More

    ಶ್ರೀರಾಮುಲು ಮತದಾರರಿಗೆ ಕೊಟ್ಟ ಮಾತು ಈಡೇರಿಸಲಿ

    ಕಂಪ್ಲಿ:ಬಿಜೆಪಿ ಪುರಸಭಾಡಳಿತ ಚುಕ್ಕಾಣಿ ಹಿಡಿದ 24 ತಾಸಿನೊಳಗೆ ಪಟ್ಟಾ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಮತದಾರರಿಗೆ ಮಾತು ಕೊಟ್ಟಂತೆ ಕೂಡಲೇ ಪಟ್ಟಾ ಹಿಡಿದು ಕಂಪ್ಲಿಗೆ ಬರಲಿ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ಇಲ್ಲಿನ ಚಿಕ್ಕಜಾಯಿಗನೂರು ರಸ್ತೆಯ ಸೋಮೇಶ್ವರ ಬಡಾವಣೆ ಬಳಿ ಮಂಗಳವಾರ 3.39 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಿಕ್ಕಜಾಯಿಗನೂರು-ಕೆಎಸ್‌ಎಫ್ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    2019ರಲ್ಲಿ ಜರುಗಿದ ಪುರಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಫ್ಯಾಕ್ಟ್ರಿಯ ಬಂಡಿಗೇಟ್, ಹುಲಿಗೆಮ್ಮ ಕ್ಯಾಂಪ್, ವಾಲ್ಮೀಕಿ ನಗರದ ನಿವಾಸಿಗಳಿಗೆ 24 ತಾಸಿನೊಳಗೆ ಪಟ್ಟಾ ಕೊಡುವುದಾಗಿ ಹೇಳಿ ಮತ ಪಡೆದಿದ್ದರು.ಆದರೆ ಇಂದಿಗೂ ಪಟ್ಟಾ ನೀಡದೆ ಮತದಾರರಿಗೆ ಕೊಟ್ಟ ಭರವಸೆ ಹುಸಿಗೊಳಿಸಿದ್ದಾರೆ. ಕೂಡಲೇ ನಿವಾಸಿಗಳಿಗೆ ಪಟ್ಟಾ ಕೊಟ್ಟು ಮಾತು ಉಳಿಸಿಕೊಳ್ಳಲಿ.ಕಳೆದ 20 ವರ್ಷಗಳಿಂದಲೂ ಅಭಿವೃದ್ಧಿ ಕಾಣದಿರುವ ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಮುಂದಾಗಿದ್ದೇನೆ ಎಂದರು.

    ಹುಲಿಗೆಮ್ಮ ಕ್ಯಾಂಪ್, ಬಂಡಿಗೇಟ್, ವಾಲ್ಮೀಕಿನಗರದ ಜನತೆ ಪಟ್ಟಾ ಕೊಡುವಂತೆ ಶಾಸಕರ ಕಾಲಿಗೆ ಬಿದ್ದು ಕಣ್ಣೀರು ಇಟ್ಟರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಖಂಡಿತಾ ಪಟ್ಟಾ ಕೊಡುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಜಿ.ಪ್ರಸಾದ್, ಹಬೀಬ್ ರೆಹಮಾನ್, ಬಿ.ಜಾಫರ್, ಕೃಷ್ಣ, ಹೊನ್ನೂರಪ್ಪ, ಒಬಳೇಶ್, ಖಾಸಿಮ್, ಅಕ್ತರ್‌ಬೀ, ಹನುಮಕ್ಕ, ಹುಸೇನ್‌ಬೀ, ತಿಮ್ಮಕ್ಕ, ರಾಧಮ್ಮ, ಗಂಗಮ್ಮ, ಟಿ.ವೀರೇಶ್, ಉಪ್ಪಾರು ಪಕ್ಕಿರಪ್ಪ, ಮೆಹಬೂಬ್, ನಾಗರಾಜಾಚಾರ್, ಗೋಪಾಲ್, ಮಾಬು, ದೊಡ್ಡಬಸಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts