More

    25 ಲಕ್ಷ ರೂಪಾಯಿ ಪ್ರೈಸ್ ಬಂದಿದೆ ಎಂದು ಬ್ಲ್ಯಾಕ್​ಮೇಲ್ ಶುರುಮಾಡಿದ್ರು!

    ಬೆಂಗಳೂರು: ಐಫೋನ್ ಬಳಸುತ್ತಿದ್ದ ಮಹಿಳೆಗೆ 25 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿರುವುದಾಗಿ ನಂಬಿಸಿರುವ ಅಪರಿಚಿತ ದುಷ್ಕರ್ವಿುಗಳು ಆಕೆಯಿಂದ 49 ಸಾವಿರ ರೂ. ಪಡೆದಿದ್ದಲ್ಲದೇ ಮತ್ತೆ ಹಣ ಕೊಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ.

    ವಸಂತನಗರ ನಿವಾಸಿ ಸಂತ್ರಸ್ತ ಮಹಿಳೆಯ ಪತಿ ಕೊಟ್ಟ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೇಂದ್ರ ವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ ಕೆಲ ತಿಂಗಳಿಂದ ಐಫೋನ್ ಬಳಸುತ್ತಿದ್ದಾರೆ. ಆ. 25ರಂದು ವಿವಿಧ ನಂಬರ್​ಗಳಿಂದ ಕರೆ ಮಾಡಿದ್ದ ಅಪರಿಚಿತರು, 25 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿರುವುದಾಗಿ ತಿಳಿಸಿದ್ದರು. ಬಹುಮಾನ ಗೆದ್ದಿರುವಂತೆ ಜಾಹೀರಾತನ್ನು ವ್ಯಾಟ್ಸ್​ಆಪ್​ಗೆ ಕಳುಹಿಸಿದ್ದರು. ನೋಂದಣಿ ಮಾಡಿಸಿದರೆ ಬಹುಮಾನ ಸಿಗುತ್ತದೆ ಎಂದು ನಂಬಿಸಿ 49 ಸಾವಿರ ರೂ.ಗಳನ್ನು ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

    ಇದನ್ನೂ ಓದಿ: ನಟಿ ಶರ್ವಿುಳಾ ಮಾಂಡ್ರೆಗೆ ಕ್ಲೀನ್​ಚಿಟ್: ಹಾಗಾದ್ರೆ ಆರೋಪಿ ಯಾರು?

    ಮರುದಿನ ಮತ್ತೆ ಕರೆ ಮಾಡಿದ್ದ ವಂಚಕರು, ನಿಮ್ಮ ಫೋನ್ ಹ್ಯಾಕ್ ಮಾಡಿದ್ದೇವೆ. ಮೊಬೈಲ್​ನಲ್ಲಿದ್ದ ನಿಮ್ಮ ಫೋಟೋಗಳನ್ನು ಸಂಗ್ರಹಿಸಿದ್ದೇವೆ. ಇನ್ನಷ್ಟು ಹಣ ಕಳುಹಿಸಿ. ಇಲ್ಲವಾದರೆ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ಕಳೆಯುವುದಾಗಿ ಬೆದರಿಸಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆ, ನಡೆದ ವಿಚಾರವನ್ನು ಪತಿಗೆ ತಿಳಿಸಿದ್ದಾರೆ. ಬಳಿಕ ಪತಿ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕದಿರೇನಹಳ್ಳಿ​ವರೆಗೆ ಹೋಗೋಣ ಅಂದ್ರು: ಚಾಲಕನ ದಬ್ಬಿ ಆಟೋ ಸಮೇತ ಪರಾರಿಯಾದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts