More

    ಮುಂದುವರೆದ ಕಾವೇರಿ ಹೋರಾಟ: ಮಹಿಳಾ ಸಂಘಟನೆಗಳಿಂದ ಬೆಂಬಲ

    ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಬುಧವಾರ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.
    ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಬಲಿಸಿ ಸ್ತ್ರೀ ಶಕ್ತಿ ಹಾಗೂ ವಿವಿಧ ಸಂಘಟನೆ ಮಹಿಳೆಯರು, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡರು, ಮಂಡ್ಯ ನಗರಸಭೆ ಸದಸ್ಯರು ಭಾಗವಹಿಸಿದರು. ಮಾತ್ರವಲ್ಲದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,
    ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಮಾತನಾಡಿ, ಮಾಜಿ ಸಂಸದ ಡಾ.ಜಿ.ಮಾದೇಗೌಡ ನೇತೃತ್ವದ ಕಾವೇರಿ ಹೋರಾಟವನ್ನ ಸ್ಮರಿಸಿದ ಅವರು ಮೌನಚರಣೆ ಮೂಲಕ ಗೌರವ ಸಮರ್ಪಿಸಿದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ಹಳೆ ಒಪ್ಪಂದ ಮರು ಜೀವ ಪಡೆದು ಅದರ ದಾಖಲಾತಿ ಅಂಕಿ ಅಂಶದ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಈ ನಿಟಟಿನಲ್ಲಿ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಮುನ್ನಡೆಯ ಬೇಕಾಗಿದೆ ಎಂದರು.
    ಬೆಂಗಳೂರಿನಲ್ಲಿರುವ ಎಲ್ಲ ಭಾಷಿಕರು ಕಾವೇರಿ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಸರ್ವರಿಗೂ ಕಾವೇರಿ ನೀರು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಪರಿಹಾರ ರೂಪಿಸಬೇಕಾಗಿದೆ. ರೈತರಿಗೂ ಮುಸ್ಲಿಂ ಬಾಂಧವರಿಗೂ ವ್ಯವಹಾರಿಕ ಸಂಬಂಧ ಇದೆ. ಅನ್ನದಾತರ ಸಂಕಷ್ಟಕ್ಕೆ ಸಿಲುಕಿದರೆ ಮುಸ್ಲಿಂ ಜನತೆಗೂ ಕಷ್ಟವಾಗಲಿದೆ. ಆದ್ದರಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಮುದಾಯದ ಎಲ್ಲರೂ ಒಗ್ಗೂಡಿ ವಿರೋಧಿಸೋಣ. ಕಾವೇರಿ ಹೋರಾಟ ಬೆಂಬಲಿಸೋಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts