More

    ಜಾತಿ ಜನಗಣತಿ ವಾಸ್ತವಾಂಶದಿಂದ ಕೂಡಿಲ್ಲ: ಖಂಡ್ರೆ

    ಬೆಂಗಳೂರು: ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ವಾಸ್ತವಾಂಶದ ಆಧಾರದ ಮೇಲೆ ಗಣತಿ ಆಗಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

    ವಿಕಾಸ ಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಜನಗಣತಿಗೆ ನಾವು ವಿರೋಧ ಮಾಡಿಲ್ಲ. ವಾಸ್ತವಾಂಶದ ಆಧಾರದ ಮೇಲೆ ಗಣತಿ ಆಗಿಲ್ಲ. ವೀರಶೈವ ಲಿಂಗಾಯತ ಒಳ ಪಂಗಡಗಳು ಸರ್ಕಾರಿ ಸೌಲಭ್ಯಕ್ಕೆ ಪಂಗಡ ನಮೂದು ಮಾಡಿಲ್ಲ. ಹೊಸದಾಗಿ ಗಣತಿ ಮಾಡುವ ಕುರಿತು ಸರ್ಕಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನ ಒತ್ತಾಯಿಸಲಿದೆ ಎಂದರು.

    10 ವರ್ಷಕ್ಕೊಮ್ಮೆ ಜನಗಣತಿ ನಡೆಯಬೇಕು. ಈಗಾಗಲೇ ಜಾತಿ ಜನಗಣತಿ ಆಗಿ ಏಳು ವರ್ಷ ಆಗಿದೆ. ಆ ಗಣತಿ ಬಗ್ಗೆ ಅನೇಕರಿಗೆ ವಿಶ್ವಾಸವಿಲ್ಲ. ಸರಿಯಾಗಿ ಗಣತಿ ಮಾಡಿಲ್ಲ ಎಂಬ ಆರೋಪಗಳೂ ಇವೆ. ಹಾಗಾಗಿ ಈಗಾಗಲೇ ನಾವು ಮುಖ್ಯಮಂತ್ರಿಗಳಿಗೆ ವೀರಶೈವ ಮಹಾಸಭಾದ ನಿಲುವನ್ನು ತಿಳಿಸಿದ್ದೇವೆ. ಮಹಾ ಅಧಿವೇಶನದಲ್ಲೂ ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಬಿಜೆಪಿಯವರಿಗೆ ಅಧಿಕಾರ ನೆತ್ತಿಗೇರಿದೆ

    ಬಿಜೆಪಿಗೆ ಅಧಿಕಾರ ನೆತ್ತಿಗೇರಿದೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಸಂಸತ್‌ನಲ್ಲಿ ನಡೆದ ಘಟನೆ ಬಗ್ಗೆ ಚರ್ಚೆಗೆ ಅವಕಾಶ ಕೊಡದಿದ್ದರೆ ಹೇಗೆ? ಬಿಜೆಪಿ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಜನಪ್ರತಿನಿಧಿಗಳು ಚರ್ಚೆಗೆ ಅವಕಾಶ ಕೊಡದಿದ್ದರೆ ಹೇಗೆ? ಎಂದು ಕಿಡಿಕಾರಿದರು.
    ಬಿಜೆಪಿ ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ವಿದ್ಯುತ್, ಮನೆ ಕೊಟ್ಟರಾ? ಗುಡಿಸಲು ಮುಕ್ತ ಮಾಡಿದ್ರಾ? ಬರೀ ಸುಳ್ಳು ಹೇಳುವುದು ಅವರ ಕೆಲಸ. ಜನರಿಗೆ ಯಾವುದೇ ವಿಷಯವಾಗಿ ಸ್ಪಷ್ಟ ಉತ್ತರ ಕೊಡುವುದಿಲ್ಲ. ದೇಶದ ಏಕತೆ ಅಖಂಡತೆ ಸಮಗ್ರತೆ ಅಪಾಯದಲ್ಲಿದೆ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕಿದೆ ಎಂದು ಖಂಡ್ರೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts