More

    ಸಚಿನ್ ಪೈಲಟ್​ ಅನರ್ಹತೆ ಪ್ರಕರಣ: ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ

    ಜೈಪುರ: ರಾಜಸ್ಥಾನ ರಾಜಕೀಯ ಈಗ ಕೋರ್ಟ್ ಅಂಗಳದಲ್ಲಿದೆ. ಸಚಿನ್ ಪೈಲಟ್​ ಮತ್ತು ಬೆಂಬಲಿಗ ಶಾಸಕರ ಅನರ್ಹತೆ ಸಂಬಂಧ ಹೈಕೋರ್ಟ್​ ನೀಡಿದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸ್ಪೀಕರ್ ಸಿಪಿ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 27ರಂದು ನಡೆಯಲಿದೆ.

    ಸ್ಪೀಕರ್ ಸಿಪಿ ಜೋಶಿ ತಮಗೆ ಸಂವಿಧಾನಬದ್ಧವಾಗಿ ಲಭ್ಯವಿರುವ ಅಧಿಕಾರ ಬಳಸದಂತೆ ಹೈಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನಿನ್ನೆ ಈ ಸಂಬಂಧ ವಿಚಾರಣೆ ನಡೆದಿದ್ದು, ಸ್ಪೀಕರ್​ ಪ್ರೊಸೀಡಿಂಗ್ಸ್​ನಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಬಹುದೇ ಅಥವಾ ಮಾಡಬಾರದಾ ಎಂಬ ಬಗ್ಗೆ ಮಾತ್ರ ತಾನು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್​ ತಿಳಿಸಿತ್ತು.

    ಇದನ್ನೂ ಓದಿ: ರಾಜಸ್ಥಾನ ರಾಜಕೀಯ: ಮೌನ ಮುರಿದ ರಾಹುಲ್ ಗಾಂಧಿ!

    ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ರಾಜಸ್ಥಾನ ರಾಜಕೀಯ ಈಗ ಇನ್ನಷ್ಟು ಕುತೂಹಲಕಾರಿ ಘಟ್ಟ ತಲುಪಿದ್ದು, ಅನೇಕ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯ: ಯಥಾಸ್ಥಿತಿ ಕಾಪಾಡಲು ಸ್ಪೀಕರ್​ಗೆ ಹೈಕೋರ್ಟ್ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts