More

    ಡ್ರಗ್ಸ್​ ಪ್ರಕರಣದಲ್ಲಿ ಸಚಿವರ ಅಳಿಯನ ಹೆಸರು; ವಿಚಾರಣೆ ನಡೆಸಿದ ಎನ್​ಸಿಬಿ ಅಧಿಕಾರಿಗಳು

    ಮುಂಬೈ: ಬಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ಇದೀಗ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್ ಅವರ ಅಳಿಯ ಸಮೀರ್​ ಖಾನ್​ ಅವರ ಹೆಸರು ಕೇಳಿಬಂದಿದೆ. ಈ ವಿಚಾರವಾಗಿ ಸಮೀರ್​ ಖಾನ್​ರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.

    ಇದನ್ನೂ ಓದಿ: ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

    ಕಳೆದ ವಾರ ಡ್ರಗ್ಸ್​ ಮಾರಾಟದ ಆರೋಪದಡಿಯಲ್ಲಿ ಬ್ರಿಟಿಷ್​ ಪ್ರಜೆ ಕರಣ್​ ಅಜ್ನಾನಿ ಮತ್ತಿಬ್ಬರನ್ನು ಬಂಧಿಸಲಾಗಿತ್ತು. ಅವರ ಬಳಿ 200 ಕೆಜಿ ಡ್ರಗ್ಸ್​ ವಶ ಪಡಿಸಿಕೊಳ್ಳಲಾಗಿತ್ತು. ಅವರೊಂದಿಗೆ ಸಮೀರ್​ ಖಾನ್​ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅದೇ ಆರೋಪದಲ್ಲಿ ಇದೀಗ ಸಮೀರ್​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂಬೈ ದಕ್ಷಿಣದ ಎನ್​ಸಿಬಿ ಕಚೇರಿಗೆ ಸಮೀರ್​ ಬುಧವಾರ ಬೆಳಗ್ಗೆ 10 ಗಂಟೆಗೆ ಬಂದಿದ್ದು, ವಿಚಾರಣೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ‘ಗೋ ಮಾಂಸ ತಿನ್ನುವ ಸಿದ್ದರಾಮಯ್ಯಗೆ ಮೊದಲು ಶಿಕ್ಷೆಯಾಗಬೇಕು’ ಜಗದೀಶ್ ಶೆಟ್ಟರ್ ಹೇಳಿಕೆ

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಆಗಾಗ್ಗೆ ಭೇಟಿ ನೀಡುವ ಮುಂಬೈನ ಪ್ರಸಿದ್ಧ ‘ಮುಚಾದ್ ಪಾನ್ವಾಲಾ’ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್‌ಕುಮಾರ್ ತಿವಾರಿ ಅವರನ್ನು ಸಂಸ್ಥೆ ಮಂಗಳವಾರ ಬಂಧಿಸಿದೆ. (ಏಜೆನ್ಸೀಸ್​)

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts