More

    ಚೆಂಡು ಹೂವು ಮಣ್ಣುಪಾಲು, ಸೂಕ್ತ ಮಾರುಕಟ್ಟೆಯಿಲ್ಲದೆ ಸಂಕಷ್ಟ

    ದಾಬಸ್‌ಪೇಟೆ: ಹೋಬಳಿಯಲ್ಲಿ ಚೆಂಡು ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸಾಕಷ್ಟು ರೈತರು ಚೆಂಡು ಹೂವು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಸೂಕ್ತ ಮಾರುಕಟ್ಟೆಯಿಲ್ಲದೆ, ಕೊಳ್ಳುವವರೂ ಇಲ್ಲದೆ ಲೋಡುಗಟ್ಟಲೆ ಹೂವು ಮಣ್ಣು ಪಾಲಾಗುವ ಪರಿಸ್ಥಿತಿ ತಲುಪಿದೆ.

    1 ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆಯಲು ಕನಿಷ್ಠ 80 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ಮಾರಾಟಕ್ಕೆ ತೊಂದರೆಯಾಗಿದೆ ಎಂದು ಕೆಂಪರಾಜು ಅಲವತ್ತುಗೊಂಡಿದ್ದಾರೆ.

    ಈಗಾಗಲೇ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದರೂ ಅತ್ತ ಕಡೆಯಿಂದ ಸ್ಪಂದನೆ ಬಂದಿಲ್ಲ ಎಂಬುದು ರೈತರ ದೂರು.

    ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದು ಜಿಲ್ಲಾಧಿಕಾರಿಗೆ ವರದಿ ನೀಡುವ ಕೆಲಸ ಮಾಡುತ್ತಿದ್ದೇವೆ. ಪರಿಹಾರದ ವಿಷಯವಾಗಿ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
    ಸುಬ್ರಹ್ಮಣ್ಯ
    ನೆಲಮಂಗಲ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts