More

    ಕದಿರೇನಹಳ್ಳಿ​ವರೆಗೆ ಹೋಗೋಣ ಅಂದ್ರು: ಚಾಲಕನ ದಬ್ಬಿ ಆಟೋ ಸಮೇತ ಪರಾರಿಯಾದ್ರು

    ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಆಟೋ ಏರಿದ ದರೋಡೆಕೋರರು ವೃದ್ಧ ಆಟೋ ಚಾಲಕನನ್ನು ಬೆದರಿಸಿ ಹಣ ಸುಲಿಗೆ ಮಾಡಿ ವಾಹನ ಸಮೇತ ಪರಾರಿಯಾಗಿದ್ದಾರೆ.

    ಕಸ್ತೂರಿನಗರ ಪೈಪ್​ಲೈನ್ ನಿವಾಸಿ ನಂಜಯ್ಯ (60) ದರೋಡೆಗೆ ಒಳಗಾದವರು. ಆ.27ರ ರಾತ್ರಿ 10.50ರಲ್ಲಿ ಬಾಡಿಗೆ ಮುಗಿಸಿಕೊಂಡು ಇಸ್ರೋ ಲೇಔಟ್ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಇಬ್ಬರು ವ್ಯಕ್ತಿಗಳು ಕದಿರೇನಹಳ್ಳಿ ಪಾರ್ಕ್​ವರೆಗೆ ಬಾಡಿಗೆಗೆ ಬರುವುದಾಗಿ ಹೇಳಿದ್ದಾರೆ. ಅವರನ್ನು ಹತ್ತಿಸಿಕೊಂಡು ಕುಮಾರಸ್ವಾಮಿ ಲೇಔಟ್ ಮಾರ್ಗವಾಗಿ ಬೇಂದ್ರೆನಗರ ಸುಬ್ರಮಣ್ಯಪುರ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ ಪ್ರಯಾಣಿಕರ ಪೈಕಿ ಒಬ್ಬಾತ ಚಾಕು ತೋರಿಸಿ ಆಟೋವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾನೆ. ನಿಲ್ಲಿಸಿದಾಗ ಚಾಲಕನನ್ನು ಹಿಂದಕ್ಕೆ ಕೂರಿಸಿ ಸುಲಿಗೆಕೋರ ಆಟೋ ಚಲಾಯಿಸಿದ್ದಾನೆ. ಮತ್ತೊಬ್ಬ ಚಾಕು ತೋರಿಸಿ ವೃದ್ಧನ ಜೇಬು ತಡಕಾಡಿ ಬಾಡಿಗೆ ದುಡಿಮೆ ಹಣ 1,350 ರೂ. ಕಿತ್ತುಕೊಂಡಿದ್ದಾನೆ.

    ಇದನ್ನೂ ಓದಿ: ಜಿಎಸ್​ಟಿ ಪರಿಹಾರದ ಎರಡು ಆಯ್ಕೆ ವಿರುದ್ಧ ಇಂದು ಸಭೆ; ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಿಂದ ವಿರೋಧ

    ಅಷ್ಟರಲ್ಲಿ ಕಾಮಾಕ್ಯ ಸಿಗ್ನಲ್​ನಿಂದ ಮುಂದೆ ಸಾಗುತ್ತಿದ್ದಾಗ ಜನರನ್ನು ನೋಡಿದ ಚಾಲಕ, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆಗ ದರೋಡೆಕೋರರು, ರಿಕ್ಷಾದಿಂದ ವೃದ್ಧನನ್ನು ಕೆಳಗೆ ತಳ್ಳಿ ಆಟೋ ಸಮೇತ ಪರಾರಿಯಾಗಿದ್ದಾರೆ. ಎಚ್ಚೆತ್ತ ಸಾರ್ವಜನಿಕರು ಬೈಕ್​ನಲ್ಲಿ ಆಟೋವನ್ನು ಹಿಂಬಾಲಿಸಿದ್ದು, ಅಷ್ಟರಲ್ಲಿ ಮರೆ ಆಗಿದ್ದರು. ಈ ಸಂಬಂಧ ನಂಜಯ್ಯ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಬನಶಂಕರಿ ಪೊಲೀಸರು ತಿಳಿಸಿದ್ದಾರೆ.

    ಮಂಜುನಾಥ ಒಎಲ್​ಎಕ್ಸ್​ನಲ್ಲಿ ಜಾಹೀರಾತು ಹಾಕಿ ವಂಚಿಸ್ತಾ ಇದ್ದದ್ದು ಯಾಕೆ?  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts