More

    ಭಾರತಕ್ಕೆ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಹಸ್ತಾಂತರಕ್ಕೆ ನಿರ್ದಿಷ್ಟ ಸಮಯ ತಿಳಿಸಲು ಸಾಧ್ಯವಿಲ್ಲ

    ನವದೆಹಲಿ: ಭಾರತದಲ್ಲಿ ಬ್ಯಾಂಕ್​ಗಳಿಂದ ಸಾಲ ಪಡೆದು ವಂಚಿಸಿ ಬ್ರಿಟನ್​ಗೆ ಪರಾರಿಯಾಗಿ ಲಂಡನ್​ನಲ್ಲಿ ನೆಲೆಸಿರುವ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನಿರ್ದಿಷ್ಟ ಸಮಯದ ಚೌಕಟ್ಟನ್ನು ಹಾಕಿಕೊಳ್ಳಲು ಬ್ರಿಟನ್​ ಸರ್ಕಾರಕ್ಕೆ ಆಸ್ಪದ ಇಲ್ಲ ಎಂದು ಭಾರತದಲ್ಲಿನ ಬ್ರಿಟಿಷ್​ ರಾಯಭಾರಿ ಫಿಲಿಪ್​ ಬಾರ್ಟನ್​ ಹೇಳಿದ್ದಾರೆ.

    ಆನ್​ಲೈನ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಯ ಅವರು ಬ್ರಿಟನ್​ನಲ್ಲಿ ಆಶ್ರಯ ಕೇಳಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
    ಬ್ರಿಟನ್​ ಸರ್ಕಾರ ಮತ್ತು ಕೋರ್ಟ್​ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಮ್ಮಲ್ಲಿಗೆ ಜನರು ಓಡಿಬರುವುದನ್ನು ತಡೆಯಲು ತಾವು ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆ ಎರಡೂ ಸಂಸ್ಥೆಗಳಿಗೆ ಅರಿವಿದೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಂಥ ಸ್ಥಿತಿಗಳಿಗೆ ಹೇಗೆ ಸ್ಪಂದಿಸಬೇಕು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದನ್ನು ಆ ಸಂಸ್ಥೆಗಳು ಮಾಡುತ್ತವೆ. ಜತೆಗೆ, ಕ್ರಿಮಿನಲ್​ಗಳು ನ್ಯಾಯಾಂಗ ತನಿಖೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಸಚಿನ್ ಪೈಲಟ್​ ಅನರ್ಹತೆ ಪ್ರಕರಣ: ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ

    ಭಾರತಕ್ಕೆ ಮಲ್ಯ ಅವರ ಹಸ್ತಾಂತರ ಪ್ರಕರಣ ಇನ್ನೂ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಆದ್ದರಿಂದ ಆ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ. ಅದರಲ್ಲವೂ ವಿಶೇಷವಾಗಿ ಅವರನ್ನು ಯಾವಾಗ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.

    ಭಾರತಕ್ಕೆ ತಮ್ಮನ್ನು ಹಸ್ತಾಂತರಿಸದಂತೆ ಕೋರಿ ವಿಜಯ್​ ಮಲ್ಯ ಬ್ರಿಟನ್​ನ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಮೇಲ್ಮನವಿ ಮೇನಲ್ಲಿ ತಿರಸ್ಕೃತಗೊಂಡಿತ್ತು. ಆನಂತರದಲ್ಲಿ ಯಾವುದೋ ಕಾನೂನು ತೊಡಕಿನ ನೆಪ ಒಡ್ಡಿ ಬ್ರಿಟನ್​ ಸರ್ಕಾರ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದೆ. ಜತೆಗೆ, ಆಶ್ರಯ ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸದಂತೆ ಭಾರತ ಮನವಿ ಮಾಡಿಕೊಂಡಿದೆ.

    ಫೇಸ್​ಬುಕ್​ಗೆ ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದ ರೌಡಿಶೀಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts