More

    ಸೀನಪ್ಪ ಶೆಟ್ಟಿ ವೃತ್ತ ಎಂದೇ ಕರೆಯಿರಿ: ಶಾಸಕ ಚನ್ನಬಸಪ್ಪ

    ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿ ಏಳು ದಶಕಕ್ಕೂ ಪೂರ್ವದಲ್ಲೇ ವೃತ್ತ ಹಾಗೂ ಕಾರಂಜಿ ನಿರ್ಮಾಣಕ್ಕೆ ಸೀನಪ್ಪ ಶೆಟ್ಟಿ ಕುಟುಂಬದ ಕೊಡುಗೆ ಅಪಾರ. 1956ರಲ್ಲೇ ಅಂದಿನ ಪುರಸಭೆಯು ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲು ನಿರ್ಧರಿಸಿತ್ತು. ಕ್ರಮೇಣ ಇದನ್ನು ಗೋಪಿ ವೃತ್ತ ಎಂದು ಕರೆಯಲಾಯಿತು. ಇನ್ನು ಮುಂದೆ ಸೀನಪ್ಪ ಶೆಟ್ಟಿ ವೃತ್ತ ಎಂದೇ ಎಲ್ಲರೂ ಕರೆಯಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

    ಶುಕ್ರವಾರ ಸೀನಪ್ಪ ಶೆಟ್ಟಿ ವೃತ್ತ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಸೀನಪ್ಪ ಶೆಟ್ಟಿ ಕುಟುಂಬದವರು ಈ ವೃತ್ತಕ್ಕೆ ಅಂದಿನ ಕಾಲದಲ್ಲೇ 25 ಸಾವಿರ ರೂ. ನೀಡಿದ್ದರು. 20 ಸಾವಿರ ರೂ. ನೀಡಿ ಕಾರಂಜಿ ನಿರ್ಮಿಸಿದ್ದರು. ಈ ಸಮಾಜಮುಖಿ ಕಾರ್ಯ ಸಣ್ಣದಲ್ಲ ಎಂದು ಬಣ್ಣಿಸಿದರು.
    ರಸ್ತೆ ಅಗಲೀಕರಣ ಸಂದರ್ಭದಲ್ಲಿ ವೃತ್ತದಲ್ಲಿದ್ದ ಕಾರಂಜಿಯನ್ನು ಈಗಿನ ನಗರಪಾಲಿಕೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಅಲ್ಲಿಯೂ ಕಾರಂಜಿ ತೆರವು ಮಾಡಲಾಗಿದೆ. ಇನ್ನು ಮುಂದೆ ಈ ವೃತ್ತವನ್ನು ಸೀನಪ್ಪ ಶೆಟ್ಟಿ ವೃತ್ತ ಎಂದೇ ಕರೆಯುವ ಮೂಲಕ ಹಿರಿಯರ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕು ಎಂದರು.
    ಸೀನಪ್ಪ ಶೆಟ್ಟಿ ಕುಟುಂಬದ ವೆಂಕಟೇಶ್‌ಮೂರ್ತಿ ಮಾತನಾಡಿ, 1956ರಿಂದ ಇಲ್ಲಿಯವರೆಗೆ ಅಂದಿನ ಪುರಸಭೆ, ನಗರಸಭೆ, ನಗರ ಪಾಲಿಕೆಯ ಎಲ್ಲ ದಾಖಲೆಗಳಲ್ಲೂ ಸೀನಪ್ಪ ಶೆಟ್ಟಿ ವೃತ್ತ ಎಂದೇ ಉಲ್ಲೇಖ ಮಾಡಲಾಗಿದೆ. ಈಗ ಪಾಲಿಕೆಯಿಂದ ಮತ್ತೊಮ್ಮೆ ನಾಮಲಕ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.
    ಸೀನಪ್ಪ ಶೆಟ್ಟಿ ಕುಟುಂಬದ ಪ್ರಮುಖರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಟಿ.ಎಸ್.ಸಂದೀಪ್, ವಿಶ್ವನಾಥ್, ಗುರುಚರಣ್, ರಘುನಂದನ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts