ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಬಾಕಿ ಉಳಿದಿದ್ದ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 1ರಿಂದ 15ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ.
ಜುಲೈ 1 ರಂದು ಹೋಮ್ ಸೈನ್ಸ್, 2ರಂದು ಹಿಂದಿ ಎಲೆಕ್ಟಿವ್ , ಹಿಂದಿ ಕೋರ್, 7-ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಟೆಕ್, 9- ಬಿಜಿನೆಸ್ ಸ್ಟಡೀಸ್, 10- ಬಯೋಟೆಕ್ನಾಲಜಿ, 11-ಭೂಗೋಳಶಾಸ್ತ್ರ, 13- ಸೋಷಿಯಾಲಜಿ ಪರೀಕ್ಷೆಗಳು ನಡೆಯಲಿವೆ.
ಇದನ್ನೂ ಓದಿ; ಇನ್ನಷ್ಟು ಹತ್ತಿರವಾಯ್ತು ಮೌಂಟ್ ಎವರೆಸ್ಟ್…!
ಇನ್ನುಳಿದ ದಿನಗಳಂದು 10ನೇ ತರಗತಿ ಪರೀಕ್ಷೆ ನಡೆಯಲಿದ್ದು, ಅವುಗಳು ಈಶಾನ್ಯ ದೆಹಲಿ ಶಾಲೆಗಳಿಗೆ ಸೀಮಿತವಾಗಿರಲಿವೆ ಎಂದು ಮಂಡಳಿ ಹೇಳಿದೆ.
ಎಲ್ಲ ವಿದ್ಯಾರ್ಥಿಗಳು ಸ್ಯಾನಿಟೈಸರ್ನ್ನು ಕೊಂಡೊಯ್ಯಬೇಕು. ಮಾಸ್ಕ್ ಧರಿಸಿರಬೇಕು. ಕರೊನಾ ವ್ಯಾಪಿಸುವುದನ್ನು ತಡೆಯುವ ಕ್ರಮಗಳ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿರಬೇಕು. ಪ್ರವೇಶಪತ್ರದಲ್ಲಿ ನೀಡಲಾಗುವ ಎಲ್ಲ ಸೂಚನೆಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.