More

    ನೀರು ತುಂಬಿದ್ದ ಅಂಡರ್​ಪಾಸಲ್ಲಿ ಸಿಲುಕಿದ ಕಾರು: ರಜೆಗೆ ಊರಿಗೆ ಹೋಗಿದ್ದ ವೈದ್ಯೆ ದುರ್ಮರಣ

    ಚೆನ್ನೈ: ಮಳೆನೀರು ತುಂಬಿದ್ದ ಅಂಡರ್​ಪಾಸ್​​ನಲ್ಲಿ ಕಾರು ಸಿಲುಕಿಕೊಂಡು ಮಹಿಳಾ ವೈದ್ಯರೊಬ್ಬರು ಮೃತಪಟ್ಟಿರುವ ದುರದೃಷ್ಟಕರ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಸಿ.ಸತ್ಯ ಎಂಬುವವರು ಮೃತರು.

    ಹೊಸೂರಿನಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ ಸತ್ಯ ಅವರು, ಸಂಬಂಧಿಕರ ಮನೆಗೆ ಪುದುಕೊಟ್ಟೈಗೆ ತೆರಳಿದ್ದರು. ಶುಕ್ರವಾರ (ಸೆ.17) ರಾತ್ರಿ ಮಕ್ಕಳನ್ನು ಹತ್ತಿರದ ಸಂಬಂಧಿಕರೊಬ್ಬರ ಮನೆಯಲ್ಲಿ ಬಿಟ್ಟು ಪುದುಕೊಟ್ಟೈಗೆ ತಮ್ಮ ಅತ್ತೆಯೊಂದಿಗೆ ಹೊರಟಿದ್ದ ಅವರು, ಅಂಡರ್​ಪಾಸಿನ ಅಪಾಯಕಾರಿ ಸ್ಥಿತಿಯ ಬಗ್ಗೆ ಅರಿವಿಲ್ಲದೆ ನೀರು ತುಂಬಿಕೊಂಡಿದ್ದ ರಸ್ತೆಯನ್ನು ಪ್ರವೇಶಿಸಿದರು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಕಾರು ನೀರಿನಲ್ಲಿ ಸಿಕ್ಕಿಕೊಂಡು ಬಾಗಿಲುಗಳು ಜ್ಯಾಮ್​ ಆದವು ಎನ್ನಲಾಗಿದೆ.

    ಇದನ್ನೂ ಓದಿ: ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    ಸತ್ಯ ತಕ್ಷಣ ತಮ್ಮ ಪತಿಗೆ ಕರೆ ಮಾಡಿದ್ದು, ಅವರು ಸ್ಥಳೀಯರಿಗೆ ಕರೆಮಾಡಿ ಸಹಾಯಕ್ಕೆ ಕಳುಹಿಸಿದರು. ಜನರು ಗಾಯಗೊಂಡಿದ್ದ ಅತ್ತೆಯನ್ನು ಹೊರಕ್ಕೆಳೆಯುವಲ್ಲಿ ಯಶಸ್ವಿಯಾದರೂ, ಸತ್ಯಾರ ಸೀಟ್​ ಬೆಲ್ಟ್​ ಸಿಕ್ಕಿಕೊಂಡಿದ್ದರಿಂದ ಅವರನ್ನು ಸಕಾಲದಲ್ಲಿ ಹೊರಕ್ಕೆಳೆಯುವಲ್ಲಿ ವಿಫಲರಾದರು. ನಂತರ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲೇ ಸತ್ಯ ಮೃತಪಟ್ಟಿದ್ದು, ಅವರ ಅತ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಮುಸ್ಲಿಂ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಗೂಸಾ: ಇಬ್ಬರು ಪುಂಡರು ಪೊಲೀಸರ ವಶಕ್ಕೆ

    ಡಿಸಿ​ ಆದ ಗುಜರಾತ್​ ಬಾಲಕಿ! ಬರ್ತ್​ಡೇ ವಿಶ್​ಗೆ ಜಿಲ್ಲಾಧಿಕಾರಿ ಮೊಹರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts