More

    ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

    ಬೆಂಗಳೂರು: ಕಾಟನ್​ಪೇಟೆ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್​ ಕೇಸ್​ ಸಂಬಂಧ ಸಿಸಿಬಿ ನೋಟಿಸ್​ ಜಾರಿ ಮಾಡಿದ ಹಿನ್ನೆಲೆಯಲ್ಲಿ ಖ್ಯಾತ ನಿರೂಪಕ ಅಕುಲ್​ ಬಾಲಾಜಿ ಶನಿವಾರ ಬೆಳಗ್ಗೆ 10.10ರ ಸುಮಾರಿಗೆ ಸಿಸಿಬಿ ಕಚೇರಿಗೆ ಹಾಜರ್​ ಆದರು.

    ಸಿಸಿಬಿ ಕಚೇರಿಗೆ ಬಂದ ಅಕುಲ್ ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕರ್ನಾಟಕದ ಜನತೆಗೆ ನಮಸ್ಕಾರಗಳು. ಸಿಸಿಬಿ ಹೇಳಿದ ಸಮಯಕ್ಕೆ ಬಂದಿದ್ದೀನಿ, ಹತ್ತು‌ನಿಮಿಷ ತಡವಾಗಿದೆ. ಡ್ರಗ್ಸ್​ ದಂಧೆಯ ಆರೋಪಿ ವೈಭವ್ ಜೈನ್ ಮತ್ತು ಪ್ರತಿಕ್ ಶೆಟ್ಟಿ ನನಗೆ ಹಾಯ್-ಬಾಯ್ ಫ್ರೆಂಡ್ ಅಷ್ಟೆ. ನನ್ನ ರೆಸಾರ್ಟ್ ಅನ್ನು ಲೀಜ್​ಗೆ ಕೊಟ್ಟಿದ್ದೆ. ಅದರ ದಾಖಲೆಗಳನ್ನು ತಂದಿದ್ದೇನೆ. ಎಲ್ಲ ಮಾಹಿತಿಯನ್ನೂ ತನಿಖಾಧಿಕಾರಿಗಳಿಗೆ ನೀಡುತ್ತೇನೆ. ಲಾಕ್​ಡೌನ್ ವೇಳೆ ಅಲ್ಲಿ ಏನು ನಡೆಯಿತು? ಎಂಬುದರ ಬಗ್ಗೆ ನನಗೆ ದೇವ್ರಾಣೆ ಗೊತ್ತಿಲ್ಲ. ”ಮಗ ನೀನು ತಪ್ ಮಾಡಿಲ್ಲ ಅಂದ್ರೆ ಹೆದರಬೇಡ” ಎಂದು ತನ್ನ ತಾಯಿ ಹೇಳಿದ್ದಾರೆ’ ಎಂದ ಅಕುಲ್​, ‘ಈಗ ನಾನು ಕಚೇರಿ ಒಳಗೆ ಹೋಗುತ್ತೇನೆ. ವಿಚಾರಣೆ ಏನಿದೆಯೋ ಅದನ್ನು ಮುಗಿಸ್ತೀನಿ’ ಎಂದರು. ಇದನ್ನೂ ಓದಿರಿ ಡ್ರಗ್ಸ್​ ಕೇಸ್​; ಅಕುಲ್​ ಬಾಲಾಜಿ, ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

    ‘ಡ್ರಗ್ಸ್​ ದಂಧೆಗೆ ಬ್ರೇಕ್​ ಹಾಕುತ್ತಿರುವುದು ಒಳ್ಳೆಯ ಕಾರ್ಯ. ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ಸ್ಪಂದಿಸಲಿದ್ದೇನೆ’ ಎನ್ನುತ್ತಾ ಅಕುಲ್​, ಸಿಸಿಬಿ ಕಚೇರಿ ಒಳಗೆ ಹೋದರು.

    ದೊಡ್ಡಬಳ್ಳಾಪುರದ ಲಘುಮೇನಹಳ್ಳಿಯಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ಬೈ ಜೆಡೆ ರೆಸಾರ್ಟ್ ಇದೆ. ಈ ರೆಸಾರ್ಟ್​ನಲ್ಲಿಯೇ ಸಿಸಿಬಿ ವಶದಲ್ಲಿರುವ ಡ್ರಗ್ಸ್ ಪೆಡ್ಲರ್​ಗಳು ಪಾರ್ಟಿ ಆಯೋಜಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿವೈಎಸ್ಪಿ ರಂಗಪ್ಪ ನೇತೃತ್ವದ ತಂಡ ರೆಸಾರ್ಟ್​ ಬಳಿ ಮಾಹಿತಿ ಕಲೆ ಹಾಕುತ್ತಿದೆ.

    ಶುಕ್ರವಾರ ಸಂಜೆಯೇ ಅಕುಲ್​ ಬಾಲಾಜಿ, ಬಿಬಿಎಂಪಿ ಕಾರ್ಪೋರೇಟರ್​ ಆರ್​.ವಿ.ಯುವರಾಜ್​ ಮತ್ತು ನಟ ಸಂತೋಷ್​ ಕುಮಾರ್​ಗೆ ಸಿಸಿಬಿ ನೋಟಿಸ್​ ಕೊಟ್ಟಿತ್ತು.

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts