ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್‌ಇ) 12ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದೆ. ಒಟ್ಟಾರೆ ಶೇ. 99.37 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದ 12.96 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಒಟ್ಟು 65,184 ವಿದ್ಯಾರ್ಥಿಗಳ ಫಲಿತಾಂಶವನ್ನು, ಪ್ರೊಸೆಸಿಂಗ್ ಇನ್ನೂ ನಡೆಯುತ್ತಿರುವುದರಿಂದ, ಇಂದು ಪ್ರಕಟಿಸಲಾಗಿಲ್ಲ. ಅವರ ಫಲಿತಾಂಶವನ್ನು ಮಂಡಳಿಯು ಆಗಸ್ಟ್ 5 ರಂದು ಪ್ರಕಟಿಸವುದು ಎನ್ನಲಾಗಿದೆ.
ಕರೊನಾ ಕಾರಣದಿಂದಾಗಿ ಈ ಬಾರಿ ಪರೀಕ್ಷೆಗಳನ್ನು ನಡೆಸದೆಯೇ, ವಿಶಿಷ್ಟ ಮಾದರಿಯಲ್ಲಿ ಮೌಲ್ಯಾಂಕನ ಮಾಡಲಾಗಿದೆ. ಶಾಲಾ ಆಂತರಿಕ ಅಂಕಗಳು, 11ನೇ ತರಗತಿ ಅಂಕಗಳು ಮತ್ತು 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನು 40:30:30 ರೇಷಿಯೋದಲ್ಲಿ ಪರಿಗಣಿಸಿ ವಿದ್ಯಾರ್ಥಿಗಳ ಅಂಕಗಳನ್ನು ನಿರ್ಧರಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಯಾಗಿದ್ದಾರೆ. 2020ರಲ್ಲಿ ಶೇ. 88.8 ವಿದ್ಯಾರ್ಥಿಗಳು ಪಾಸಾಗಿದ್ದರೆ, 2019 ರಲ್ಲಿ ಶೇ.83.4 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು.
ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್
ಫಲಿತಾಂಶ ನೋಡಲು http://cbseresults.nic.in/ ಕ್ಲಿಕ್ಕಿಸಿ
ಅಥವಾ
* ಸಿಬಿಎಸ್‌ಇ ಬೋರ್ಡ್ ವೆಬ್ಸೈಟ್ http://cbse.nic.in ಗೆ ಲಾಗ್ ಇನ್ ಮಾಡಿ.
* ಮುಖಪುಟದಲ್ಲಿ, ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ಕಿಸಿ
* ರೋಲ್ ನಂಬರ್, ನೋಂದಣಿ ಸಂಖ್ಯೆ, ಅಥವಾ ಇತರ ಅಗತ್ಯ ವಿವರಗಳೊಂದಿಗೆ ಲಾಗಿನ್ ಮಾಡಿ.
* ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.
* ಪ್ರಿಂಟ್ಔಟ್ ಬೇಕಿದ್ದರೆ ತೆಗೆದುಕೊಳ್ಳಬಹುದು.
DigiLocker ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕವೂ ಫಲಿತಾಂಶ ನೋಡಬಹುದು.
ಸರ್ಕಾರ ಲೈಸೆನ್ಸ್ ಪಡೆದಿದೆಯೇ? ಸುಪ್ರೀಂ ಅಂಗಳಕ್ಕೆ ಪೆಗಾಸಸ್ ಪ್ರಕರಣ!