More

    ಬಿಎಸ್​ವೈ ನಿಷ್ಠ ಶಾಸಕರಿಂದ ಕಟೀಲ್ ಭೇಟಿ, ದೂರು – ಕೆಲ ಮಂತ್ರಿಗಳ ವಿರುದ್ಧ ಆರೋಪ

    ಬೆಂಗಳೂರು : ಸಂಪುಟ ಪುನಾರಚನೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರಿಗೈಯಲ್ಲಿ ದೆಹಲಿಯಿಂದ ಹಿಂತಿರುಗಿದ ಬೆನ್ನಲ್ಲೇ ಅವರ ನಿಷ್ಠ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಕೆಲ ಸಚಿವರ ವಿರುದ್ಧ ದೂರು ನೀಡಿರುವುದು ಕುತೂಹಲಕ್ಕೆ ಎಡೆ ಮಾಡಿದೆ.

    ಕಾದುನೋಡಿ ಎಂದ ಕಟೀಲ್

    ಯಡಿಯೂರಪ್ಪ ಅವರಿಗೆ ವರಿಷ್ಠರು ಯಾವ ಸಂದೇಶ ನೀಡಬೇಕೋ ಅದನ್ನು ನೀಡಿದ್ದಾರೆ. ವರಿಷ್ಠರಿಗೆ ಇವರು ಏನು ಹೇಳಬೇಕೋ ಅದನ್ನು ತಿಳಿಸಿ ಬಂದಿದ್ದಾರೆ. ಸಚಿವ ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದನ್ನು ಕಾದುನೋಡಿ ಎಂದು ನಳೀನ್​ಕುಮಾರ್ ಕಟೀಲ್ ಮಾರ್ವಿುಕವಾಗಿ ನುಡಿದರು. ಪಕ್ಷದಲ್ಲಿ ಸಂಪುಟ ಸೇರಲು ಮೂಲ- ವಲಸಿಗರ ಸಂಘರ್ಷ ಏನೂ ಇಲ್ಲ. ಪಕ್ಷದ ಬಿ ಫಾರಂ ಪಡೆದು ಗೆದ್ದು ಬಂದವರೆಲ್ಲ ಬಿಜೆಪಿಗರು ಎಂದು ಸ್ಪಷ್ಟಪಡಿಸಿದರು.

    ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಶಂಕರ ಮುನೇನಕೊಪ್ಪ ಹಾಗೂ ಇತರ ಶಾಸಕರು ಕಟೀಲ್ ಅವರನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿದರು. ಕೆಲಸ ಮಾಡದ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಲು ಹೈಕಮಾಂಡ್ ಮನವೊಲಿಸುವಂತೆ ಒತ್ತಾಯಿಸಿದರು. ಶಾಸಕರಿಗೆ ಅನೇಕ ಸಚಿವರು ಸರಿಯಾದ ಗೌರವ ನೀಡುತ್ತಿಲ್ಲ. ಶಾಸಕರೊಂದಿಗೆ ಸಿಎಂ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ ಮಂತ್ರಿಗಳೇ ಪ್ರಯೋಜನವಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಸುಮಾರು 10 ಸಚಿವರು ಈ ರೀತಿ ಶಾಸಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆಂದು ಆರೋಪಿಸಿದರು.

    ನಾವೇನು ಪ್ರತ್ಯೇಕ ಸಭೆ ಮಾಡಲ್ಲ: ಸಚಿವರ ನಿರ್ಲಕ್ಷ್ಯದ ಬಗ್ಗೆ ನಾವು 35 ಶಾಸಕರು ಸಭೆ ನಡೆಸಬಹುದು. ಆದರೆ ಆ ರೀತಿಯ ಸಭೆ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವುದಿಲ್ಲ. ಹಾಗಾಗಿ ಸೋಮಾರಿ ಸಚಿವರನ್ನು ಕೈಬಿಟ್ಟು ಕ್ರಿಯಾಶೀಲರನ್ನು ಸಂಪುಟಕ್ಕೆ ಸೇರಿಸಿ ಎಂದು ಮನವಿ ಮಾಡಿದರು. ಶಾಸಕರ ದೂರು ಆಲಿಸಿದ ಕಟೀಲ್, ಸಚಿವರು ಕ್ಷೇತ್ರಗಳ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲವೆಂಬ ದೂರು ಬಂದಿವೆ. ಈ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ ಎಂಬ ಭರವಸೆಯನ್ನು ಕಟೀಲ್ ನೀಡಿದರು.

    ಮುನಿರತ್ನ ಭೇಟಿ: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಸಹ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಫಲಿತಾಂಶ ಬಂದ ನಂತರ ಅಧ್ಯಕ್ಷರನ್ನು ಭೇಟಿ ಮಾಡಿರಲಿಲ್ಲ. ಸಂಪುಟ ಸೇರ್ಪಡೆ ಬಗ್ಗೆ ಅಥವಾ ಖಾತೆ ಬಗ್ಗೆ ನಡೆಸಿಲ್ಲ. ಯಾವ ಖಾತೆ ಕೊಟ್ಟರೂ ನಿರ್ವಹಣೆ ಮಾಡುತ್ತೇನೆ ಎಂದು ಮುನಿರತ್ನ ಹೇಳಿದರು.

    ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts