More

    ಕಾವೇರಿ ಈಗ ಟೈಮ್​ದೇ ವರಿ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
    ನವೀನ್ ಬಿಲ್ಗುಣಿ ಶಿವಮೊಗ್ಗ
    ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ಟೈಮ್ ಸ್ಲಾಟ್ ಪ್ರಯೋಗಕ್ಕೆ ಸಾಕ್ಷಿಯಾಗಿರುವ ಉಪ ನೋಂದಣಿ ಕಚೇರಿಗಳು ಗೊಂದಲದ ಗೂಡಾಗಿ ಬದಲಾಗಿವೆ. ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನಕ್ಕೊಂದು ಸಮಸ್ಯೆ ಎದುರಿಸುತ್ತಿದ್ದ ಜನರು ಇದೀಗ ಕೊಟ್ಟ ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ನೋಂದಣಿಗಾಗಿ ಮತ್ತೆ 24 ಗಂಟೆ ಕಾದು ಕೂರಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಉಪ ನೋಂದಣಿ ಕಚೇರಿಗಳಲ್ಲಿ ಪಾಸ್​ಪೋರ್ಟ್ ಕಚೇರಿ ಮಾದರಿ ಸೇವೆ ನೀಡುವುದಾಗಿ ಹೇಳಿ ಕಾವೇರಿ 2.0 ತಂತ್ರಾಂಶ ಅಪ್​ಗ್ರೇಡ್ ಮಾಡಲಾಗಿದೆ. ದಸ್ತಾವೇಜುಗಳ ನೋಂದಣಿಗೆ ನಿಗದಿತ ಸಮಯ (ಟೈಮ್ ಸ್ಲಾಟ್) ನೀಡಲಾಗುತ್ತಿದೆ. ಹೀಗಾಗಿ ಜನರು ಸರಿಯಾದ ಸಮಯಕ್ಕೆ ಹೋಗಲೇಬೇಕು. ಇಲ್ಲದೇ ಹೋದರೆ ಮತ್ತೆ ಟೈಮ್ ಸ್ಲಾಟ್ ಪಡೆಯಲು 24 ಗಂಟೆ ಕಾಯಬೇಕಾಗಿದೆ. ಕಳೆದೊಂದು ವಾರ ದಿಂದ ಜಾರಿಯಾಗಿರುವ ಈ ಹೊಸ ವ್ಯವಸ್ಥೆ ಸಾರ್ವಜನಿಕರ ಜತೆಗೆ ಸಬ್ ರಿಜಿಸ್ಟ್ರಾರ್​ಗಳನ್ನೂ ಗೊಂದಲಕ್ಕೆ ನೂಕಿದೆ.

    ಪ್ರಕ್ರಿಯೆ ಹೇಗೆ?: ಕಾವೇರಿ ತಂತ್ರಾಂಶದಲ್ಲಿ ದಸ್ತಾವೇಜು ಅಪ್​ಲೋಡ್ ಮಾಡಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ದಿನಾಂಕ ಆಯ್ಕೆ ಮಾಡಿದಲ್ಲಿ ಸ್ವಯಂಚಾಲಿತವಾಗಿ ಸಮಯ ನಿಗದಿ ಆಗುತ್ತಿದೆ. ಅಂದರೆ ಬೆಳಗ್ಗೆ 10.30ಕ್ಕೆ ಸಮಯ ನಿಗದಿ ಆಗಿದ್ದರೆ 10.30ಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಫೋಟೋ ಮತ್ತು ಬೆರಳಚ್ಚು ಕೊಡಬೇಕಾಗಿದೆ. ನಿಗದಿತ ಸಮಯಕ್ಕೆ ಹೋಗದೆ ಇದ್ದರೆ ದಸ್ತಾವೇಜು ನೋಂದಣಿಗೆ ಅವಕಾಶ ಕೊಡುವುದಿಲ್ಲ. ಮತ್ತೆ ಟೈಮ್ ಸ್ಲಾಟ್ ಪಡೆಯಬೇಕಾದರೆ 24 ಗಂಟೆ ಕಾದು ಬಳಿಕ ದಿನಾಂಕ, ಸಮಯ ನಿಗದಿ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಸಾರ್ವಜನಿಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ದಸ್ತಾವೇಜು ನೋಂದಣಿಗೆ ಎರಡು ಕಡೆ ಪಕ್ಷಗಾರರು ಬರಬೇಕಾದ ಕಾರಣಕ್ಕೆ ಕಚೇರಿಗೆ ಟೈಮ್ ಸ್ಲಾಸ್ಲಾಟ್ ಬುಕ್ ಮಾಡಿಕೊಳ್ಳುವ ಅವಕಾಶ ಕೊಡಬೇಕು. ಆ ಸಮಯದಲ್ಲಿ ನಿಗದಿತ ದಸ್ತಾವೇಜುಗಳು ನೋಂದಣಿಗೆ ಬುಕ್ ಆಗಿದ್ದರೇ ಖಾಲಿ ಇರುವ ಸಮಯ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದ್ದರೆ ಒಳಿತು. ನಿಗದಿತ ಸಮಯದಿಂದ ಹೆಚ್ಚುವರಿ 30 ನಿಮಿಷ ಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.

    ಆದಾಯ ಹೆಚ್ಚಿಸಲು ಸಲಹೆ: ಈವರೆಗೆ ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೂ ದಿನಕ್ಕೆ 50 ರಿಂದ 150 ದಸ್ತಾವೇಜುಗಳು ನೋಂದಣಿ ಆಗುತ್ತಿದ್ದವು. ಟೈಮ್ ಸ್ಲಾಟ್ ಶುರುವಾದ ಬಳಿಕ ಈಪೇಮೆಂಟ್ ಗೇಟ್​ವೇ ಅತಂತ್ರ: ಆನ್​ಲೈನ್​ನಲ್ಲಿಯೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ವ್ಯಾಲೆಟ್, ನೆಟ್​ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್​ಗಳಲ್ಲಿ ಪಾವತಿಸಬೇಕು. ಕಾವೇರಿ 2.0ನಲ್ಲಿ ದಸ್ತಾವೇಜು ನೋಂದಣಿಗೆ ಅಪ್​ಲೋಡ್ ಮಾಡಿರುವ ಅರ್ಜಿಗೆ ಹೋಗಿ ಪೇಮೆಂಟ್ ಮೋಡ್​ಗೆ ಓಕೆ ಮಾಡಿದಾಗ 3 ರಿಂದ 5 ನಿಮಿಷ ಅವಕಾಶ ಇರಲಿದೆ. ತಪು್ಪ ಪಾಸ್​ವರ್ಡ್ ಅಥವಾ ಸರ್ವರ್ ಸಮಸ್ಯೆ ಎದುರಾಗಿ ಸಮಯ ಮುಗಿದರೆ ಮತ್ತೆ ಆ ಅರ್ಜಿ ಪೇಮೆಂಟ್ ಮೂಡ್​ಗೆ ಬರಲು ಐದಾರು ತಾಸು ಬೇಕಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಎಲ್ಲರ ಬಳಿಯೂ ವ್ಯಾಲೆಟ್, ನೆಟ್​ಬ್ಯಾಂಕಿಂಗ್ ಇರುವುದಿಲ್ಲ. ಇದ್ದರೂ ವ್ಯಾಲೆಟ್​ನಲ್ಲಿ ದಿನಕ್ಕೆ 99 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ವರ್ಗಾವಣೆ ಆಗುವುದಿಲ್ಲ. ನೆಟ್​ಬ್ಯಾಂಕಿಂಗ್​ನಲ್ಲಿ ಒಂದೊಂದು ಖಾತೆಗೆ ಒಂದೊಂದು ಲಿಮಿಟೆಷನ್ ಇರಲಿದೆ. ಈ ಬಗ್ಗೆ ಖಾತೆದಾರನಿಗೆ ಮಾಹಿತಿ ಇರುವುದಿಲ್ಲ. ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಲು ಸಾಕಷ್ಟು ಮಂದಿ ವಿಫಲವಾಗಿ ಇಡೀ ದಿನ ಕಾಯಬೇಕಾಗುತ್ತದೆ. ಸಂಖ್ಯೆ 50ಕ್ಕೆ ಕುಸಿದಿದೆ. ಇದರ ಪ್ರಮಾಣ ಹೆಚಾಗಿಸಲು ಕ್ರಮಕೈಗೊಳ್ಳಬೇಕು. ಸದ್ಯ ಬೆಳಗ್ಗೆ 10.30ಕ್ಕೆ ಕಚೇರಿ ತೆರೆದು ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆವರೆಗೆ ಅಂದರೆ ದಿನಕ್ಕೆ ಐದೂವರೆ ತಾಸು ಜನರಿಗೆ ಸೇವೆ ಸಿಗುತ್ತಿದೆ. ಪ್ರತಿ ಕಚೇರಿಯಲ್ಲಿ ನಾಲ್ವರು ಕಂಪ್ಯೂಟರ್ ಆಪರೇಟರ್​ಗಳು ಇದ್ದು,1 ತಾಸಿಗೆ ತಲಾ 4ರಂತೆ ಗಂಟೆಗೆ ನಾಲ್ವರಿಂದ 16 ಆಗಲಿದ್ದು, ದಿನಕ್ಕೆ 88 ದಸ್ತಾವೇಜುಗಳ ನೋಂದಣಿ ಮಾಡುವ ಸಾಮರ್ಥ್ಯವಿದೆ. ಆದರಿಂದ ದಿನಕ್ಕೆ 90 ಜನಕ್ಕೆ ಟೈಮ್ ಸ್ಲಾಟ್ ಕೊಡುವುದರಿಂದ ಜನರು ಕಾಯುವ ಪರಿಸ್ಥಿತಿ ಬರುವುದಿಲ್ಲ. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯವಾಗಿದೆ.

    ತುರ್ತು ಸೇವೆ 15ಕ್ಕೆ ಏರಿಸಿ: ಪ್ರಸ್ತುತ ದಿನಕ್ಕೆ ಒಂದು ಕಚೇರಿಗೆ ಕೇವಲ 3 ತುರ್ತು ಸೇವೆ ಎಂದು ನಿಗದಿ ಮಾಡಿ ಟೈಮ್ ಸ್ಲಾಟ್ ಇಲ್ಲದೆ ದಸ್ತಾವೇಜು ನೋಂದಣಿ ಸೇವೆ ಒದಗಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್​ಗೆ ಕೊಡಲಾಗಿದೆ. ಇದರ ಪ್ರಮಾಣ 15ಕ್ಕೆ ಏರಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ರೋಗಿಗಳು, ವಯಸ್ಸಾದವರು, ವಿದೇಶದಿಂದ ಬರುವರು, ಅತಿ ಗಣ್ಯರು ಇನ್ನಿತರ ಕಾರಣದಿಂದ ತುರ್ತು ಸೇವೆ ಕೊಡಬೇಕಿದೆ. ಆದರಿಂದ 3 ರಿಂದ 15ಕ್ಕೆ ಏರಿಸಬೇಕೆಂಬ ಕೇಳಿಬಂದಿದೆ.

    ಪೇಮೆಂಟ್ ಗೇಟ್​ವೇ ಅತಂತ್ರ: ಆನ್​ಲೈನ್​ನಲ್ಲಿಯೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ವ್ಯಾಲೆಟ್, ನೆಟ್​ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್​ಗಳಲ್ಲಿ ಪಾವತಿಸಬೇಕು. ಕಾವೇರಿ 2.0ನಲ್ಲಿ ದಸ್ತಾವೇಜು ನೋಂದಣಿಗೆ ಅಪ್​ಲೋಡ್ ಮಾಡಿರುವ ಅರ್ಜಿಗೆ ಹೋಗಿ ಪೇಮೆಂಟ್ ಮೋಡ್​ಗೆ ಓಕೆ ಮಾಡಿದಾಗ 3 ರಿಂದ 5 ನಿಮಿಷ ಅವಕಾಶ ಇರಲಿದೆ. ತಪು್ಪ ಪಾಸ್​ವರ್ಡ್ ಅಥವಾ ಸರ್ವರ್ ಸಮಸ್ಯೆ ಎದುರಾಗಿ ಸಮಯ ಮುಗಿದರೆ ಮತ್ತೆ ಆ ಅರ್ಜಿ ಪೇಮೆಂಟ್ ಮೂಡ್​ಗೆ ಬರಲು ಐದಾರು ತಾಸು ಬೇಕಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಎಲ್ಲರ ಬಳಿಯೂ ವ್ಯಾಲೆಟ್, ನೆಟ್​ಬ್ಯಾಂಕಿಂಗ್ ಇರುವುದಿಲ್ಲ. ಇದ್ದರೂ ವ್ಯಾಲೆಟ್​ನಲ್ಲಿ ದಿನಕ್ಕೆ 99 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ವರ್ಗಾವಣೆ ಆಗುವುದಿಲ್ಲ. ನೆಟ್​ಬ್ಯಾಂಕಿಂಗ್​ನಲ್ಲಿ ಒಂದೊಂದು ಖಾತೆಗೆ ಒಂದೊಂದು ಲಿಮಿಟೆಷನ್ ಇರಲಿದೆ. ಈ ಬಗ್ಗೆ ಖಾತೆದಾರನಿಗೆ ಮಾಹಿತಿ ಇರುವುದಿಲ್ಲ. ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಲು ಸಾಕಷ್ಟು ಮಂದಿ ವಿಫಲವಾಗಿ ಇಡೀ ದಿನ ಕಾಯಬೇಕಾಗುತ್ತದೆ.

    ತಪ್ಪಾಗಿ ರಿಜಿಸ್ಟ್ರೇಷನ್: ಮುಮುದ್ರಾಂಕ ಶುಲ್ಕ ಮತ್ತು ಪತ್ರದ ಬಗ್ಗೆ ಸ್ವಲ್ಪವೂ ಜ್ಞಾನ ಇಲ್ಲದವರು ದಾಖಲಾತಿಗಳನ್ನು ತಪ್ಪಾಗಿ ಅಪ್​ಲೋಡ್ ಮಾಡಿ ರಿಜಿಸ್ಟರ್ ಮಾಡುತ್ತಿರುವುದರಿಂದ ಕ್ರಯದಾರರಿಗೆ ನಾನಾ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಸಿಟಿಜನ್ ಲಾಗಿನ್ ತೆಗೆಯಬೇಕೆಂಬ ಒತ್ತಾಯ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕೇಳಿಬರುತ್ತಿದೆ.

    ಸೇವ್ ಆಗೋದಕ್ಕೂ ಪ್ರಾಬ್ಲಂ: ದಸ್ತಾವೇಜು ನೋಂದಣಿಗೆ ಮಾಹಿತಿ ಮತ್ತು ದಾಖಲೆ ಅಪ್​ಲೋಡ್ ಮಾಡುವ ಸಮಯದಲ್ಲಿ ಟೈಮ್ ಮುಗಿದರೆ ಲಾಗಿನ್ ಆಫ್ ಆಗಲಿದೆ. ಕೆಲ ದಸ್ತಾವೇಜುಗಳ ನೋಂದಣಿಯಲ್ಲಿ ಇಬ್ಬರು ಇದ್ದರೆ ಪಿತ್ರಾರ್ಜಿತ ಆಸ್ತಿಗಳಲ್ಲಿ 10 ರಿಂದ 30 ಜನರ ಕುಟುಂಬ ಇರಲಿದೆ.ಇಷ್ಟು ಮಂದಿಯ ಹೆಸರು, ವಿಳಾಸ ಮತ್ತು ಆಧಾರ್ ಅಪ್​ಲೋಡ್ ಮಾಡಬೇಕಾದರೆ ಸಾಕಷ್ಟು ಸಮಯ ಬೇಕಾಗಿದೆ. ಈಗ ಕೊಟ್ಟಿರುವ ಸಮಯ ಸಾಕಾಗುತ್ತಿಲ್ಲ. ಅಲ್ಲದೆ, ಒಮ್ಮೆ ಟೈಮ್ ಮುಗಿದು ಲಾಗಿನ್ ಲಾಕ್ ವಾಪಸ್ ಬಂದರೇ ಮತ್ತೆ ಹೊಸದಾಗಿ ಮಾಹಿತಿ ಅಪ್​ಲೋಡ್ ಮಾಡಬೇಕಿದೆ. ಆದರಿಂದ ಸಮಯ ವಿಸ್ತರಣೆ ಮಾಡಬೇಕು. ಇಲ್ಲ ಕನಿಷ್ಠ ಪಕ್ಷ ತುಂಬಿರುವ ಮಾಹಿತಿ ಸೇವ್ ಆಗಿ ಅಲ್ಲಿಂದ ಮುಂದುವರಿಸುವ ಅವಕಾಶ ಆದರೂ ಕೊಡಬೇಕೆಂಬುದು ಒತ್ತಾಯ ಕೇಳಿಬಂದಿದೆ.

    ಆಗಬೇಕಿರುವುದು

    • ತಂತ್ರಾಂಶ ಸಮಸ್ಯೆ ಬಗ್ಗೆ ಸಚಿವರು, ಮೇಲಧಿಕಾರಿಗಳು ಗಮನಹರಿಸಬೇಕು
    • ಆರ್​ಡಿಪಿಆರ್ ರೆಫರೆನ್ಸ್ ನಂಬರ್ ಜನರೇಟ್ ಸಕಾಲಕ್ಕೆ ಆಗದಿದ್ದಾಗ ಮೇಲಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು
    • ಸಾರ್ವಜನಿಕರಿಗೆ ಅಪ್​ಲೋಡ್ ಮಾಡಲು ನೀಡಿರುವ ಸಿಟಿಜನ್ ಲಾಗಿನ್ ತೆರವು ಮಾಡಬೇಕು

    ಗೊಂದಲವೋ ಗೊಂದಲ

    • ದಸ್ತಾವೇಜು ನೋಂದಣಿಗೆ ಜನರ ಪರದಾಟ
    • ನಿಗದಿತ ಸಮಯ (ಟೈಮ್್ಲಾಟ್) ಪ್ರಯೋಗ
    • ಪಾಸ್​ಪೋರ್ಟ್ ಕಚೇರಿ ಮಾದರಿ ಸೇವೆ
    • ಸಮಯ ಮೀರಿ ಹೋದರೆ ಇಲ್ಲ ಅವಕಾಶ
    • ಮತ್ತೆ ಸಮಯಕ್ಕೆ 24 ಗಂಟೆ ಕಾಯಬೇಕು
    • ತುರ್ತು ನೋಂದಣಿಗೆ ಬಂದವರಿಗೆ ಸಮಸ್ಯೆ

    ಏನೆಲ್ಲ ಅವಾಂತರ?

    • ಸಿಟಿಜನ್ ಲಾಗಿನ್ ಅಸಮರ್ಪಕ
    • ಜೆ ಫಾಮ್ರ್ ಜನರೇಟ್ ಆಗುವುದಿಲ್ಲ
    • ಇಸಿ (ಋಣಭಾರ ಪ್ರಮಾಣಪತ್ರ) ಬರಲ್ಲ
    • ದಾಖಲಾತಿ ಅಪ್​ಲೋಡ್ ಸಮಸ್ಯೆ
    • ಅಪ್ಲೋಡ್ ಲೇಟಾದರೆ ಸಮಯ ಸಾಲಲ್ಲ
    • ಲಾಗಿನ್ ಸಮಸಯ ವಿಸ್ತರಿಸಲು ಆಗ್ರಹ
    • ಸಕಾಲಕ್ಕೆ ಶುಲ್ಕ ಪಾವತಿಯೂ ಆಗಲ್ಲ
    • ಶುಲ್ಕ ಮರುಪಾವತಿ ವ್ಯವಸ್ಥೆ ಇಲ್ಲ
    • ಅಸಮರ್ಪಕ ದಾಖಲಾತಿ ಅಪ್​ಲೋಡ್

    ಕಾವೇರಿ-2 ಸರ್ವರ್ ಸಮಸ್ಯೆ ಇಲ್ಲ. ಆದರೆ ಸರ್ಕಾರ ಸಮಯ ನಿಗದಿ ಮಾಡಿದೆ. ಸಮಯಕ್ಕೆ ಸರಿಯಾಗಿ ಖಾತೆದಾರರು ಬಾರದಿದ್ದರೆ ಮರುದಿನ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾಗುತ್ತದೆ. ಮೊದಲು ಸಮಯ ಹೊಂದಾಣಿಕೆಗೆ ಅವಕಾಶವಿತ್ತು. ಅದನ್ನು ತೆಗೆಯಲಾಗಿದೆ. ಉಳಿದಂತೆ ಅರ್ಜಿ ಪ್ರಕ್ರಿಯೆ ಆದ ಬಳಿಕ ಖಾತೆದಾರರ ಹೊಂದಾಣಿಕೆ ಕೊರತೆಯಿಂದ ರಿಜಿಸ್ಟ್ರೇಷನ್ ಆಗದಿದ್ದರೆ ಪಾವತಿಸಿದ ಶುಲ್ಕ ವಾಪಸ್ ಬರುವುದಿಲ್ಲ. ತಂತ್ರಾಂಶದಲ್ಲಿ ಅದಕ್ಕೆ ಅವಕಾಶವಿಲ್ಲ.

    | ಗಿರೀಶ್, ಶಿವಮೊಗ್ಗ ಜಿಲ್ಲಾ ನೋಂದಣಾಧಿಕಾರಿ

    ಕಾವೇರಿ-2ಗೆ ಹೋಲಿಸಿದರೆ ಕಾವೇರಿ-1 ತಂತ್ರಾಂಶವೇ ತುಂಬ ಚೆನ್ನಾಗಿತ್ತು. ಎಲ್ಲವನ್ನೂ ಆನ್​ಲೈನ್ ಮಾಡಲು ಹೊರಟು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಕಾವೇರಿ-2ರಲ್ಲಿ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಜನರು ಬಂದು ಬರಿಗೈಯಲ್ಲೇ ಹೋಗುವಂತಾಗಿದೆ.

    | ಜಿ.ಎಂ.ಸುರೇಶ್​ಬಾಬು ಶಿವಮೊಗ್ಗ ಜಿಲ್ಲಾ ಅಧಿಕೃತ ಪತ್ರ ಬರಹಗಾರರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts