ಕಾಗವಾಡ: ಬೈಕ್‌ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಐನಾಪುರ-ಉಗಾರ ಖುರ್ದ ರಸ್ತೆ ಮಾರ್ಗದ ವಿನಾಯಕವಾಡಿ ಗ್ರಾಮದ ಹತ್ತಿರ ಸೋಮವಾರ ಸಂಭವಿಸಿದೆ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಾಬಾಜಾನ್ ಸಿರಾಜುದ್ದೀನ್ ಕರೀಂಖಾನ್(38) ಮೃತ ವ್ಯಕ್ತಿ.
ಬೈಕ್‌ನಲ್ಲಿ ಬಾಬಾಜಾನ್ ಹೋಗುತ್ತಿದ್ದ ವೇಳೆ ಅಥಣಿಯಿಂದ ಉಗಾರ ಕಡೆಗೆ ತೆರಳುತ್ತಿದ್ದ ಕಾರ್, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಗಾಯಗೊಂಡಿದ್ದ ಬಾಬಾಜಾನ್‌ನನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.