More

    ₹705 ಕೋಟಿ ಗುಳುಂ ಆರೋಪ: ಸಿಬಿಐ ಬಲೆಗೆ ಜಿವಿಕೆ ಒಡೆಯರು

    ನವದೆಹಲಿ: ಸುಮಾರು 705 ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ ಹೊತ್ತ ಜಿವಿಕೆ ಗ್ರೂಪ್ ಆಫ್ ಕಂಪನಿಸ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಮಗ ಜಿ ವಿ ಸಂಜಯ್ ರೆಡ್ಡಿ ಅವರ ವಿರುದ್ಧ ಸಿಬಿಐ ಕೇಸ್‌ ದಾಖಲಿಸಿದೆ. ಸಂಜಯ್‌ ರೆಡ್ಡಿ ಅವರು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎಎಲ್) ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

    ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಈ ಕೇಸು ದಾಖಲಾಗಿದೆ. 2006ರಲ್ಲಿ ನಡೆದಿರುವ ಒಪ್ಪಂದಕ್ಕೆ ಸಂಬಂಧಿಸಿದ ವಿವಾದ ಇದಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜಿವಿಕೆ ಏರ್ ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಹಯೋಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ವಹಣೆ ಮಾಡುವ ಕೆಲಸವನ್ನು ಈ ಜೆವಿಕೆ ಗ್ರೂಪ್‌ಗೆ ನೀಡಲಾಗಿತ್ತು. ಇದರಲ್ಲಿ ಸುಮಾರು 705 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿರುವ ಆರೋಪ ಇವರ ಮೇಲಿದೆ.

    ಇದನ್ನೂ ಓದಿ: ಬ್ಯಾನ್​ ಮಾಡಲು ಭಾರತದ ಉತ್ಪನ್ನಗಳೇ ಇಲ್ಲ, ಚೀನಾದ ಲೇವಡಿಗೆ ಆನಂದ್​ ಮಹೀಂದ್ರಾ ಕೊಟ್ಟ ಉತ್ತರವೇನು?

    ಜಿವಿಕೆ ಗ್ರೂಪ್ ಪ್ರವರ್ತಕರು ತಮ್ಮ ಕಾರ್ಯನಿರ್ವಾಹಕ ಸಿಬ್ಬಂದಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೆಲವು ಅಧಿಕಾರಗಳ ಜತೆಗೂಡಿ ಒಳ ಒಪ್ಪಂದ ಮಾಡಿಕೊಂಡು ಹಣದ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.

    2017-18ರಲ್ಲಿ ಒಂಬತ್ತು ಕಂಪನಿಗಳಿಗೆ ನಕಲಿ ಕೆಲಸದ ಒಪ್ಪಂದವನ್ನು ಮಾಡುವ ಮೂಲಕ ಕೆಲಸ ಮಾಡಿರುವಂತೆ ತೋರಿಸಿ ಸುಮಾರು 310 ಕೋಟಿ ರೂಪಾಯಿಗಳನ್ನು ಜಿವಿಕೆ ಸಮೂಹ ತನ್ನ ಇಚ್ಛೆಯ ಕಂಪನಿಗಳಿಗೆ ಹಣ ಒದಗಿಸಿದೆ. ಇದರೊಂದಿಗೆ ಸುಮಾರು 395 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

    ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಮಗ ಜಿ ವಿ ಸಂಜಯ್ ರೆಡ್ಡಿ ಜತೆಗೆ ಇತರ ಒಂಬತ್ತು, ಖಾಸಗಿ ಕಂಪೆನಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಗುರುತು ಪತ್ತೆಯಾಗದ ಅಧಿಕಾರಿಗಳ ವಿರುದ್ಧ ಸಹ ಸಿಬಿಐ ದೂರು ದಾಖಲಿಸಿದೆ. (ಏಜೆನ್ಸೀಸ್‌)

    ಶೇ.83 ಅಂಕಗಳ ಖುಷಿಯಲ್ಲಿದ್ದಾಕೆ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಜಕ್ಕೂ ಶಾಕ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts