More

    ರಾಮಜನ್ಮಭೂಮಿಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ‘ರಾವಣ ಜನ್ಮಭೂಮಿ’ಯ ಮಣ್ಣು!

    ನೋಯ್ಡಾ: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿ ನಿನ್ನೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೂಮಿ ಪೂಜೆ, ಶಿಲಾನ್ಯಾಸ ನೆರವೇರಿಸುತ್ತಿದ್ದರೆ, ಇತ್ತ ನೋಯ್ಡಾದಲ್ಲಿರುವ ‘ರಾಕ್ಷಸರಾಜ’ ರಾವಣನ ದೇವಸ್ಥಾನದಲ್ಲೂ ಪೂಜೆಯ ಸಂಭ್ರಮಾಚರಣೆಗಳು ಕಂಡುಬಂದವು!
    ರಾಕ್ಷಸ ರಾಜ ಎಂದೇ ಪ್ರಸಿದ್ಧನಾಗಿದ್ದ ರಾವಣನ ಜನ್ಮಸ್ಥಳ ನೋಯ್ಡಾದ ಬಿಸ್ರಾಖ್ ಗ್ರಾಮ ಎಂದು ಹೇಳಲಾಗುತ್ತಿದ್ದು, ಅಲ್ಲಿ ರಾವಣನ ದೇವಸ್ಥಾನ ಒಂದಿದೆ. ಅಲ್ಲಿ ಅಯೋಧ್ಯೆಯ ಸಂಭ್ರಮಾಚರಣೆ ಪ್ರತಿಧ್ವನಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಅರ್ಚಕ ಅಶೋಕಾನಂದ ಮಹಾರಾಜ್​, ರಾವಣನಿಗೆ ಮೋಕ್ಷ ಒದಗಿಸಿದ ರಾಮನಿಲ್ಲದಿದ್ದರೆ ರಾವಣ ಅಪೂರ್ಣ ಎಂದು ಹೇಳಿದ್ದಾರೆ.

    ನಿನ್ನೆ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಮಂದಿರದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಿಸ್ರಾಖ್ ಗ್ರಾಮದ ಒಂದು ಹಿಡಿ ಮಣ್ಣನ್ನೂ ಕಳುಹಿಸಲಾಗಿದೆ. ದೇಶದ ನಾನಾಭಾಗಗಳ ದೇವಸ್ಥಾನಗಳ ಗ್ರಾಮಗಳ ಮಣ್ಣನ್ನು ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗಿತ್ತಿದೆ. 500 ವರ್ಷಗಳ ಸತತ ಹೋರಾಟದ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿರುವ ಕಾರಣ ರಾವಣನ ಗ್ರಾಮಸ್ಥರಾಗಿರುವ ನಮಗೆಲ್ಲ ಬಹಳ ಸಂತೋಷವಾಗಿದೆ. ರಾವಣನ ದೇವಸ್ಥಾನದಲ್ಲಿ ನಾವು ರಾಮ ಮರಳಿ ಮನೆಗೆ ಬರುತ್ತಿರುವ ಸಂಭ್ರಮಾಚರಣೆಯನ್ನು ಆಚರಿಸಿದ್ದೇವೆ ಎಂದು ಅಶೋಕಾನಂದ ಮಹಾರಾಜ್ ತಿಳಿಸಿದರು.

    ಇದನ್ನೂ ಓದಿ: ಅಯೋಧ್ಯೆ ಬೀಗ ತೆರೆಯುವುದಕ್ಕೆ ಮುನ್ನ ರಾಜೀವ್ ಗಾಂಧಿ ಮಾಡಿದ ಡೀಲ್ ಏನಾಗಿತ್ತು!!!

    ರಾವಣನ ಆರಾಧನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕಾನಂದ ಮಹಾರಾಜ್​, ಹಿಂದುತ್ವ ಎಂದರೆ ವೈವಿಧ್ಯತೆಯಿಂದ ಕೂಡಿರುವಂಥದ್ದು. ದೇವರ ಬಗ್ಗೆ ಭಯ ಹುಟ್ಟಿಸುವುದು ಹಿಂದುತ್ವದ ಪರಿಕಲ್ಪನೆಯಲ್ಲ. ಎಲ್ಲವೂ ಕರ್ಮ ಸಿದ್ಧಾಂತಕ್ಕೆ ಅನುಸಾರವಾಗಿರುವಂಥದ್ದು. ದೇವರು ಎಲ್ಲಕಡೆ, ಪ್ರತಿಯೊಂದರಲ್ಲೂ ಇದ್ದಾನೆ ಎಂಬುದನ್ನು ನಂಬಿದವರು ನಾವು. ಒಳ್ಳೆಯದು ಮತ್ತು ಕೆಟ್ಟದ್ದು ನಮ್ಮೆಲ್ಲರಲ್ಲೂ ಇದೆ. ರಾವಣ ಶಿವಭಕ್ತ. ಆತ ಅಧಿಕಾರ ದುರ್ಬಳಕೆ ಮಾಡುವ ತನಕ ಕೆಟ್ಟವನಾಗಿರಲಿಲ್ಲ. ಅವನಿಗೆ ಶಕ್ತಿ ಪ್ರಾಪ್ತಿಯಾದ ಬಳಿಕ ಭಗವಾನ್ ರಾಮ ಮಾತ್ರವೇ ಆತನಿಗೆ ಮೋಕ್ಷ ಕೊಡಬಲ್ಲ ಎಂಬುದನ್ನು ಅರಿತಿದ್ದ. ಅದನ್ನಾತ ಪಡೆದಿದ್ದಾನೆ ಎಂದು ವಿವರಿಸಿದರು. (ಏಜೆನ್ಸೀಸ್)

    ಜಿ.ಸಿ.ಮುರ್ಮು ಭಾರತದ ನೂತನ ಸಿಎಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts