More

    ಅಯೋಧ್ಯೆ ಮಂಡಲೋತ್ಸವ ಮುಗಿಸಿ ಬಂದ ಪೇಜಾವರ ಶ್ರೀ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಬಳಿಕ 48 ದಿನಗಳ ಮಂಡಲೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೆಹಲಿಯ ಪೇಜಾವರ ಮಠದ ವಸಂತಕುಂಜ್ ಶಾಖೆಗೆ ವಾಪಸಾಗಿದ್ದಾರೆ.

    ನಂತರ ತಮ್ಮ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡ ಅವರು, ಮಂಡಲೋತ್ಸವದ ಜತೆಗೆ ವಿಶೇಷ ಧಾರ್ಮಿಕ ಅನುಷ್ಠಾನಗಳು ಭಾನುವಾರ ಅಯೋಧ್ಯೆಯ ಸರಯೂ ನದಿಯಲ್ಲಿ ಅವಭೃತ ಸ್ನಾನದ ಮೂಲಕ ಪೂರ್ಣಗೊಂಡಿತು. ಭಾರತದ ಹೊರಗೂ ಕೂಡ ಅನೇಕ ಮಂದಿ ರಾಮ ತಾರಕ ಜಪ ಮಂತ್ರ ಪಠಣ, ಯಾಗ ಯಜ್ಞಗಳನ್ನು ನಡೆಸಿದರು. ಎಲ್ಲವನ್ನೂ ನಾವು ರಾಮ ದೇವರಿಗೆ ಸಮರ್ಪಿಸಿದ್ದೇವೆ. ಭಗವಂತನ ಸನ್ನಿಧಾನ ವಿಶೇಷವಾಗಿ ಮೂಡಬೇಕು ಎಂಬ ಕಾರಣಕ್ಕಾಗಿ ಪ್ರತಿದಿನ ಮುಸ್ಸಂಜೆ ವೇಳೆ ಪಲ್ಲಕ್ಕಿ ಉತ್ಸವ ನಡೆಸಿದೆವು. ಕಾಶಿ ಮಠದಿಂದ ರಜತ ಪಲ್ಲಕ್ಕಿ ಸಮರ್ಪಣೆಯಾಗಿರುವುದು ವಿಶೇಷ ಎಂದು ತಿಳಿಸಿದರು.

    ರಾಮನಿಗೆ ಉಯ್ಯಾಲೆ ಉತ್ಸವ, ಮಂದಿರದ ಆವರಣದಲ್ಲಿ ಶ್ರೀರಾಮನ ಪುರಾಣ, ಇತಿಹಾಸಗಳ ಉದ್ಘೋಷ, ಕೇರಳ, ಕರ್ನಾಟಕ, ತಮಿಳುನಾದಿನಿಂದ ಬಂದವರಿಂದ ವಾದ್ಯ ಸೇವೆ ಸಮರ್ಪಣೆಯಾದವು. ಸದ್ಯ ದಿನಕ್ಕೆ 3 ಲಕ್ಷ ಮಂದಿ ರಾಮನ ದರ್ಶನ ಮಾಡುತ್ತಾ ಇದ್ದಾರೆ ಎಂದು ವಿವರಿಸಿದರು.

    ರಾಮರಾಜ್ಯದ ವ್ಯಾಖ್ಯಾನ
    ನಾವೀಗ ಶ್ರೀರಾಮನಿಗೆ ಸೂರು ಕಟ್ಟಿಕೊಟ್ಟಿದ್ದೇವೆ. ರಾಮ ಹುಟ್ಟಿದ ಜಾಗದಲ್ಲಿ ಅವನ ದರ್ಶನ ಭಾಗ್ಯ ಸಿಗುತ್ತಿದೆ. ಈ ಹೊತ್ತಿನಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ನಾವು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು ಎಂದು ವಿವರಿಸಿದ ಸ್ವಾಮೀಜಿ, ರಾಮನ ಒಂದೊಂದು ಗುಣವನ್ನು ಒಬ್ಬೊಬ್ಬರು ಅಳವಡಿಸಿಕೊಂಡರೆ ರಾಮರಾಜ್ಯ ಸಾಧ್ಯವಾಗುತ್ತದೆ ಎಂದರು.

    ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮದುವೆ ಅಥವಾ ಮತ್ಯಾವುದೋ ಕಾರ್ಯಕ್ರಮಕ್ಕೆ ಕೋಟ್ಯಂತರ ಹಣ ಖರ್ಚು ಮಾಡುತ್ತೇವೆ. ಅದೇ ಕಷ್ಟದಲ್ಲಿರುವವರಿಗೆ ನೆರವಾಗಲು ಹತ್ತು ಬಾರಿ ಯೋಚಿಸುತ್ತೇವೆ. ಇನ್ನಾದರೂ ಜೀವನದಲ್ಲಿ ಒಮ್ಮೆಯಾದರೂ ನಮ್ಮ ವೃತ್ತಿ ಅಥವಾ ಯಾವುದಾದರೂ ಮಾರ್ಗದ ಮೂಲಕ ದುಃಖದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡೋಣ. ರಾಮರಾಜ್ಯ ನಿರ್ಮಾಣವಾಗುವುದೇ ಹೀಗೆ ಎಂದು ಅಭಿಪ್ರಾಯಪಟ್ಟರು.

    ದಯವಿಟ್ಟು ಪಾಸ್​ ಮಾಡಿ ಸರ್​ ಇಲ್ಲಾಂದ್ರೆ ಮದ್ವೆ ಮಾಡ್ತಾರೆ! ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ ಮನವಿ

    ಜಾನ್ವಿ ಕಪೂರ್ ಮೊಬೈಲ್ ಸ್ಕ್ರೀನ್​​​​​​ನಲ್ಲಿ ಯಾರ ಫೋಟೋ ಇದೆ, ಯಾರು ಆ ಲಕ್ಕಿ ಅಂತ ಹೇಳಬಹುದಾ!?

    ರವಿಚಂದ್ರನ್​​ ಜತೆ ನಟಿಸಿದ್ದ ಹೀರೋಯಿನ್ ​ಲೋಕಸಭೆ ಅಖಾಡಕ್ಕೆ ಎಂಟ್ರಿ; ಈ ನಟಿ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts