More

    10 ವರ್ಷಗಳಲ್ಲಿ ವಾರ್ಷಿಕವಾಗಿ ಶೇ. 20ಕ್ಕೂ ಅಧಿಕ ಲಾಭ ತಂದುಕೊಟ್ಟಿವೆ ಈ 10 ಮ್ಯೂಚುವಲ್​ ಫಂಡ್​ಗಳು

    ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಬಯಸದವರು ಹಾಗೂ ಮಾರುಕಟ್ಟೆ ಏರಿಳಿತಗಳನ್ನು ಸತತವಾಗಿ ಗಮನಿಸುವ ಜಂಜಾಟದಿಂದ ದೂರ ಇರಬಯಸುವವರು ಕೂಡ ಮ್ಯೂಚುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಸಾಕಷ್ಟು ಲಾಭ ಗಳಿಸಿಕೊಳ್ಳಬಹುದಾಗಿದೆ. ಈ ಫಂಡ್​ಗಳಲ್ಲಿ ಸಿಪ್​ (ಸಿಸ್ಟಮೆಟಿಕ್​ ಇನ್ವೆಸ್ಟ್​ಮೆಂಟ್​ ಪ್ಲಾನ್​- ಎಸ್​ಐಪಿ) ಮೂಲಕ ಹಣ ತೊಡಗಿಸಬಹುದು. ಅಂದರೆ, ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕಕ್ಕೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ನಿರ್ದಿಷ್ಟ ಹಣವನ್ನು ಈ ಫಂಡ್​ಗಳಲ್ಲಿ ಮಾಡುವುದೇ ಸಿಪ್​ ಆಗಿದೆ.

    ಈಕ್ವಿಟಿ ಮ್ಯೂಚುಯಲ್ ಫಂಡ್​ನಲ್ಲಿ ಹಣ ತೊಡಗಿಸುವವರು ತಮ್ಮ ಸಿಪ್​ ಹೂಡಿಕೆಗಳಿಂದ ದೀರ್ಘಾವಧಿಯಲ್ಲಿ ‘ಯೋಗ್ಯ’ ಆದಾಯವನ್ನು ಗಳಿಸಲು ಸಾಧ್ಯವಾಗಬಹುದಾಗಿದೆ. ಈಕ್ವಿಟಿ ಮ್ಯೂಚುಯಲ್ ಫಂಡ್​ಗಳು ಈಗಾಗಲೇ ಹೂಡಿಕೆದಾರರಿಗೆ ಎಷ್ಟು ಆದಾಯ ತಂದುಕೊಟ್ಟಿವೆ ಎಂಬುದನ್ನು ಪರಿಗಣಿಸಿ ಹೂಡಿಕೆ ಮಾಡುವುದು ಈ ನಿಟ್ಟಿನಲ್ಲಿ ಪ್ರಮುಖ ಲೆಕ್ಕಾಚಾರ.

    ಹಲವು ಈಕ್ವಿಟಿ ಮ್ಯೂಚುಯಲ್ ಫಂಡ್​ಗಳು ಕಳೆದ 10 ವರ್ಷಗಳಲ್ಲಿ ಶೇಕಡಾ 20ಕ್ಕೂ ಅಧಿಕ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ ಎನ್ನುವುದು ಅಚ್ಚರಿಯಾದರೂ ನೈಜ ಸಂಗತಿಯೇ ಆಗಿದೆ. ಅಂದರೆ, ಪ್ರತಿವರ್ಷ ಸರಾಸರಿ ಶೇಕಡಾ 20ಕ್ಕೂ ಅಧಿಕ ಲಾಭವನ್ನು ಇವು ನೀಡಿವೆ. ಸಿಪ್​ ಹೂಡಿಕೆ ಮಾಡಿದವರಿಗೆ ಇಷ್ಟೊಂದು ಪ್ರಮಾಣದ ಲಾಭ ಈ ಫಂಡ್​ಗಳಿಂದ ದೊರೆತಿದೆ. ಇಂತಹ 10 ಪ್ರಮುಖ ಫಂಡ್​ಗಳ ಪಟ್ಟಿ ಇಲ್ಲಿದೆ. ಗಮನಾರ್ಹ ಸಂಗತಿ ಎಂದರೆ ಇವುಗಳಲ್ಲಿ ಬಹುತೇಕವುಗಳು ಸ್ಮಾಲ್ ಕ್ಯಾಪ್​ ಫಂಡ್​ಗಳಾಗಿವೆ.

    ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, 10 ವರ್ಷಗಳಲ್ಲಿ ಅಂದಾಜು 24.47% ಆದಾಯವನ್ನು ನೀಡಿದೆ. ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಕ್ವಾಂಟ್ ಟ್ಯಾಕ್ಸ್ ಪ್ಲಾನ್ ಮ್ಯೂಚುಯಲ್ ಫಂಡ್‌ಗಳು ಕ್ರಮವಾಗಿ 23.55% ಮತ್ತು 22.86% ಲಾಭ ತಂದುಕೊಟ್ಟಿವೆ. ಡಿಎಸ್​ಪಿ ಸ್ಮಾಲ್ ಕ್ಯಾಪ್ ಫಂಡ್ 10 ವರ್ಷಗಳ ಅವಧಿಯಲ್ಲಿ ಅಂದಾಜು 20.18% ನಷ್ಟು ಆದಾಯ ನೀಡಿದೆ.

    10 ವರ್ಷಗಳಲ್ಲಿ ವಾರ್ಷಿಕವಾಗಿ ಶೇಕಡಾ 20ಕ್ಕೂ ಅಧಿಕ ಲಾಭ ನೀಡಿರುವ ಇತರ ಮ್ಯೂಚುಯಲ್ ಫಂಡ್​ಗಳೆಂದರೆ ಆ್ಯಕ್ಸಿಸ್​ ಸ್ಮಾಲ್​ ಕ್ಯಾಪ್​ ಫಂಡ್ (21.39%); ಎಚ್​ಡಿಎಫ್​ಸಿ ಸ್ಮಾಲ್ ಕ್ಯಾಪ್​ ಫಂಡ್ (20.71%); ಕೋಟಕ್​ ಸ್ಮಾಲ್​ ಕ್ಯಾಪ್​ ಫಂಡ್​ (20.26%); ಎಸ್​ಬಿಐ ಸ್ಮಾಲ್​ ಕ್ಯಾಪ್ ಫಂಡ್ (21.87%); ಕ್ವಾಂಟ್​ ಮಿಡ್ ಕ್ಯಾಪ್​ ಫಂಡ್ (20.51%)​; ಕ್ವಾಂಟ್​ ಆ್ಯಕ್ಟಿವ್​ ಫಂಡ್​ (21.06%).

    ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ: ಕೇಂದ್ರದ ಮಾಜಿ ಸಚಿವರಿಗೆ ಸಿಎಂ ಯೋಗ

    ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ: ಇಬ್ಬರು ಶೂಟರ್‌, ಒಬ್ಬ ಸಹಚರನ ಬಂಧನ

    ಕುಟುಂಬ ರಾಜಕಾರಣ ವಿರೋಧಿಸಿದ್ದ ಮಾಯಾವತಿ; ಸೋದರಳಿಯನನ್ನೇ ಈಗ ಉತ್ತರಾಧಿಕಾರಿಯಾಗಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts