More

    ಸಿಧುವಿನಿಂದಾಗಿ ನನ್ನ ಕ್ಷೇತ್ರವನ್ನು ಬಿಡುವುದಿಲ್ಲ! ಚುನಾವಣಾ ಕಣವನ್ನು ಘೋಷಿಸಿದ ಕ್ಯಾಪ್ಟನ್​

    ಚಂಡೀಗಡ: ಪಂಜಾಬ್​​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್​ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲಾದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಭಿನ್ನಮತದಿಂದಾಗಿ ಸಿಎಂ ಪದವಿಗೆ ರಾಜೀನಾಮೆ ನೀಡಿ ಕಾಂಗ್ರೆಸ್​ ತೊರೆದ ಕ್ಯಾಪ್ಟನ್​, ತಮ್ಮ ಹೊಸ ರಾಜಕೀಯ ಪಕ್ಷ ‘ಪಂಜಾಬ್​ ಲೋಕ್​ ಕಾಂಗ್ರೆಸ್​’ ಅಭ್ಯರ್ಥಿಯಾಗಲಿದ್ದಾರೆ.

    ಈ ಮುನ್ನ ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ಸ್ಪರ್ಧಿಸುವ ಕ್ಷೇತ್ರದಲ್ಲೇ ಚುನಾವಣೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಕ್ಯಾಪ್ಟನ್​, “ನಾನು ಪಟಿಯಾಲದಿಂದ ಸ್ಪರ್ಧಿಸುತ್ತೇನೆ. ಪಟಿಯಾಲ 400 ವರ್ಷಗಳಿಂದ ನಮ್ಮೊಂದಿಗಿದೆ. ಅದನ್ನು ಸಿಧುವಿನಿಂದಾಗಿ ನಾನು ಬಿಡುವುದಿಲ್ಲ” ಎಂದು ಇಂದು ಸುದ್ದಿಗಾರರಿಗೆ ತಿಳಿಸಿದರು.

    ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಿವರು; ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಮಾಹಿತಿ…

    ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರ ಕುಟುಂಬಕ್ಕೆ ಪಟಿಯಾಲದಲ್ಲಿ ಭಾರೀ ಹಿಡಿತವಿದೆ. ಅವರ ತಂದೆ ಅಂದಿನ ಪಟಿಯಾಲ ರಾಜಮನೆತನದ ಕೊನೆಯ ಮಹಾರಾಜರಾಗಿದ್ದರು. ಕ್ಯಾಪ್ಟನ್​ ಸ್ವತಃ ಅಲ್ಲಿಂದ ನಾಲ್ಕು ಬಾರಿ ಗೆದ್ದಿದ್ದರೆ, ಅವರ ಪತ್ನಿ ಪ್ರೆಣೀತ್​ ಕೌರ್​ ಕೂಡ ಪಟಿಯಾಲ ಕ್ಷೇತ್ರವನ್ನು 2014 ರಿಂದ 2017 ರವರೆಗೆ ಮೂರು ವರ್ಷ ಪ್ರತಿನಿಧಿಸಿದ್ದಾರೆ.

    ಕ್ಯಾಪ್ಟನ್​ ಸಿಂಗ್​ ತಮ್ಮ ಪಕ್ಷವು​​ ಭಾರತೀಯ ಜನತಾ ಪಕ್ಷ(ಬಿಜೆಪಿ)ದೊಂದಿಗೆ ಚುನಾವಣಾ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಸೂಚನೆ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವುದಾಗಿ ಘೋಷಿಸಿದ ನಂತರ ಈ ಒಪ್ಪಂದಕ್ಕೆ ದಾರಿ ಸುಗಮವಾಗಿದೆ. (ಏಜೆನ್ಸೀಸ್)

    ಆಡುತ್ತಿದ್ದ ಬಾಲಕನ ಪ್ರಾಣ ಹೊತ್ತೊಯ್ದ ಜವರಾಯ

    ಜಡ್ಜ್​ ಚೇಂಬರಿಗೆ ನುಗ್ಗಿ ಹಲ್ಲೆ ಮಾಡಿದ ಪೊಲೀಸರು! ರಾಜ್ಯದ ಡಿಜಿಪಿಗೆ ಹೈಕೋರ್ಟ್​ ಬುಲಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts