More

    ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ: ಕೇಂದ್ರದ ಮಾಜಿ ಸಚಿವರಿಗೆ ಸಿಎಂ ಯೋಗ

    ರಾಯಪುರ: ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವವು ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ಭಾನುವಾರ ನಡೆದ ಛತ್ತೀಸ್‌ಗಢ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

    ಈಚೆಗೆ ಜರುಗಿದ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ವಿಷ್ಣು ದೇವ ಸಾಯಿ ಅವರು ಕುಂಕೂರಿ ಕ್ಷೇತ್ರದಿಂದ ಗೆದ್ದಿದ್ದಾರೆ. ಸಾಯಿ ಅವರು 2020 ರಿಂದ 2022 ರವರೆಗೆ ಛತ್ತೀಸ್‌ಗಢ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಅವರು ಮೊದಲ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಉಕ್ಕು, ಗಣಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ (MoS) ಸಚಿವರಾಗಿದ್ದರು. ವಿಷ್ಣು ದೇವು ಅವರು 1999, 2004, 2009 ಮತ್ತು 2014 ರಲ್ಲಿ ರಾಯಗಢ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಲೋಕಸಭೆ ಚುನಾವಣೆಗಳಲ್ಲಿ ಗೆಲವು ಸಾಧಿಸಿದ್ದರು.

    ಸಾಯಿ ಅವರು 1990 ಮತ್ತು 1993 ರಲ್ಲಿ ಅವಿಭಜಿತ ಮಧ್ಯಪ್ರದೇಶದ (ಛತ್ತೀಸ್​ಗಢ ಪ್ರತ್ಯೇಕ ರಾಜ್ಯವಾಗುವ ಮೊದಲು) ತಪ್ಕರಾ ಕ್ಷೇತ್ರದಿಂದ ಸತತ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದಿದ್ದರು. 2023ರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ವಿಷ್ಣು ದೇವು ಈ ಬಾರಿ ಕಾಂಗ್ರೆಸ್‌ನ ಹಾಲಿ ಶಾಸಕ ಯುಡಿ ಮಿಂಜ್ ಅವರನ್ನು ಸೋಲಿಸಿದ್ದಾರೆ.

    ಏತನ್ಮಧ್ಯೆ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಶಾಸಕಾಂಗ ಪಕ್ಷದ ಸಭೆಗಳು ಇನ್ನೆರಡು ದಿನಗಳಲ್ಲಿ ನಡೆಯಲಿವೆ.

    ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ: ಇಬ್ಬರು ಶೂಟರ್‌, ಒಬ್ಬ ಸಹಚರನ ಬಂಧನ

    ಕುಟುಂಬ ರಾಜಕಾರಣ ವಿರೋಧಿಸಿದ್ದ ಮಾಯಾವತಿ; ಸೋದರಳಿಯನನ್ನೇ ಈಗ ಉತ್ತರಾಧಿಕಾರಿಯಾಗಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts