More

    ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣ: ಆಂಧ್ರ ಸಿಎಂ ಜಗನ್ ರೆಡ್ಡಿ ಚಿಕ್ಕಪ್ಪ ಬಂಧನ

    ನವದೆಹಲಿ: ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್​. ಭಾಸ್ಕರ್​ ರೆಡ್ಡಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ (ಏಪ್ರಿಲ್​ 16) ಬಂಧಿಸಿದೆ.

    ಕಡಪ ಜಿಲ್ಲೆಯಲ್ಲಿ ಸಿಬಿಐ ಅಧಿಕಾರಿಗಳು ಭಾಸ್ಕರ್​ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ರೆಡ್ಡಿ ವಿರುದ್ಧ ಸೆಕ್ಷನ್ 120 ಬಿ (ಪಿತೂರಿ), 302 (ಕೊಲೆ), 201 (ಸಾಕ್ಷ್ಯ ನಾಶಪಡಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

    ಕೊಲೆಯಾದ ವಿವೇಕಾನಂದ ರೆಡ್ಡಿ ಅವರು ಆಂಧ್ರ ಪ್ರದೇಶದ ಮಾಜಿ ಸಿಎಂ ದಿವಂಗತ ವೈ.ಎಸ್​. ರಾಜೇಶೇಖರ ರೆಡ್ಡಿ ಅವರ ಸಹೋದರ. ಹಾಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರ ಅಂಕಲ್​. ಪುಲಿವೆಂದುಲದಲ್ಲಿರುವ ನಿವಾಸದಲ್ಲಿ 2019ರ ಮಾರ್ಚ್​ 15ರಂದು ಕೊಲೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಕೆಲವೇ ವಾರಗಳ ಮುಂಚೆ ಕೊಲೆಯಾಗಿತ್ತು. ಪುಲಿವೆಂದುಲಾ ಕ್ಷೇತ್ರವನ್ನು ಈಗ ಅವರ ಸೋದರ ಸಂಬಂಧಿ ಪ್ರತಿನಿಧಿಸುತ್ತಿದ್ದಾರೆ.

    ಆರಂಭದಲ್ಲಿ ಕೊಲೆಯ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆ ನಡೆಸುತ್ತಿತ್ತು. ಬಳಿಕ 2020ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

    ಸಿಬಿಐ ಚಾರ್ಜ್​ಶೀಟ್​​ ಪ್ರಕಾರ ವಿವೇಕಾನಂದ ರೆಡ್ಡಿ ಅವರು ಕಡಪಾ ಲೋಕಸಭಾ ಕ್ಷೇತ್ರದಿಂದ ಅವಿನಾಶ್​ ರೆಡ್ಡಿ ಬದಲಾಗಿ ತನಗೆ ಅಥವಾ ವೈ.ಎಸ್​. ಶರ್ಮಿಳಾ (ಜಗನ್​ ಮೋಹನ್​ ರೆಡ್ಡಿ ಸಹೋದರಿ) ಅಥವಾ ವೈ.ಎಸ್​. ವಿಜಯಮ್ಮ (ಜಗನ್​ ರೆಡ್ಡಿ ತಾಯಿ) ಅವರಿಗೆ ಕೇಳಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಕಾಮತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಬಳಕೆ: 6 ಶಿಕ್ಷಕಿಯರ ಬಂಧನ, ಸ್ಫೋಟಕ ಮಾಹಿತಿ ಬಹಿರಂಗ

    ಅವಿನಾಶ್​ ರೆಡ್ಡಿ ಬಂಧಿತ ಭಾಸ್ಕರ್​ ರೆಡ್ಡಿ ಅವರ ಮಗ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅವಿನಾಶ್​ ಅವರು ಕಡಪ ಕ್ಷೇತ್ರದ ಹಾಲಿ ಸಂಸದರು ಆಗಿದ್ದಾರೆ. (ಏಜೆನ್ಸೀಸ್​)

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

    ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts