More

    ಜಾತಿಗಣತಿ ವರದಿ ಸ್ವೀಕರಿಸಿದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ: ತಮ್ಮ ಪಕ್ಷಕ್ಕೆ ಎಚ್ಚರಿಕೆ ಕೊಟ್ಟ ಶಾಮನೂರು ಶಿವಶಂಕರಪ್ಪ

    ಬೆಂಗಳೂರು:ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದಲ್ಲಿ ಸಿದ್ಧಪಡಿಸಲಾಗಿದ್ದ ಅವೈಜ್ಞಾನಿಕ ಜಾತಿಗಣತಿ ವರದಿಯ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತೆ ಕಿಡಿಕಾರಿದೆ.

    ವರದಿಯಲ್ಲಿ ಕೆಲವೊಂದು ಲೋಪದೋಷಗಳಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಸರ್ಕಾರ ಅಂಗಿಕರಿಸಬಾರದು. ವರದಿಯನ್ನು ಹಿಂದೆಯೂ ವಿರೋಧಿಸಿಕೊಂಡು ಬಂದಿದ್ದೇವೆ. ಮುಂದೆಯೂ ವಿರೋಧಿಸುತ್ತೇವೆ. ವರದಿಯ ಮೂಲ ಪ್ರತಿ ನಾಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿಲ್ಲ. ಎಲ್ಲ ಕುಳಿತು ವರದಿ ತಯಾರಿಸಲಾಗಿದೆ. ಒಕ್ಕಲಿಗ ಸಮುದಾಯದ ಶಾಸಕರಂತೆ ನಮ್ಮ ಸಮುದಾಯದ ಶಾಸಕರು, ಸಚಿವರಿಂದ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.

    ಪ್ರತ್ಯೇಕ ಧರ್ಮದ ಹಿಂದೆ ಬಿದ್ದವರಲ್ಲ ಸೋತು ಹೋಗಿರುವ ಮಾದರಿಯಂತೆ ಜಾತಿ ಗಣತಿ ವರದಿ ಸ್ವೀಕರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ.100% ತೊಂದರೆ ಆಗುತ್ತದೆ ಎಂದು ಪರೋಕ್ಷವಾಗಿ ತಮ್ಮ ಪಕ್ಷಕ್ಕೆ ಎಚ್ಚರಿಕೆ ನೀಡಿದ ಶಾಮನೂರು ಶಿವಶಂಕರಪ್ಪ, ಈಗಾಗಲೇ ಬಿಜೆಪಿ, ಜೆಡಿಎಸ್ ವಿರೋಧಿಸಿವೆ. ಈಗಾಗಲೇ ಮೌಖಿಕವಾಗಿ ಸಿಎಂ ಸಿದ್ದರಾಮಯ್ಯ ಬಳಿ ಚರ್ಚೆ ನಡೆಸಲಾಗಿದೆ. ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡಿ ವರದಿ ಸ್ವೀಕರಿಸದಂತೆ ಮನವಿ ಮಾಡುತ್ತೇವೆ ಎಂದರು.

    ಇದನ್ನೂ ಓದಿ: ಡಿ.2ಕ್ಕೆ ಡಾ.ಭೀಮಣ್ಣ ಖಂಡ್ರೆ ಜನ್ಮಶತಮಾನೋತ್ಸವ
    2015ರಲ್ಲಿ ಸಿದ್ಧಪಡಿಸಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿತ ಜಾತಿಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಶಗಳಿವೆ. ಹೀಗಾಗಿ, ಕೃತಕ ಬುದ್ದಿಮತ್ತೆ(ಎಐ) ತಂತ್ರಜ್ಞಾನ, ಆಧಾರ್ ಬಳಸಿಕೊಂಡು ಹೊಸ ಸಮೀಕ್ಷೆ ನಡೆಸಬೇಕು. ಹಲವು ಮನೆಗಳಿಗೆ ಭೇಟಿ ಮಾಡದೆ ವರದಿ ಸಿದ್ಧಪಡಿಸಿರುವ ಬಗ್ಗೆ ದೂರುಗಳಿವೆ. ಈ ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ತೋರಿಸಲಾಗಿದೆ. ಇದರಿಂದಾಗಿ ಸಮಾಜಕ್ಕೆ ತೀವ್ರ ಸ್ವರೂಪದಲ್ಲಿ ನಷ್ಟವಾಗಲಿದೆ. ನಾವು ಜಾತಿಗಣತಿ ವಿರೋಧಿಗಳಲ್ಲ. ಯಾವುದೇ ವರದಿ ವೈಜ್ಞಾನಿಕವಾಗಿರಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts