More

    ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಿ

    ಚಿಮ್ಮಡ: ಸರ್ಕಾರಿ ನಿಯಮಾನುಸಾರ ಹಾಗೂ ಗ್ರಾಮದ ಯಾವುದೇ ವ್ಯಕ್ತಿಗೆ ತೊಂದರೆಯಾಗದಂತೆ ಗಣೇಶನ ಹಬ್ಬ ಆಚರಿಸಬೇಕು ಎಂದು ಬನಹಟ್ಟಿ ಠಾಣಾಧಿಕಾರಿ ರಾಕೇಶ ಬಗಲಿ ಹೇಳಿದರು.

    ಗ್ರಾಮದ ಬಾಹುಸಾಹೇಬ ಮಹಾರಾಜರ ಮಠದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ `ಮನೆ ಬಾಗಿಲಿಗೆ ಪೊಲೀಸರು ಹಾಗೂ ಗಣೇಶನ ಹಬ್ಬ ಮತ್ತು ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವದ ಶಾಂತಿ ಪಾಲನೆ ಸಭೆ’ ಯಲ್ಲಿ ಅವರು ಮಾತನಾಡಿದರು.

    ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಸಮಿತಿಗಳು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಪರವಾನಗಿ ಪಡೆದುಕೊಳ್ಳಬೇಕು ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕವಟಿ ಮಾತನಾಡಿ, ಗ್ರಾಮದಲ್ಲಿ ಸೆ. 8ರಂದು ನಡೆಯುವ ಪ್ರಭುಲಿಂಗೇಶ್ವರ ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಸೇರುವ ನಿರೀಕ್ಷೆ ಇದೆ. ಸೂಕ್ತ ಬಂದೋಬಸ್ತ್ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.

    ಪ್ರಭುಲಿಂಗೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ರಾಮಣ್ಣ ಮುಗಳಖೋಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಪೂಜಾರಿ, ಪ್ರಕಾಶ ಪಾಟೀಲ, ಬೀರಪ್ಪ ಹಳೇಮನಿ, ಬಸವರಾಜ ಕುಂಚನೂರ, ಹಲವು ಪ್ರಮುಖರು ಮಾತನಾಡಿದರು.

    ಪಿಕೆಪಿಎಸ್ ಮಾಜಿ ಅಧ್ಯಕ್ಷ ಪುಂಡಲೀಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಬಿ.ಎಸ್. ಪಾಟೀಲ, ರಾಮಣ್ಣ ಬಗನಾಳ, ಅನೀಲ ಪಾಟೀಲ, ಈಶ್ವರ ಬಡಿಗೇರ, ಪ್ರೊಬೆಷನರಿ ಪಿಎಸ್‌ಐ ವಿಠ್ಠಲ ನಾಯಕ, ಕಾನ್ಸ್ಸ್ಟೆಬಲ್ ಪ್ರಶಾಂತ ಚಿಲಾಪುರ, ಬಸವರಾಜ ಹುನ್ನೂರ, ಶ್ರೀಶೈಲ ಬಾಡಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts