More

    ಅಪರೂಪದ ಮೀನು, ಏಡಿ ಬಲೆಗೆ

    ಉಡುಪಿ: ಮಲ್ಪೆ ಆಳ ಸಮುದ್ರ ಮೀನುಗಾರರ ಬಲೆಗೆ ಅಪರೂಪದ ಮೀನುಗಳು ಬಿದ್ದಿವೆ.

    ಪ್ರಶಾಂತ್ ಕೋಟ್ಯಾನ್ ಮಾಲೀಕತ್ವದ ‘ಹನುಮ ಶಾರದೆ’ ಬೋಟ್‌ನಲ್ಲಿ ನೀಲಿ ಮತ್ತು ಹಳದಿ ಬಣ್ಣ, ಹಳದಿ ಬಾಲದ ಎರಡು ಮೀನುಗಳು ಹಾಗೂ ಇನ್ನೊಂದು ಬೋಟ್‌ನಲ್ಲಿ ಸ್ಪ್ಯಾನರ್ ಕ್ರಾಬ್ ಎಂಬ ಅಪರೂಪದ ಏಡಿ ಮಂಗಳವಾರ ಬೆಳಗ್ಗೆ ಬೋಟ್‌ನಿಂದ ಮೀನು ಖಾಲಿ ಮಾಡುವಾಗ ಸಿಕ್ಕಿವೆ.

    ನೀಲಿ ಮತ್ತು ಹಳದಿ ಗೊಬ್ಬರ ಮೀನಿನ ವೈಜ್ಞಾನಿಕ ಹೆಸರು ಎಪೆನೆಫೆಲಸ್ ಪ್ಲಾವೊಸಿರುಲಸ್. ರೆಕ್ಕೆ ಮತ್ತು ಬಾಲ ಹಳದಿ ಬಣ್ಣ ಹೊಂದಿದ್ದು, ಈ ಮೀನು ಹವಳ ಬಂಡೆಗಳಲ್ಲಿ ವಾಸವಿರುತ್ತದೆ. ಅರಬ್ಬಿ ಸಮುದ್ರ ಹಾಗೂ ಹಿಂದು ಮಹಾಸಾಗರದಲ್ಲಿ 10 ಮೀಟರ್‌ನಿಂದ 150 ಮೀಟರ್ ಆಳದಲ್ಲಿ ಕಂಡುಬರುತ್ತದೆ. ಒಂದು ಮೀಟರ್‌ನಷ್ಟು ಬೆಳೆಯುವ ಈ ಮೀನು 10ರಿಂದ 15 ಕೆ.ಜಿ. ತೂಕ ಇರುತ್ತದೆ. ಸಣ್ಣ ಮೀನು, ಏಡಿ, ಸಿಗಡಿ, ಬೊಂಡಾಸ್, ಆಕ್ಟೋಪಸ್ ಇದರ ಆಹಾರ.

    ಹಳದಿ ಬಾಲದ ಗೊಬ್ಬರ ಮೀನಿನ ವೈಜ್ಞಾನಿಕ ಹೆಸರು ವೆರಿಯೋಲಾ ಲೌಟಿ. ಹವಳ ಬಂಡೆಗಳ ಕಲ್ಲುಗಳಲ್ಲಿ ವಾಸ. ಹಿಂದು ಮಹಾಸಾಗರ, ಪೆಸಿಫಿಕ್ ಸಾಗರ, ಅರಬ್ಬಿ ಸಮುದ್ರ ಕೆಂಪು ಸಮುದ್ರದಲ್ಲಿ 15 ಮೀಟರ್‌ನಿಂದ 300 ಮೀಟರ್ ಆಳದಲ್ಲಿ ಕಂಡುಬರುತ್ತದೆ. ಮೀನು, ಏಡಿ, ಆಕ್ಟೋಪಸ್, ಸಿಗಡಿ ಇದರ ಆಹಾರ. ಗರಿಷ್ಠ 12 ಕೆ.ಜಿ. ತೂಕ ಮತ್ತು 80 ಸೆಂ.ಮೀ. ಉದ್ದ ಬೆಳೆಯುತ್ತದೆ. ಈ ಮೀನು ರುಚಿಕರವಾಗಿದ್ದು, ತಿನ್ನಲು ಯೋಗ್ಯ ಎಂದು ಕಾರವಾರ ಕರ್ನಾಟಕ ವಿಶ್ವವಿದ್ಯಾನಿಲಯದ ಕಡಲಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದಾರೆ.

    ಸ್ಪ್ಯಾನರ ಕ್ರಾಬ್ ಅಪರೂಪದ ಏಡಿ: ಪತ್ತೆಯಾದ ಅಪರೂಪದ ಏಡಿ ಹೆಸರು ಸ್ಪಾೃನರ ಕ್ರಾೃಬ್. ಕರ್ನಾಟಕ ಕಡಲತೀರಕ್ಕೆ ಅಪರೂಪದ ಏಡಿ ಇದಾಗಿದ್ದು, ಕಪ್ಪೆ ಆಕೃತಿ ಹೊಂದಿದೆ. ಆಫ್ರಿಕಾ ಮತ್ತು ಹವಾಯಿ ದ್ವೀಪ, ಗ್ರೇಟ್ ಬ್ಯಾರಿಯರ್ ರೀಫ್‌ಗಳಲ್ಲಿ ಸಿಗುವಂತಹ ಏಡಿ. ಸಮುದ್ರದ ಮರಳು ಇರುವ ತಳದಲ್ಲಿ 100 ಮೀಟರ್ ಆಳದವರೆಗೆ ಜೀವಿಸುತ್ತದೆ. ಏಳರಿಂದ ಒಂಬತ್ತು ವರ್ಷ ಜೀವಿಸುವ ಏಡಿ. 400- 900 ಗ್ರಾಂ ತೂಕ ಹೊಂದಿರುತ್ತದೆ. ಶೆಟ್ಲಿ ಕಪ್ಪೆಚಿಪ್ಪು ಮೀನು ಇದರ ಆಹಾರವಾಗಿದ್ದು, ಆಸ್ಟ್ರೇಲಿಯದಲ್ಲಿ ಇದಕ್ಕೆ ಭಾರಿ ಬೇಡಿಕೆ. ಈ ಹಿಂದೆ 2006ರಲ್ಲಿ ಪಂಬನ್ ಕಡಲತೀರದಲ್ಲಿ ಸಿಕ್ಕಿರುವ ಮಾಹಿತಿ ಇದೆ ಎನ್ನುತ್ತಾರೆ ಡಾ.ಶಿವಕುಮಾರ್ ಹರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts