More

    ಸಮತೋಲಿತ ರೇನ್​ಬೋ ಸಂಪುಟ: ಸಚಿವ ಸಂಪುಟ ಸೇರಿದ ಪ್ರಮುಖರು ಸೇರಿ ಹೊಸ ಸಚಿವರ ಕಿರುಪರಿಚಯ ಇಲ್ಲಿದೆ 

    ನವಭಾರತ ನಿರ್ಮಾಣದ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಂಡಕ್ಕೆ 43 ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಆಡಳಿತ, ಅಭಿವೃದ್ಧಿ, ಬೃಹತ್​ ಯೋಜನೆಗಳಿಗೆ ವೇಗ ನೀಡುವ ಜತೆಗೆ ಮುಂಬರುವ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಂಪುಟ ಪುನರ್​ ರಚನೆ ಮಾಡಲಾಗಿದೆ. ಅಚ್ಚರಿ ಎಂಬಂತೆ ಹಲವು ಪ್ರಮುಖ ಸಚಿವರನ್ನು ಕೈಬಿಡಲಾಗಿದೆ. ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿದೆ. ಅನುಭವಿ ಹಾಗೂ ಹೊಸಬರನ್ನು ಹೊಂದಿದ ಸಂಪುಟ ಇದಾಗಿದೆ. ಈ ಕುರಿತ ಸಂಪ್ತ ನೋಟ ಇಲ್ಲಿದೆ.

    ನವದೆಹಲಿ: 2019ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸಂಪುಟ ಪುನರ್​ ರಚನೆ ಆಗಿದ್ದು, 43 ಹೊಸ ಸಚಿವರು ಬುಧವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಸಾಮಾಜಿಕ ಸಮತೋಲನ ದೃಷ್ಟಿಯಿಂದ ಈ ಸಂಪುಟ ವಿಸ್ತರಣೆ ಮಹತ್ವ ಪಡೆದುಕೊಂಡಿದೆ. ಪ್ರಮಾಣವಚನ ಸ್ವೀಕರಿಸಿದ 43 ಸಚಿವರಲ್ಲಿ 36 ನಾಯಕರು ಹೊಸಬರು.

    ಸಾಮಾಜಿಕ ಸಮ ತೋಲನ, ಹಿಂದುಳಿದ ವರ್ಗಗಳಿಗೆ ಆದ್ಯತೆ, ಮಹಿಳೆಯರಿಗೆ ಅವಕಾಶ ಹಾಗೂ ಆಡಳಿತದಲ್ಲಿ ಹೆಚ್ಚಿನ ಅನುಭವದ ಆಧಾರದ ಮೇಲೆ ಹೊಸ ಸಚಿವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹೊಸ ಸಂಪುಟವನ್ನು ರೇನ್​ಬೋ (ಕಾಮನಬಿಲ್ಲು) ಮಂತ್ರಿ ಮಂಡಳ ಎಂದು ಹಿರಿಯ ಸಚಿವರು ಬಣ್ಣಿಸಿದ್ದಾರೆ. ದೇಶದ ಎಲ್ಲ ಸಮುದಾಯ, ಸಮಾಜದ ನಾಯಕರಿಗೆ  ಮನ್ನಣೆ ನೀಡಲಾಗಿದೆ. ದೇಶದ 130 ಕೋಟಿ ಜನರ ಆಶಯವನ್ನು ಇದು ಬಿಂಬಿಸುತ್ತದೆ. ಸಮಾಜ ಎಲ್ಲ ವರ್ಗಗಳಿಗೆ ಅವಕಾಶ ಸಿಕ್ಕಿದೆ. ಮಹಿಳೆಯರು, ಹಿಂದುಳಿದ ವರ್ಗಗಳ ನಾಯಕರು, ಯುವ ಮುಖಂಡರು, ವೃತ್ತಿಪರಿಗೂ ಆದ್ಯತೆ ಸಿಕ್ಕಿದೆ.  ಮೂವರು ಅಲ್ಪಸಂಖ್ಯಾತ ನಾಯಕರಿಗೆ ಸಂಪುಟ ದರ್ಜೆಯ ಸ್ಥಾನ ನೀಡಲಾಗಿದೆ. ಸಿಖ್​ ಹಾಗೂ ಮುಸ್ಲಿಮ್​ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. 25 ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಾನಸಿಕ್ಕಿದೆ.

    ಸಚಿವ ಸಂಪುಟ ಸೇರಿದ ಪ್ರಮುಖರು

    ನಾರಾಯಣ ಟಿ ರಾಣೆ (69)
    * ಮಹಾರಾಷ್ಟ್ರದ ಕೊಂಕಣದವರು. ಮೊದಲ ಬಾರಿಗೆ ರಾಜ್ಯಸಭಾ ಸದಸ್ಯ
    * ಆರು ಬಾರಿ ಶಾಸಕ, ಒಂದು ಸಲ ಎಂಎಲ್​ಸಿ
    * ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ. ಅದಕ್ಕೂ ಮೊದಲು ಕೈಗಾರಿಕೆ, ಕಂದಾಯ, ಬಂದರು ಮತ್ತು ಪಶಸಂಗೋಪನೆ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದರು.
    * 35 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಅನುಭವ
    * ಆದಾಯ ತೆರಿಗೆ ಇಲಾಖೆಯಲ್ಲಿ 1971ರಿಂದ 1984ರ ತನಕ ಸೇವೆ ಸಲ್ಲಿಕೆ ಥಿ ಈ ಹಿಂದೆ ಅವರು ಕಾಂಗ್ರೆಸ್​ನಲ್ಲಿದ್ದರು.

    ಮೀನಾ ಲೇಖಿ (54) 
    *  ದೆಹಲಿಯವರು. ಲೋಕಸಭೆಯಲ್ಲಿ ದೆಹಲಿಯನ್ನು ಎರಡನೇ ಬಾರಿ ಪ್ರತಿನಿಧಿಸುತ್ತಿದ್ದಾರೆ.
    * ನವದೆಹಲಿ ಮುನ್ಸಿಪಲ್​ ಕಾರ್ಪೊರೇಶನ್​ನ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
    * ಸುಪ್ರೀಂ ಕೋರ್ಟ್​ ನ್ಯಾಯವಾದಿಯಾಗಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡವರು.
    * ಬಿಜೆಪಿ ಸೇರಿ ರಾಜಕೀಯವಾಗಿ ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತ ಬಂದವರು. ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ  ಪಾರ್ಲಿಮೆಂಟರಿ ಪ್ರಿವಿಲೇಜಸ್​ ಕಮಿಟಿ ಚೇರ್​ಪರ್ಸನ್​ ಆಗಿದ್ದರು. ಈಗ ಪಬ್ಲಿಕ್​ ಅಂಡರ್​ಟೇಕಿಂಗ್​ ಕಮಿಟಿಯ ಚೇರ್​ಪರ್ಸನ್​ ಆಗಿದ್ದಾರೆ.
    * ದೆಹಲಿ ಯೂನಿವರ್ಸಿಟಿಯ ಎಲ್​ಎಲ್​ಬಿ ಪದವೀಧರೆ.

    ಅನುಪ್ರಿಯಾ ಸಿಂಗ್​ ಪಟೇಲ್​ (40) 
    * ಉತ್ತರ ಪ್ರದೇಶದ ಮಿರ್ಜಾಪುರದವರು. ಅಪ್ನಾ ದಳ ಪಾರ್ಟಿಯ ಮುಖ್ಯಸ್ಥೆ. ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಅವರ ಆಪ್ತ ಸೋನೆಲಾಲ್​ ಪಟೇಲ್​ ಅವರ ಪುತ್ರಿ. ಎರಡನೇ ಅವಧಿಗೆ ಲೋಕಸಭಾ ಸದಸ್ಯೆ
    *ನರೇಂದ್ರ ಮೋದಿ ಅವರ ಈ ಹಿಂದಿನ ಸಚಿವ ಸಂಪುಟದಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
    * ಉತ್ತರ ಪ್ರದೇಶದ ರೊಹಾನಿಯಾ ವಿಧಾನಸಭಾ ಕ್ಷೇತ್ರದ ಶಾಸಕಿಯೂ ಆಗಿ ಕರ್ತವ್ಯ ನಿರ್ವಹಿಸಿದ್ದರು.
    * ರಾಜಕೀಯ ರಂಗ ಪ್ರವೇಶಿಸುವ ಮುನ್ನ ಅಮಿಟಿ ಯೂನಿವರ್ಸಿಟಿಯಲ್ಲಿ ಪ್ರೊೆಸರ್​ ಆಗಿದ್ದರು.
    * ಕಾನ್ಪುರದ ಛತ್ರಪತಿ ಸಾಹುಜಿ ಮಹಾರಾಜ್​ ಯೂನಿವರ್ಸಿಟಿಯ ಎಂಬಿಎ ಪದವೀಧರೆ

    ಎಸ್​. ಸೊನೊವಾಲ್​ (58)
    * ಅಸ್ಸಾಂನ ದಿಬ್ರುಗಢ ಮೂಲದವರು. 2 ಬಾರಿ ಸಂಸದರಾಗಿದ್ದರು.
    * ಎರಡು ಸಲ ಶಾಸಕರಾಗಿದ್ದು, 2016&21ರ ಅವಧಿಯಲ್ಲಿ ಅಸ್ಸಾಂನ ಮುಖ್ಯಮಂತ್ರಿ
    * ಹಿಂದಿನ ಅವಧಿಯಲ್ಲಿ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಸ್ವತಂತ್ರ) ಖಾತೆಯ ರಾಜ್ಯಸಚಿವ, ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರಾಗಿದ್ದರು.
    * ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಬದುಕಿಗೆ ಪ್ರವೇಶ & 3 ದಶಕದ ರಾಜಕೀಯ ಅನುಭವ
    * ಗುವಾಹಟಿ ಯೂನಿವರ್ಸಿಟಿಯ ಎಲ್​ಎಲ್​ಬಿ ಪದವೀಧರ

    ಜ್ಯೋತಿರಾದಿತ್ಯ ಎಂ ಸಿಂಧಿಯಾ (50) 
    * ಮಧ್ಯಪ್ರದೇಶದ ಗ್ವಾಲಿಯರ್​ನ ರಾಜಮನೆತನದವರು. ರಾಜ್ಯಸಭಾ ಸದಸ್ಯ. ಸಂಸದರಾಗಿ ಐದನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.
    * ಹಿಂದಿನ ಕೇಂದ್ರ ಸರ್ಕಾರಗಳಲ್ಲಿ ಇಂಧನ (ಸ್ವತಂತ್ರ) ಖಾತೆ ರಾಜ್ಯ ಸಚಿವ, ವಾಣಿಜ್ಯ ಮತ್ತು ಸಂವಹನ ಖಾತೆ ರಾಜ್ಯ ಸಚಿವರಾಗಿದ್ದರು.
    * ರಾಜಮನೆತದವರಾಗಿ ಜನಸೇವೆ ಮಾಡುತ್ತ ಎರಡು ದಶಕದ ರಾಜಕೀಯ ಅನುಭವ ಹೊಂದಿದ್ದಾರೆ. ಕ್ರಿಕೆಟ್​ ಬಗ್ಗೆ ವಿಶೇಷ ಒಲವುಳ್ಳ ಅವರು ಮಧ್ಯಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷರಾಗಿದ್ದರು.
    * ಬಹಳ ವರ್ಷಕಾಲ ಕಾಂಗ್ರೆಸ್​ ಪಕ್ಷದಲ್ಲಿದ್ದು ವಿವಿಧ ಹೊಣೆಗಾರಿಕೆ ನಿರ್ವಹಿಸಿದವರು. 2020ರ ಮಾರ್ಚ್​ 10ರಂದು ಬಿಜೆಪಿ ಸೇರ್ಪಡೆಗೊಂಡರು.
    * ಹಾರ್ವರ್ಡ್​ ಯೂನಿವರ್ಸಿಟಿಯ ಬಿಎ ಮತ್ತು ಸ್ಟಾ$ನ್​ರ್ಡ್​ ಯೂನಿವರ್ಸಿಟಿಯ ಎಂಬಿಎ ಪದವೀಧರ.

    ಟೀ ಎಸ್ಟೇಟ್​ನ ನೌಕರ ಈಗ ಕೇಂದ್ರದ ಮಂತ್ರಿ!
    ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪಶ್ಚಿಮ ಬಂಗಾಳದ ಸಂಸದ ಜಾನ್​ ಬಾರ್ಲಾ (45), ಈ ಹಿಂದೆ ಜಲಪೈಗುರಿ ಜಿಲ್ಲೆಯ ಟೀ ಎಸ್ಟೇಟ್​ನಲ್ಲಿ ಕಾರ್ಮಿಕರಾಗಿದ್ದರು. 14ನೇ ವರ್ಷದಲ್ಲೇ ಟೀ ಎಸ್ಟೇಟ್​ ಸೇರಿದ ಜಾನ್​, ಕಾರ್ಮಿಕರ ನಾಯಕರಾಗಿ ಬೆಳೆದು ಅವರ ಹಕ್ಕುಗಳಗಾಗಿ ಉತ್ತರ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಎರಡು ದಶಕಗಳ ಕಾಲ ಹೋರಾಟ ಮಾಡಿದ್ದರು. ಅಲಿಪುರ್​ದಾರ್ಸ್​ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸಂಸತ್​ಗೆ ಆಯ್ಕೆ ಆಗಿದ್ದಾರೆ.

    ಪ್ರಾಮಾಣಿಕ್​ ಕಿರಿಯ ಸಚಿವ
    ರಾಜ್ಯ ಖಾತೆ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀರಿಸಿದ ಪಶ್ಚಿಮ ಬಂಗಾಳದ ಕೂಚ್​ ಬೆಹಾರ್​ನ ಸಂಸದ ನಿಶಿತ್​ ಪ್ರಾಮಾಣಿಕ್​ (35) ಕೇಂದ್ರದ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿಯಾಗಿದ್ದಾರೆ. ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದ ಕೂಚ್​ ಬೆಹಾರ್​ನ ಮೊದಲಿಗರಾಗಿದ್ದಾರೆ. ಬಿಸಿಎ ಪದವೀಧರರಾದ ಪ್ರಾಮಾಣಿಕ್​ ಸಂಸದರಾಗುವುದುಕ್ಕೂ ಮುನ್ನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

    ಹೊಸ ಸಚಿವರ ಕಿರುಪರಿಚಯ
    * ಡಾ.ವೀರೇಂದ್ರ ಕುಮಾರ್​ (67):  ಮಧ್ಯಪ್ರದೇಶದ ತಿಕಂಗಢದ ಲೋಕಸಭಾ ಸದಸ್ಯ. ಏಳನೇ ಬಾರಿ ಸಂಸದ ಲೋಕಸಭೆಯ ಹಿರಿಯ ಸದಸ್ಯರಲ್ಲೊಬ್ಬರು.
    * ರಾಮಚಂದ್ರ ಪ್ರಸಾದ್​ ಸಿಂಗ್​ (63):  ಬಿಹಾರದ ನಳಂದದವರು. ರಾಜ್ಯಸಭಾ ಸದಸ್ಯ. ಎರಡನೇ ಬಾರಿ ಸಂಸದ. 1984ರ ಬ್ಯಾಚಿನ ನಿವೃತ್ತ ಐಎಎಸ್​ ಅಧಿಕಾರಿ.
    * ಅಶ್ವಿನಿ ವೈಷ್ಣವ್​ (50):  ಒಡಿಶಾದ ರಾಜ್ಯಸಭಾ ಸದಸ್ಯ. 1994ರ ಬ್ಯಾಚಿನ ಮಾಜಿ ಐಎಎಸ್​ ಅಧಿಕಾರಿ. 15 ವರ್ಷ ಕಾಲ ಸರ್ಕಾರಿ ಸೇವೆಯಲ್ಲಿದ್ದವರು.
    * ಪಶುಪತಿ ಕುಮಾರ್​ ಪರಸ್​ (68):  ಬಿಹಾರದ ಹಾಜಿಪರ ಕ್ಷೇತ್ರದ ಲೋಕಸಭಾ ಸದಸ್ಯ. ಏಳು ಸಲ ಶಾಸಕ, ಒಂದು ಸಲ ಎಂಎಲ್​ಸಿ.
    * ಭೂಪೇಂದ್ರ ಯಾದವ್​ (52):  ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯ. ಎರಡನೇ ಅವಧಿಗೆ ಸಂಸದ. ಹಲವು ಸಂಸದೀಯ ಸಮಿತಿಗಳ ಮುಖ್ಯಸ್ಥರಾಗಿದ್ದವರು.
    * ಪಂಕಜ್​ ಚೌಧರಿ (56):  ಉತ್ತರ ಪ್ರದೇಶದ ಪೂರ್ವಾಂಚಲದವರು. ಮಹಾರಾಜ್​ಗಂಜ್​ನ ಲೋಕಸಭಾ ಸದಸ್ಯ. ಆರನೇ ಬಾರಿ ಸಂಸದ. ಈ ಹಿಂದೆ ಗೋರಖಪುರದ ಡೆಪ್ಯುಟಿ ಮೇಯರ್​ ಆಗಿದ್ದರು.
    * ಪ್ರೊೆಸರ್​ ಸತ್ಯಪಾಲ್​ ಸಿಂಗ್​ ಭಗೇಲ್​ (61)  ಉತ್ತರ ಪ್ರದೇಶದ ಆಗ್ರಾದವರು. 2ನೇ ಅವಧಿಗೆ ಸದಸ್ಯ.
    * ಭಾನುಪ್ರತಾಪ್​ ಸಿಂಗ್​ ವರ್ಮಾ(63): ಉತ್ತರ ಪ್ರದೇಶದ ಬುಂದಲೇಖಂಡದವರು. ಜಲೌನ್​ ಕ್ಷೇತ್ರದ ಲೋಕಸಭಾ ಸದಸ್ಯ. ಐದನೇ ಅವಧಿಗೆ ಸಂಸದ.
    * ದರ್ಶನಾ ವಿಕ್ರಮ್​ (60):  ಗುಜರಾತ್​ನ ಸೂರತ್​ನವರು. ಮೂರನೇ ಬಾರಿಗೆ ಲೋಕಸಭಾ ಸದಸ್ಯೆ. 4 ದಶಕಗಳ ರಾಜಕೀಯ ಅನುಭವ.
    * ಅನ್ನಪೂರ್ಣಾದೇವಿ (51):  ಜಾರ್ಖಂಡ್​ನ ಉತ್ತರ ಚೋಟಾನಾಗಪುರದವರು. ಕೋಡರಮ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆ.
    * ಕೌಶಲ್​ ಕಿಶೋರ್​ (61): ಉತ್ತರ ಪ್ರದೇಶದ ಅವಧ್​ನವರು. ಮೋಹನ್​ಲಾಲ್​ಗಂಜ್​ನ ಲೋಕಸಭಾ ಸದಸ್ಯ. ಎರಡನೇ ಅವಧಿಗೆ ಸಂಸದ.
    * ಅಜಯ್​ ಭಟ್​ (60):  ಉತ್ತರಾಖಂಡದ ಅಲ್ಮೋರಾದವರು. ನೈನಿತಾಲ್​&ಉಧಂಸಿಂಗ್​ ನಗರದ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದರಾಗಿದ್ದಾರೆ.  .
    * ಬಿಎಲ್​ ವರ್ಮಾ (59):  ಉತ್ತರ ಪ್ರದೇಶದ ರೋಹಿಲಾಖಂಡದವರು. ರಾಜ್ಯಸಭೆಯಲ್ಲಿ ಉತ್ತರಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮೊದಲ ಬಾರಿಗೆ ಸಂಸದ.
    * ಅಜಯ್​ ಕುಮಾರ್​ (60):  ಉತ್ತರ ಪ್ರದೇಶದ ಅವಧ್​ನವರು. ಖೇರಿ ಲೋಕಸಭಾ ಸದಸ್ಯ. ಎರಡನೇ ಅವಧಿಗೆ ಸಂಸದ.
    * ಚೌಹಾನ್​ ದೇವುಸಿನ್ಹಾ (56):  ಗುಜರಾತಿನ ಖೇಡಾದವರು. ಖೇಡಾ ಲೋಕಸಭಾ ಸದಸ್ಯ. ಎರಡನೇ ಅವಧಿಗೆ ಸಂಸದ.
    * ಕಪಿಲ್​ ಮೊರೇಶ್ವರ ಪಾಟೀಲ್​ (60):  ಮಹಾರಾಷ್ಟ್ರದ ಕೊಂಕಣದವರು. ಭಿವಾಂಡಿ ಲೋಕಸಭಾ ಸದಸ್ಯ. ಎರಡನೇ ಬಾರಿಗೆ ಸಂಸದ.
    * ಪ್ರತಿಮಾ ಭೌಮಿಕ್​ (52):  ತ್ರಿಪುರಾದ ಅಗರ್ತಲಾದವರು. ತ್ರಿಪುರಾ ವೆಸ್ಟ್​ ಲೋಕಸಭಾ ಸದಸ್ಯೆ. ಮೊದಲ ಬಾರಿಗೆ ಸಂಸದರಾದರು.
    * ಡಾ.ಸುಭಾಶ್​ ಸರ್ಕಾರ್​ (67): ಪಶ್ಚಿಮ ಬಂಗಾಳ ಮೇದಿನಿಪುರದವರು. ಬಂಕುರಾ ಲೋಕಸಭಾ ಸದಸ್ಯ.
    * ಡಾ.ಭಾಗವತ್​ ಕಿಶನ್​ರಾವ್​ ಕರಾಡ್​ (64):  ಮಹಾರಾಷ್ಟ್ರದ ಮರಾಠಾವಾಡದವರು. ರಾಜ್ಯಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.
    * ಡಾ.ರಾಜಕುಮಾರ್​ ರಂಜನ್​ ಸಿಂಗ್​ (68) : ಮಣಿಪುರದ ಇಂಾಲದವರು. ಇನ್ನರ್​ ಮಣಿಪುರದ ಲೋಕಸಭಾ ಸದಸ್ಯ.
    * ಡಾ.ಭಾರತಿ ಪ್ರವಿಣ್​ ಪವಾರ್​ (42): ಮಹಾರಾಷ್ಟ್ರದ ಖಂದೇಶದವರು. ದಿಂಡೋರಿ ಲೋಕಸಭಾ ಸದಸ್ಯೆ. ಮೊದಲ ಬಾರಿಗೆ ಸಂಸದೆ.
    * ಬಿಸ್ವೇಶ್ವರ ತುಡು (56):  ಒಡಿಶಾದ ಕಟಕ್​ ಮೂಲದವರು. ಮಯೂರ್​ಭಂಜ್​ ಕ್ಷೇತ್ರದ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.
    * ಶಂತನು ಠಾಕೂರ್​ (38): ಪಶ್ಚಿಮ ಬಂಗಾಳದ ಪ್ರೆಸಿಡೆನ್ಸಿಯವರು. ಬೋನ್​ಗಾಂವ್​ನ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.
    * ಡಾ.ಮಂಜಪಾರಾ ಮಹೇಂದ್ರಭಾಯ್​ (52)
    ಗುಜರಾತಿನ ಸುರೇಂದ್ರನಗರದವರು. ಇದೇ ಕ್ಷೇತ್ರದ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.
    * ಜಾನ್​ ಬಾರ್ಲಾ (45): ಪಶ್ಚಿಮ ಬಂಗಾಳದ ಜಲಪಾಯ್​ಗುರಿಯವರು. ಅಲಿಪುರದೌರ್ಸ್​ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.
    * ಡಾ.ಎಲ್​.ಮುರುಗನ್​ (44) ತಮಿಳುನಾಡಿನ ಕೊಂಗುನಾಡಿನವರು. ಮದ್ರಾಸ್​ ಹೈಕೋರ್ಟ್​ನಲ್ಲಿ ನ್ಯಾಯವಾದಿಯಾಗಿ 15 ವರ್ಷ ಕೆಲಸ. (ಸಂಸದರಲ್ಲ )
    * ನಿತೀಶ್​ ಪ್ರಾಮಾಣಿಕ್​ (35)
    ಪಶ್ಚಿಮ ಬಂಗಾಳದ ಜಲಪೈಗುರಿಯವರು. ಕೂಚ್​ಬೆಹರ್​ನ ಲೋಕಸಭಾ ಸದಸ್ಯ. ಮೊದಲ ಬಾರಿಗೆ ಸಂಸದ.

    ಮೋದಿ ಸಂಪುಟ 2.0+ 
    * ನರೇಂದ್ರ ಮೋದಿ  ಪ್ರಧಾನ ಮಂತ್ರಿ (ಸಿಬ್ಬಂದಿ, ಸಾರ್ವಜನಿಕ ಅಹವಾಲು, ಪಿಂಚಣಿ; ಅಣುಶಕ್ತಿ, ಬಾಹ್ಯಾಕಾಶ, ಪ್ರಮುಖ ನೀತಿ ರ್ನಿಣಯ; ಹಂಚಿಕೆಯಾಗದ ಎಲ್ಲ ಖಾತೆಗಳು)

    ಕ್ಯಾಬಿನೆಟ್​ ಸಚಿವರು 
    * ರಾಜನಾಥ್​ ಸಿಂಗ್​ – ರಕ್ಷಣೆ
    * ಅಮಿತ್​ ಷಾ – ಗೃಹ, ಸಹಕಾರ (ಹೊಸ ಸಚಿವಾಲಯ)
    * ನಿತಿನ್​ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    * ನಿರ್ಮಲಾ ಸೀತಾರಾಮನ್​ – ವಿತ್ತ ಸಚಿವೆ
    * ನರೇಂದ್ರ ಸಿಂಗ್​ ತೋಮರ್​ – ಕೃಷಿ ಮತ್ತು ರೈತ ಕಲ್ಯಾಣ
    * ಡಾ.ಎಸ್​.ಜೈಶಂಕರ್​ – ವಿದೇಶಾಂಗ ವ್ಯವಹಾರ
    * ಸ್ಮತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    * ಪಿಯೂಷ್​ ಗೋಯೆಲ್​ – ವಾಣಿಜ್ಯ ಮತ್ತು ಕೈಗಾರಿಕೆ; ಗ್ರಾಹಕ ವ್ಯವಹಾರ; ಆಹಾರ, ಸಾರ್ವಜನಿಕ ವಿತರಣೆ, ಜವಳಿ
    * ಧಮೇರ್ಂದ್ರ ಪ್ರಧಾನ್​ – ಶಿಕ್ಷಣ; ಕೌಶಲ ಅಭಿವೃದ್ಧಿ
    * ಪ್ರಲ್ಹಾದ್​ ಜೋಶಿ – ಸಂಸದೀಯ ವ್ಯವಹಾರ; ಗಣಿ
    * ನಾರಾಯಣ ರಾಣೆ – ಎಂಎಸ್​ಎಂಇ
    * ಸರ್ಬಾನಂದ ಸೊನೊವಾಲ್​ – ಬಂದರು, ಶಿಪ್ಪಿಂಗ್​,
    * ಮುಕ್ತಾರ್​ ಅಬ್ಬಾಸ್​ ನಖ್ವಿ – ಅಲ್ಪಸಂಖ್ಯಾತ ವ್ಯವಹಾರ
    * ಡಾ.ವೀರೇಂದ್ರ ಕುಮಾರ್​ – ಸಾಮಾಜಿಕ ನ್ಯಾಯ
    * ಗಿರಿರಾಜ್​ ಸಿಂಗ್​ – ಗ್ರಾಮೀಣ ಅಭಿವೃದ್ಧಿ
    * ಜ್ಯೋತಿರಾದಿತ್ಯ ಸಿಂಧಿಯಾ – ನಾಗರಿಕ ವಿಮಾನಯಾನ
    * ರಾಮಚಂದ್ರ ಪ್ರಸಾದ್​ ಸಿಂಗ್​ – ಉಕ್ಕು
    * ಅಶ್ವಿನಿ ವೈಷ್ಣವ್​ – ರೈಲ್ವೆ; ಸವಂಹನ; ಇಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ
    * ಪಶುಪತಿ ಕುಮಾರ್​ ಪಾರಸ್​ – ಕೈಗಾರಿಕೆ
    * ಗಜೇಂದ್ರ ಸಿಂಗ್​ ಶೇಖಾವತ್​ – ಜಲಶಕ್ತಿ
    * ಕಿರೆಣ್​ ರಿಜಿಜು – ಕಾನೂನು ಮತ್ತು ನ್ಯಾಯ
    * ರಾಜಕುಮಾರ್​ ಸಿಂಗ್​ – ವಿದ್ಯುತ್​; ಹೊಸ ಮತ್ತು ನವೀಕರಿಸಬಹುದಾದ ಇಂಧನ
    * ಹರ್​ದೀಪ್​ ಸಿಂಗ್​ ಪುರಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ವಸತಿ ಮತ್ತು ನಗರ ವ್ಯವಹಾರ
    * ಮನ್​ಸುಖ್​ ಮಾಂಡವೀಯ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ರಾಸಾಯನಿಕ ಮತ್ತು ರಸಗೊಬ್ಬರ
    * ಭೂಪೇಂದ್ರ ಯಾದವ್​ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ; ಕಾರ್ಮಿಕ ಮತ್ತು ಉದ್ಯೋಗ
    * ಡಾ.ಮಹೇಂದ್ರ ನಾಥ ಪಾಂಡೆ – ಬೃಹತ್​ ಕೈಗಾರಿಕೆ
    * ಪುರುಷೋತ್ತಮ ರೂಪಾಲ – ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ
    * ಜಿ.ಕಿಶನ್​ ರೆಡ್ಡಿ – ಸಂಸ್ಕೃತಿ; ಪ್ರವಾಸೋದ್ಯಮ; ಈಶಾನ್ಯ ಪ್ರದೇಶ ಅಭಿವೃದ್ಧಿ
    * ಅನುರಾಗ್​ ಸಿಂಗ್​ ಠಾಕೂರ್​ – ಮಾಹಿತಿ ಮತ್ತು ಪ್ರಸಾರ; ಯುವಜನ ಮತ್ತು ಕ್ರೀಡೆ

    ಸ್ವತಂತ್ರ ಖಾತೆ ರಾಜ್ಯ ಸಚಿವರು 
    * ರಾವ್​ ಇಂದ್ರಜಿತ್​ ಸಿಂಗ್​ & ಸಾಂಖ್ಯಿಕ, ಯೋಜನಾ ಅನುಷ್ಠಾನ
    * ಡಾ.ಜಿತೇಂದ್ರ ಸಿಂಗ್​ & ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ; ಪಿಎಂಒ; ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ; ಅಣುಶಕ್ತಿ; ಬಾಹ್ಯಾಕಾಶ
    ರಾಜ್ಯ ಸಚಿವರು
    * ಶ್ರೀಪಾದ ಯೆಸ್ಸೋ ನಾಯಕ್​ – ಬಂದರು, ಜಲಮಾರ್ಗ; ಪ್ರವಾಸೋದ್ಯಮ
    * ಗ್ಗನ್​ಸಿಂಗ್​ ಕುಲಸ್ತೆ – ಉಕ್ಕು; ಗ್ರಾಮೀಣಾಭಿವೃದ್ಧಿ
    * ಪ್ರಹ್ಲಾದ್​ ಸಿಂಗ್​ ಪಟೇಲ್​ – ಜಲಶಕ್ತಿ; ಆಹಾರ ಸಂಸ್ಕರಣೆ ಕೈಗಾರಿಕೆ
    * ಅಶ್ವಿನಿ ಕುಮಾರ್​ ಚೌಬೆ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    * ಅರ್ಜುನ್​ ರಾಮ್​ ಮೇವಾಲ್​ – ಸಂಸದೀಯ ವ್ಯವಹಾರ; ಸಂಸತಿ
    * ವಿಕೆ ಸಿಂಗ್​ – ರಸ್ತೆ ಸಾರಿಗೆ ಮತ್ತು ಹೆದ್ದಾರಿ; ನಾಗರಿಕ ವಿಮಾನ ಯಾನ
    * ಕೃಶನ್​ ಪಾಲ್​ – ವಿದ್ಯುತ್​, ಬೃಹತ್​ ಕೈಗಾರಿಕೆ
    * ದನ್ವೆ ರಾವ್​ಸಾಹೇಬ್​ ದಾದಾರಾವ್​ – ರೈಲ್ವೆ; ಕಲ್ಲಿದ್ದಲು; ಗಣಿ
    * ರಾಮದಾಸ್​ ಅಟವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    * ಸಾಧ್ವಿ ನಿರಂಜನ ಜ್ಯೋತಿ – ಗ್ರಾಹಕ ವ್ಯವಹಾರ, ಗ್ರಾಮೀಣಾಭಿವೃದ್ಧಿ
    * ಡಾ.ಸಂಜೀವ್​ ಕುಮಾರ್​ ಬಲ್ಯನ್​ – ಮೀನುಗಾರಿಕೆ ಮತ್ತು ಹೈನುಗಾರಿಕೆ
    * ನಿತ್ಯಾನಂದ ರಾಯ್​ – ಗೃಹ ಖಾತೆ
    * ಪಂಕಜ್​ ಚೌಧರಿ – ವಿತ್ತ
    * ಪ್ರೊೆಸರ್​ ಎಸ್​.ಪಿ.ಸಿಂಗ್​ ಭಗೇಲ್​ – ಕಾನೂನು ಮತ್ತು ನ್ಯಾಯ
    * ಭಾನು ಪ್ರತಾಪ್​ ಸಿಂಗ್​ ವರ್ಮಾ – ಎಂಎಸ್​ಎಂಇ
    * ದರ್ಶನ ವಿಕ್ರಮ್​ ಜರದೋಶ್​ – ಜವಳಿ; ರೈಲ್ವೆ
    * ವಿ.ಮುರಳೀಧರನ್​ – ವಿದೇಶಾಂಗ ವ್ಯವಹಾರ; ಸಂಸತಿ
    * ಸೋಮ್​ ಪ್ರಕಾಶ್​ – ವಾಣಿಜ್ಯ ಮತ್ತು ಕೈಗಾರಿಕೆ
    * ರೇಣುಕಾ ಸಿಂಗ್​ ಸರುತಾ – ಬುಡಕಟ್ಟು
    * ರಾಮೇಶ್ವರ್​ ತೇಲಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
    * ಕೈಲಾಶ್​ ಚೌಧರಿ – ಕೃಷಿ ಮತ್ತು ರೈತ ಕಲ್ಯಾಣ
    * ಅನ್ನಪೂರ್ಣ ದೇವಿ – ಶಿಕ್ಷಣ
    * ಕೌಶಲ್​ ಕಿಶೋರ – ವಸತಿ ಮತ್ತು ನಗರಾಭಿವೃದ್ಧಿ
    * ಅಜಯ್​ ಭಟ್​ – ರಕ್ಷಣೆ; ಪ್ರವಾಸೋದ್ಯಮ
    * ಬಿ.ಎಲ್​.ವರ್ಮಾ – ಈಶಾನ್ಯ ಪ್ರದೇಶ ಅಭಿವೃದ್ಧಿ; ಸಹಕಾರ
    * ಅಜಯ್​ ಕುಮಾರ್​ – ಗೃಹ ಖಾತೆ
    * ದೇವುಸಿನ್ಹ ಚೌಹಾನ್​ – ಸಂವಹನ
    * ಕಪಿಲ್​ ಮೊರೇಶ್ವರಿ ಪಾಟೀಲ್​ – ಪಂಚಾಯತ್​ ರಾಜ್​
    * ಡಾ.ಸುಭಾಶ್​ ಸರ್ಕಾರ್​ – ಶಿಕ್ಷಣ
    * ಡಾ.ಭಾಗವತ್​ ಕಿಶನ್​ರಾವ್​ ಕರಾಡ್​ – ವಿತ್ತ
    * ಡಾ.ರಾಜಕುಮಾರ್​ ರಂಜನ್​ ಸಿಂಗ್​ – ವಿದೇಶಾಂಗ ವ್ಯವಹಾರ; ಶಿಕ್ಷಣ
    * ಡಾ.ಸುಭಾಶ್​ ಸರ್ಕಾರ್​ – ಶಿಕ್ಷಣ
    * ಡಾ.ಭಾಗವತ್​ ಕಿಶನ್​ರಾವ್​ ಕರಾಡ್​ – ವಿತ್ತ
    * ಡಾ.ರಾಜಕುಮಾರ್​ ರಂಜನ್​ ಸಿಂಗ್​ – ವಿದೇಶಾಂಗ ವ್ಯವಹಾರ; ಶಿಕ್ಷಣ
    * ಡಾ. ಭಾರತಿ ಪ್ರವಿಣ್​ ಪವಾರ್​ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ * ವಿಶ್ವೇಶ್ವರ ಟುಡು – ಬುಡಕಟ್ಟು; ಜಲಶಕ್ತಿ
    * ಶಂತನು ಠಾಕೂರ್​ – ಬಂದರು, ಶಿಪ್ಪಿಂಗ್​ ಮತ್ತು ಜಲಮಾರ್ಗ
    * ಡಾ.ಮುಂಜಪಾರಾ ಮಹೇಂದ್ರ ಭಾಯಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ; ಆಯುಷ್​
    * ಜಾನ್​ ಬಾರ್ಲಾ – ಅಲ್ಪಸಂಖ್ಯಾತ ವ್ಯವಹಾರ
    * ಡಾ.ಎಲ್​.ಮುರುಗನ್​ – ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ; ಮಾಹಿತಿ ಮತ್ತು ಪ್ರಸಾರ ಖಾತೆ
    * ನಿಶಿತ್​ ಪ್ರಾಮಾಣಿಕ್​ – ಗೃಹ ಖಾತೆ; ಯುವಜನ ಮತ್ತು ಕ್ರೀಡೆ

    ಪ್ರಮುಖ ನಾಯಕರಿಗೆ ಕೊಕ್​ 
    ಸಂಪುಟ ಪುನಾರಚನೆಗೆ ಮುನ್ನ ಹಲವು ಪ್ರಮುಖ ಸಚಿವರು ರಾಜೀನಾಮೆ ನೀಡಿದ್ದಾರೆ.
    * ಡಾ.ರವಿಶಂಕರ ಪ್ರಸಾದ್​ & ಟೆಲಿಕಾಂ ಸಚಿವ
    * ಡಾ.ಹರ್ಷವರ್ಧನ್​ & ಆರೋಗ್ಯ ಸಚಿವ
    * ಪ್ರಕಾಶ ಜಾವಡೇಕರ್​ & ಮಾಹಿತಿ, ಪ್ರಸಾರ ಸಚಿವ
    * ಡಾ.ರಮೇಶ್​ ಪೋಖ್ರಿಯಾಲ್​ & ಶಿಕ್ಷಣ ಸಚಿವ
    * ಡಿ.ವಿ.ಸದಾನಂದ ಗೌಡ & ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
    * ಸಂತೋಷ್​ ಗಂಗ್ವಾರ್​ & ಕಾರ್ಮಿಕ ಸಚಿವ
    * ಸಂಜಯ್​ ಧೋತ್ರೆ & ಶಿಕ್ಷಣ ಖಾತೆ ರಾಜ್ಯ ಸಚಿವ
    * ಥಾವರಚಂದ್​ ಗೆಹಲೋತ್​ & ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    * ದೇಬಶ್ರೀ ಚೌಧುರಿ & ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ
    * ರತನ್​ ಲಾಲ್​ ಕಟಾರಿಯಾ & ಜಲಶಕ್ತಿ ಮತ್ತು ಸಾಮಾಜಿ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ
    * ಪ್ರತಾಪ ಚಂದ್ರ ಸಾರಂಗಿ & ಪಶುಸಂಗೋಪನೆ, ಹೈನುಗಾರಿಕೆ  ಎಂಎಸ್​ಎಂಇ ಖಾತೆ ರಾಜ್ಯ ಸಚಿವ
    * ಬಾಬುಲ್​ ಸುಪ್ರಿಯೊ & ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ

    ಯುವ ಮೋರ್ಚಾಗೆ  ಸೌಮಿತ್ರ ಖಾನ್​ ರಾಜೀನಾಮೆ
    ತಮ್ಮನ್ನು ಮಂತ್ರಿ ಮಾಡಲಿಲ್ಲವೆಂದು ಮುನಿಸಿಕೊಂಡ ಪಶ್ಚಿಮ ಬಂಗಾಳದ ನಾಯಕ ಸೌಮಿತ್ರ ಖಾನ್​, ಬಂಗಾಳದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ. ತಮಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ ಖಾನ್​, ಮಧ್ಯಾಹ್ನ 1 ಗಂಟೆಯವರೆಗೂ ದೆಹಲಿಯಲ್ಲಿ ಪ್ರಧಾನಮಂತ್ರಿ ಕಚೇರಿಯ ದೂರವಾಣಿ ಕರೆಗಾಗಿ ಕಾಯುತ್ತಿದ್ದರು. ನಂತರ ತೀವ್ರ ಅಸಮಾಧಾನಗೊಂಡು ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ೇಸ್​ಬುಕ್​ನಲ್ಲಿ ಪ್ರಕಟಿಸಿದರು. ಆದರೆ, ಪಕ್ಷ$ ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಂತರ ಕೋಲ್ಕತಕ್ಕೆ ತೆರಳಿದ ಅವರು, ಮುಕುಲ್​ ರಾಯ್​ ಭೇಟಿಯಾಗಿ ಅವರ ಪತ್ನಿ ನಿಧನಕ್ಕೆ (ಮಂಗಳವಾರ ನಿಧನ) ಸಂತಾಪ ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯ್​ ಇತ್ತೀಚೆಗಷ್ಟೆ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರು.

    ಮಂತ್ರಿ ಪರಿಷತ್​ನ  ಸರಾಸರಿ ವಯಸ್ಸು 58 ವರ್ಷ
    ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರದ ಎರಡನೇ ಅವಧಿಯಲ್ಲಿ 2ನೇ ಸಾರಿಗೆ ರಚಿಸಿರುವ ಮಂತ್ರಿ ಮಂಡಲದ ಸದಸ್ಯರ ಸರಾಸರಿ ವಯಸ್ಸು 58 ವರ್ಷ. 2019ರಲ್ಲಿ ರಚಿಸಿದ್ದ ಮಂತ್ರಿ ಮಂಡಳದ ಸದಸ್ಯರ ಸರಾಸರಿ ವಯಸ್ಸು 61 ಆಗಿತ್ತು. ಬುಧವಾರ ನಡೆದ ಪುನರ್​ ರಚನೆಯಲ್ಲಿ ಮೂರು ವರ್ಷ ಇಳಿಕೆಯಾಗಿದೆ. ಹೊಸದಾಗಿ ಸಚಿವರಾದ 43 ಜನರ ಸರಾಸರಿ ವಯಸ್ಸು 56 ವರ್ಷವಾಗಿದೆ.  77 ಸಚಿವರನ್ನು ಒಳಗೊಂಡ ಕೇಂದ್ರ ಮಂತ್ರಿ ಮಂಡಲದಲ್ಲಿ  ನಿಶಿತ್​ ಪ್ರಾಮಾಣಿಕ್​ (35) ಅತ್ಯಂತ ಕಿರಿಯ ವಯಸ್ಸಿನ ಸಚಿವರಾದರೆ, ಸೋಮ್​ ಪ್ರಕಾಶ್​ (72) ಹಿರಿಯ ವಯಸ್ಸಿನ ಸದಸ್ಯರಾಗಿದ್ದಾರೆ. 50 ವರ್ಷಕ್ಕಿಂತ ಕೆಳಗಿನವರ ಪೈಕಿ ಸ್ಮ$ತಿ ಇರಾನಿ (45), ಕಿರಣ್​ ರಿಜುಜು (49), ಮನಸುಖ್​ ಮಾಂಡವೀಯಾ (49), ಕೈಲಾಶ್​ ಚೌಧರಿ (47), ಸಂಜೀವ್​ ಬಾಲ್ಯಾನ್​ (49), ಅನುರಾಗ್​ ಠಾಕೂರ್​ (46),  ಡಾ.ಭಾರತಿ ಪ್ರವಿಣ್​ ಪವಾರ್​ (42), ಅನುಪ್ರಿಯಾ ಸಿಂಗ್​ ಪಟೇಲ್​ (40), ಶಂತನು ಠಾಕೂರ್​ (38), ಜಾನ್​ ಬಾರ್ಲಾ (45), ಡಾ. ಎಲ್​. ಮುರುಗನ್​ (44) ಇದ್ದಾರೆ.

    ಸಪ್ತ ಸಚಿವೆಯರು 
    ಬುಧವಾರ ಪ್ರಮಾಣ ವಚನ ಸ್ವೀಕರಿಸಿದ 43 ಸಚಿವರ ಪೈಕಿ ಏಳು ಮಹಿಳೆಯರಿದ್ದು, ಮೂರನೇ ಒಂದು ಪಾಲನ್ನು ಪಡೆದಿದ್ದಾರೆ. ಆದರೆ, ಸಂಪುಟ ದರ್ಜೆಯ ಇಬ್ಬರೇ ಮಹಿಳೆಯರು (ನಿರ್ಮಲಾ ಸೀತಾರಾಮನ್​ ಮತ್ತು ಸ್ಮ$ತಿ ಇರಾನಿ) ಇದ್ದಾರೆ. ರಾಜ್ಯ ಖಾತೆ ಸಚಿವೆಯರಾದ  ನಿರಂಜನಾ ಜ್ಯೋತಿ, ರೇಣುಕಾ ಸಿಂಗ್​ ಸೇರಿಒಟ್ಟಾರೆ ಮಂತ್ರಿ ಮಂಡಲದಲ್ಲಿ ಮಹಿಳೆಯರ ಸಂಖ್ಯೆ 11 ಆಗಿದೆ.   ಹೊಸದಾಗಿ ಮಂತ್ರಿಗಳಾದ ಮಹಿಳೆಯರು: ಅನುಪ್ರಿಯಾ ಸಿಂಗ್​ ಪಟೇಲ್​ (ಉತ್ತರ ಪ್ರದೇಶ), ಶೋಭಾ ಕರಂದ್ಲಾಜೆ (ಕರ್ನಾಟಕ), ಮೀನಾ ಲೇಖಿ (ದೆಹಲಿ), ಪ್ರತಿಮಾ ಭೌಮಿಕ್​ (ತ್ರಿಪುರಾ), ದರ್ಶನಾ ವಿಕ್ರಂ ಜರದೋಷ್​ (ಗುಜರಾತ್​), ಅನ್ನಪೂರ್ಣದೇವಿ ದೇವಿ (ಬಿಹಾರ), ಡಾ.ಭಾರತಿ ಪ್ರವಿಣ್​ ಪವಾರ್​ (ಮಹಾರಾಷ್ಟ) 2019ರಲ್ಲಿ ಪ್ರಧಾನಿ ನರೇಂದ್ರ  ಮೋದಿ ಎರಡನೇ ಅವಧಿ ಆರಂಭವಾದಾಗ ಸಂಪುಟದಲ್ಲಿ ಮೂವರು ಸಚಿವೆಯರಿದ್ದರು. ಅಕಾಲಿ ದಳ ಎನ್​ಡಿಎ ತೊರೆದ ಕಾರಣ ಹರ್​ಸಿಮ್ರತ್​ ಕೌರ್​ ಬಾದಲ್​ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಮೂವರು ರಾಜ್ಯ ಖಾತೆ ಸಚಿವೆಯರು ಇದ್ದರು.(ಒಟ್ಟು ಸಂಖ್ಯೆ 6) ಈ ಪೈಕಿ ದೇಬಶ್ರೀ ಚೌಧರಿಯನ್ನು ಈ ಪುನರ್​ ರಚನೆಯಲ್ಲಿ ಕೈಬಿಡಲಾಗಿದೆ.

    ಚಿರಾಗ್​ ಪಾಸ್ವಾನ್​ ಸಿಟ್ಟು
    ಪಕ್ಷ$ವನ್ನು ಇಬ್ಭಾಗ ಮಾಡಿದ ಸೋದರ ಸಂಬಂಧಿ ಪಶುಪತಿ ಕುಮಾರ್​ ಪರಸ್​ಗೆ ಸಚಿವ ಸ್ಥಾನ ನೀಡಿರುವುದಕ್ಕೆ ಲೋಕಜನ ಶಕ್ತಿ ಪಕ್ಷದ (ಎಲ್​ಜಿಪಿ) ನಾಯಕ ಚಿರಾಗ್​ ಪಾಸ್ವಾನ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಎಲ್​ಜಿಪಿಯ ಭಾಗವೇ ಆಗಿರದ ಪಶುಪತಿ ಅವರಿಗೆ ಮಂತ್ರಿಗಿರಿ ನೀಡಿರುವುದು ನಮಗೆ  ಪ್ರಾತಿನಿಧ್ಯ ನೀಡಿದಂತೆ ಆಗುವುದಿಲ್ಲ ಎಂದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts