More

    ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್ ಗೆಲುವು: ಅಗ್ರಸ್ಥಾನಕ್ಕೇರಿದ ಲ್ಯಾನಿಂಗ್ ಬಳಗ

    ಬೆಂಗಳೂರು: ನಾಯಕಿ ಮೆಗ್ ಲ್ಯಾನಿಂಗ್ (55 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕ ಹಾಗೂ ಎಡಗೈ ಆಲ್ರೌಂಡರ್ ಜೆಸ್ ಜೋನಾಸೆನ್ (22ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು 25 ರನ್‌ಗಳಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ 4ನೇ ಸೋಲು ಅನುಭವಿಸಿದ ಗುಜರಾತ್ ಜೈಂಟ್ಸ್ ಕೊನೇ ಸ್ಥಾನದಲ್ಲಿ ಉಳಿಯಿತು.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕಿ ಬೆತ್ ಮೂನಿ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗೆ 163 ರನ್ ಪೇರಿಸಿತು. ಪ್ರತಿಯಾಗಿ ಆಶ್ಲೇ ಗಾರ್ಡ್‌ನರ್ (40) ಪ್ರತಿರೋಧದ ನಡುವೆಯೂ, 8 ವಿಕೆಟ್‌ಗೆ 138 ರನ್‌ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಹಣೆಗೆ ಪೆಟ್ಟು ಮಾಡಿಕೊಂಡ ಗುಜರಾತ್‌ನ ದಯಾಳನ್ ಹೇಮಲತಾ ಬದಲಿಗೆ ಸಯಾಲಿ ಸತ್ಗರೆ ಕನ್‌ಕಷನ್ ಬದಲಿ ಆಟಗಾರ್ತಿಯಾಗಿ ಕಣಕ್ಕಿಳಿದರು. ಡಬ್ಲುೃಪಿಎಲ್‌ನಲ್ಲಿ ಇದು ಮೊದಲ ಕನ್‌ಕಷನ್ ಬದಲಾವಣೆ ಆಗಿದೆ.

    ಡೆಲ್ಲಿ ಕ್ಯಾಪಿಟಲ್ಸ್: 8 ವಿಕೆಟ್‌ಗೆ 163 (ಮೆಗ್ ಲ್ಯಾನಿಂಗ್ 55, ಶೆಾಲಿ 13, ಆಲಿಸ್ ಕ್ಯಾಪ್ಸಿ 27, ಜೆಮೀಮಾ ರೋಡ್ರಿಗಸ್ 7, ಅನ್ನಾಬೆಲ್ ಸುದರ್‌ಲ್ಯಾಂಡ್ 20, ಜೆಸ್ ಜೋನಾಸೆನ್ 11, ಆರುಂಧತಿ 5, ಶಿಖಾ ಪಾಂಡೆ 14*, ಮೇಘನಾ ಸಿಂಗ್ 37 ಕ್ಕೆ4, ಆಶ್ಲೇ ಗಾರ್ಡ್‌ನರ್ 37ಕ್ಕೆ 2). ಗುಜರಾತ್ ಜೈಂಟ್ಸ್: 8 ವಿಕೆಟ್‌ಗೆ 138 (ಬೆತ್ ಮೂನಿ 12, ಲಿಚ್ಛಿಪೀಲ್ಡ್ 15, ವೇದಾ 12, ಗಾರ್ಡ್‌ನರ್ 40, ಬ್ರೈಸ್ 3, ತನುಜಾ 13, ಮೇಘನಾ 10*, ಜೆಸ್ ಜೋನಾಸೆನ್ 22ಕ್ಕೆ 3, ರಾಧಾ ಯಾದವ್ 20ಕ್ಕೆ 3, ಶಿಖಾ ಪಾಂಡೆ 28ಕ್ಕೆ1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts