅಲ್ಲ, ಹಲವು ನಟ-ನಟಿಯರು ಕಳೆದ ಕೆಲವು ದಿನಗಳಲ್ಲಿ ಮಾಲ್ಡೀವ್ಸ್​ನತ್ತ ಮುಖ ಮಾಡುತ್ತಿದ್ದಾರೆ.

    ಮಾಲ್ಡೀವ್ಸ್​ನಲ್ಲಿ ತಾರೆಯರ ಮೋಜು-ಮಸ್ತಿ
    ಕಾಜಲ್ ಅಗರ್​ವಾಲ್​, ಟೈಗರ್ ಶ್ರಾಫ್​

    ಹೊಸದಾಗಿ ಮದುವೆಯಾಗಿರುವ ಕಾಜಲ್ ಅಗರ್​ವಾಲ್, ಪತಿಯ ಜತೆಗೆ ಅಲ್ಲಿ ಹನಿಮೂನ್​ನಲ್ಲಿದ್ದಾರೆ. ಇನ್ನು ಟೈಗರ್ ಶ್ರಾಫ್, ವೇದಿಕಾ ಸಹ ಮಾಲ್ಡೀವ್ಸ್ ನಲ್ಲೇ ಇದ್ದಾರೆ. ಕಳೆದ ವಾರವಷ್ಟೇ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್, ಅಲ್ಲಿ ವಿಶ್ರಾಂತಿಗೆಂದು ಹೋಗಿದ್ದರು. ಇನ್ನು ಕಳೆದ ತಿಂಗಳು ತಾಪ್ಸಿ ಪನ್ನು ತಮ್ಮ ಗೆಳೆತಿಯರ ಜತೆಗೆ ಮಾಲ್ಡೀವ್ಸ್​ನ ಕಡಲ ಕಿನಾರೆಯಲ್ಲಿ ಫೋಟೋ ತೆಗೆಸಿಕೊಂಡು ಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts