More

    ಅಶ್ಲೀಲ ವಿಡಿಯೋ ಕರೆ ಮಾಡಿ ಇನ್​ಸ್ಪೆಕ್ಟರನ್ನೇ ಬ್ಲ್ಯಾಕ್​ಮೇಲ್ ಮಾಡೋಕೆ ಶುರುಮಾಡಿದಳಾಕೆ!

    ಬೆಂಗಳೂರು : ಅಶ್ಲೀಲ ವಿಡಿಯೋ ಕರೆ ಮಾಡಿದ ಬಳಿಕ ಅದರ ಸ್ಕ್ರೀನ್ ಶಾಟ್​ ಕಳುಹಿಸಿ ದುಡ್ಡು ಕೊಡು ಅಂತ ಇನ್​ಸ್ಪೆಕ್ಟರ್ ಒಬ್ಬರನ್ನು ಬ್ಲ್ಯಾಕ್​ಮೇಲ್ ಮಾಡೋದಕ್ಕೆ ಶುರುಮಾಡಿದಳಾಕೆ. ಗುರುತುಪರಿಚಯವಿರದ ಮಹಿಳೆಯ ಈ ಕಾಟಕ್ಕೆ ಬೆಚ್ಚಿ ಬಿದ್ದು ಅವರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಇನ್​ಸ್ಪೆಕ್ಟರ್ ಸಿ.ದಯಾನಂದ ಈ ಕುರಿತು ದೂರು ದಾಖಲಿಸಿದವರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೊಬೈಲ್ ನಂಬರ್ ಆಧರಿಸಿ ತನಿಖೆ ಕೈಗೊಂಡಿರುವುದಾಗಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಜನತೆಗೆ ಸಾರಿಗೆ ಸಂಕಷ್ಟ: ಸರ್ಕಾರಿ ಸಿಬ್ಬಂದಿಯಾಗಿ ಪರಿಗಣಿಸಲು ನೌಕರರ ಬಿಗಿಪಟ್ಟು, ರಾಜ್ಯಕ್ಕೆ ಮತ್ತೆ ಬಂದ್ ಬಿಸಿ

    ಡಿಸೆಂಬರ್ 8ರ ರಾತ್ರಿ 8.30ರಲ್ಲಿ ಅಪರಿಚಿತ ಮೊಬೈಲ್ ನಂಬರ್​ನಿಂದ ಇನ್​ಸ್ಪೆಕ್ಟರ್ ವಾಟ್ಸ್​ಆಪ್​ನಲ್ಲಿ ವಿಡಿಯೋ ಕಾಲ್ ಬಂದಿದ್ದು, ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಮಹಿಳೆ ಅಶ್ಲೀಲ ವಿಡಿಯೋವನ್ನು ತೋರಿಸುತ್ತಿದ್ದು, ತಕ್ಷಣ ದಯಾನಂದ್ ಕರೆಯನ್ನು ಕಟ್ ಮಾಡಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ಆಕೆ ಆ ವಿಡಿಯೋ ಕರೆಯ ಸ್ಕ್ರೀನ್ ಶಾಟ್ ತೆಗೆದು ಇನ್​ಸ್ಪೆಕ್ಟರ್ ಮೊಬೈಲ್​ಗೆ ವಾಟ್ಸ್​ಆಪ್​ನಲ್ಲಿ ಕಳುಹಿಸಿದ್ದು, 11 ಸಾವಿರ ರೂ. ನೀಡುವಂತೆ ಬೇಡಿಕೆ ಒಡ್ಡಿದ್ದಾರೆ. ಇಲ್ಲವಾದರೆ, ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿ ಸ್ನೇಹಿತರಿಗೆ ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂಬುದು ದೂರಿನ ಸಾರಾಂಶ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ನರ್ಸ್​ಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಪ್ರಿಯಕರನಿಗೆ ಕಳುಹಿಸುತ್ತಿದ್ದಳಾಕೆ: ಮೊಬೈಲಲ್ಲಿದ್ದವು ನೂರಾರು ವಿಡಿಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts