More

    ಚೀನಾ ಕಳ್ಳಾಟವನ್ನು ಜಗತ್ತಿಗೆ ಸಾರಿದ ಕೆನಡಾ; ಒತ್ತೆಯಾಳು ರಾಯಭಾರಕ್ಕೆ ಮಣಿಯಲ್ಲ ಎಂದ ಪ್ರಧಾನಿ

    ಒಟ್ಟಾವಾ: ಚೀನಾ ಹಾಗೂ ಕೆನಡಾದ ನಡುವಿನ ರಾಯಭಾರ ಸಂಬಂಧ ಹಳಸಿದೆ. ಇದೀಗ ಇನ್ನೊಂದು ಹಂತ ಕೆಳಕ್ಕೆ ಇಳಿದಿದೆ. ಹಾಂಗ್​ಕಾಂಗ್​ ಜತೆಗಿನ ಹಸ್ತಾಂತರ ಒಪ್ಪಂದವನ್ನು ಕೆನಡಾ ರದ್ದುಗೊಳಿಸಿದೆ.

    ಹಾಂಗ್​ಕಾಂಗ್​ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸುವ ಉದ್ದೇಶದಿಂದ ಚೀನಾ ಜಾರಿಗೆ ತಂದಿರುವ ಭದ್ರತಾ ಕಾಯ್ದೆಯನ್ನು ವಿರೋಧಿಸಿ ಕೆನಡಾ ಈ ಕ್ರಮಕ್ಕೆ ಮುಂದಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಜ್ಜಾಗದಿದ್ದರೆ ಭಾರತದ ಸ್ಥಿತಿ ಹರೋಹರ…! ನಿತ್ಯ 3 ಲಕ್ಷ ಹೊಸ ಕೇಸ್​ ನಿಶ್ಚಿತ… 

    ಈ ರದ್ದು ಆದೇಶ ಈ ಕ್ಷಣದಿಂದಕಲೇ ಜಾರಿಗೆ ಬರಲಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್​ ಟ್ರೂಡೊ ಘೋಷಿಸಿದ್ದಾರೆ. ಮಾತ್ರವಲ್ಲ, ಹಾಂಗ್​ಕಾಂಗ್​ಗೆ ರಕ್ಷಣಾ ವಲಯದ ಸೂಕ್ಷ್ಮ ಉಪಕರಣಗಳ ರಫ್ತಿಗೆ ಅವಕಾಶ ನೀಡುವುದಿಲ್ಲ ಎಂದೂ ಹೇಳಿದ್ದಾರೆ. ಏಕೆಂದರೆ, ಇವೆಲ್ಲ ಚೀನಾ ಉಪಯೋಗಕ್ಕಾಗಿಯೇ ತರಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಕೆನಡಾದ ಕ್ರಮಕ್ಕೆ ಹಾಂಗ್​ಕಾಂಗ್​ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಮೆರಿಕದ ವಾರಂಟ್​ ಮೇರೆಗೆ ಚೀನಾದ ಹುವಾಯ್​ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮೆಂಗ್​ ವಾನ್​ಝೌನನ್ನು ಕೆನಡಾ ಬಂಧಿಸಿತ್ತು. ಚೀನಾ ಇದಕ್ಕೆ ಪ್ರತಿಯಾಗಿ ಕೆನಡಾದ ಮಾಜಿ ರಾಯಭಾರಿ ಮೈಕಲ್ ಕೊವ್ರಿ ಹಾಗೂ ಉದ್ಯಮಿ ಮೈಕಲ್​ ಸ್ಪಾರೋ ಅವರನ್ನು ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿತ್ತು.

    ಇದನ್ನೂ ಓದಿ; ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ವ್ಯಕ್ತಿಯೀಗ ಭಾರತದಲ್ಲೇ ಇಂಗ್ಲೆಂಡ್​ ಹೈಕಮೀಷನರ್​ 

    ಇದಾಗಿ 18 ತಿಂಗಳಾದರೂ ಕೆನಡಾ ಪ್ರಜೆಗಳಿಗೆ ಚೀನಾ ರಾಯಭಾರ ಸಂಪರ್ಕವನ್ನು ನೀಡಿಲ್ಲ. ಇದೊಂದು ಪ್ರತೀಕಾರದ ಕ್ರಮವೆಂದೇ ಬಣ್ಣಿಸಲಾಗಿದೆ. ಈ ವಿವಾದವನ್ನು ಬಗೆಹರಿಸಕೊಳ್ಳುವಂತೆ ಕೆನಡಾ ಪ್ರಧಾನಿ ಮೇಲೆ ಒತ್ತಡ ಬಂದರೂ ಜಸ್ಟಿನ್​ ಅದಕ್ಕೆ ಮಣಿದಿಲ್ಲ. ಚೀನಾದ ಒತ್ತೆಯಾಳು ರಾಯಭಾರತ್ವದ ಕಳ್ಳಾಟ ಜಗತ್ತಿಗೆ ತಿಳಿಸುವುದೇ ಇದರ ಉದ್ದೇಶವಾಗಿದೆ ಎಂದು ಕೆನಡಾ ಸ್ಪಷ್ಟಪಡಿಸಿದೆ.

    ಸೈಬರ್​ ವಂಚಕ ಲಪಟಾಯಿಸಿದ್ದು 3,300 ಕೋಟಿ ರೂ.; ದುಬೈ ಅಪಾರ್ಟ್​ಮೆಂಟ್​ನಲ್ಲಿತ್ತು 280 ಕೋಟಿ ರೂ. ನಗದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts