More

    ಖಾತೆ ಬದಲಾವಣೆ ವಿಚಾರ: ಶ್ರೀರಾಮುಲುಗೆ ಸಿಎಂ ಭೇಟಿಗೆ ಕೊನೆಗೂ ಸಿಕ್ತು ಅವಕಾಶ

    ಬೆಂಗಳೂರು: ಖಾತೆ ಬದಲಾವಣೆಯಿಂದ ಅಸಮಾಧಾಗೊಂಡಿದ್ದ ಸಚಿವ ಶ್ರೀರಾಮುಲು ಅವರಿಗೆ ನಿನ್ನೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದು ಸಾಧ್ಯವಾಗಿರಲಿಲ್ಲ. ಸಾಕಷ್ಟು ಅಸಮಾಧಾನವನ್ನು ತೋಡಿಕೊಂಡಿದ್ದ ಅವರಿಗೆ ಇಂದು ಕೊನೆಗೂ ಸಿಎಂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ.

    ಬೆಳಗ್ಗೆ 10 ಗಂಟೆಗೆ ಭೇಟಿಗೆ ಸಮಯ ನೀಡಿದ್ದ ಸಿಎಂ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದರು. ಇದೇ ವೇಳೆ ಸಚಿವ ಸುಧಾಕರ್ ಕೂಡ ಆಗಮಿಸಿದ್ದು, ಇಬ್ಬರು ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದರು. ಖಾತೆ ಬದಲಾವಣೆ ನಿರ್ಧಾರದಿಂದಾಗಿ ಉಂಟಾದ ಸಮಸ್ಯೆ, ಸಂದೇಹಗಳನ್ನು ಬಗೆಹರಿಸುವುದಕ್ಕಾಗಿ ಎಲ್ಲವನ್ನೂ ವಿವರಿಸಿ ಹೇಳಿದರು. ಈ ಮಾತುಕತೆಯ ನಂತರ ನಗುನಗುತ್ತಲೇ ಹೊರಬಂದ ಸಚಿವರಿಬ್ಬರೂ ಮಾಧ್ಯಮಕ್ಕೆ ಗೊಂದಲ ಪರಿಹಾರವಾದ ವಿಚಾರವನ್ನು ತಿಳಿಸಿದರು.

    ಇದನ್ನೂ ಓದಿ: ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ: ಇಮ್ರಾನ್ ಖಾನ್​ಗೆ​ ಸುಪ್ರೀಂ ನೋಟಿಸ್ !

    ನಾನು ಈ ಹಿಂದೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಹಲವು ಕಾರಣದಿಂದ ನನಗೆ ಆರೋಗ್ಯ ಇಲಾಖೆ ‌ನೀಡಿದ್ದರು. ಇದೀಗ ನನಗೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ. ನನಗೆ ಯಾವುದೇ ಅಸಮಾಧಾನ ವಿಲ್ಲ. ಸುಧಾಕರ್ ಸ್ವತಃ ವೈದ್ಯರಾಗಿದ್ದು ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊರೊನಾ ವಿರುದ್ದ ಹೋರಾಟದಲ್ಲಿ ಸುಧಾಕರ್ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಸಿಎಂ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

    ನೌಕರರಿಗೆ ದಸರಾ ಗಿಫ್ಟ್: ಕೇಂದ್ರ ಸಿಬ್ಬಂದಿಗೆ ಎಲ್​ಟಿಸಿ ನಗದು ವೋಚರ್​, 10,000 ರೂಪಾಯಿ ಅಡ್ವಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts