More

    ಎಚ್​ಡಿಕೆ- ಡಿಕೆಶಿ ಇಬ್ಬರೂ ನಿವೃತ್ತ ಕುದುರೆಗಳು: ಸಿ.ಪಿ.ಯೋಗೇಶ್ವರ್

    ಚನ್ನಪಟ್ಟಣ: ಮಾಜಿ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ನಿವೃತ್ತ ಕುದುರೆಗಳು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದರು.

    ಎಂಎಲ್​ಸಿ ಆಗಿ ನಾಮನಿರ್ದೇನಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಯೋಗೇಶ್ವರ್​, ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೇಗೇಶ್ವರ್, ‘ಡಿಕೆಶಿ ಮತ್ತು ಎಚ್​ಡಿಕೆ ವಿರುದ್ಧ ಹೋರಾಡಲು ನನಗೆ ಕಷ್ಟವೇನಿಲ್ಲ. ಈ ಇಬ್ಬರೂ ರಿಟೈಡ್ ಆಗಿರುವ ಕುದುರೆಗಳು’ ಎಂದು ಕುಟುಕಿದರು.

    ಇದನ್ನೂ ಓದಿರಿ 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ಎಚ್​.ಡಿ. ಕುಮಾರಸ್ವಾಮಿ ಈಗ ಓರ್ವ ಸಾಮಾನ್ಯ ಶಾಸಕರಷ್ಟೆ. ನಾನು ಕೂಡ ಶಾಸಕ. ಅವರು ತಮ್ಮ ಪಕ್ಷವನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಅವರು ಬಹಳ ಹತಾಶೆಯಾಗಿದ್ದಾರೆ. ಅಧಿಕಾರ ಸಿಕ್ಕಾಗ ನಿಭಾಯಿಸಲು ಸಾಧ್ಯವಾಗಲಿಲ್ಲ. ಇದೀಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಯೇಗೇಶ್ವರ್​ ಟೀಕಿಸಿದರು.

    ಇನ್ನೊಂದೆಡೆ ನಮ್ಮ ಸ್ನೇಹಿತರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆಗಿದ್ದಾಗಲೇ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಅವರಿಗೆ ಸಿಕ್ಕಿರುವುದು ರಾಜಕೀಯ ಆಶ್ರಯ ನೀಡುವ ಹುದ್ದೆ. ಅದನ್ನು ಹೊರತುಪಡಿಸಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ ಎಂಬ ಆಶಯ ನನಗಿಲ್ಲ ಎಂದು ಡಿ.ಕೆ.ಶಿವಕುಮಾರ್​ರನ್ನು ಲೇವಡಿ ಮಾಡಿದರು. ಈ ಇಬ್ಬರ ವಿರುದ್ಧ ರಾಜಕೀಯ ಮಾಡಲು ನನಗೆ ಯಾವ ಸಮಸ್ಯೆಯೂ ಇಲ್ಲ ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದರು.

    ಇದನ್ನೂ ಓದಿರಿ ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

    ಕಳೆದ ಚುನಾವನೆಯಲ್ಲಿ ಸೋತ ಬೇಸರಕ್ಕೆ ಸಾರ್ವಜನಿಕ ಜೀವನದಿಂದ ದೂರವಿದ್ದೆ. ಇದೀಗ ಬಿಜೆಪಿ ಸರ್ಕಾರ ಮೇಲ್ಮನೆ ಸದಸ್ಯನಾಗಿಸುವ ಮೂಲಕ ನನಗೆ ರಾಜಕೀಯ ಶಕ್ತಿ ತುಂಬಿದೆ ಎನ್ನುತ್ತ ಸಿಪಿವೈ ಭಾವುಕರಾದರು. ನನ್ನ ರಾಜಕೀಯ ಜೀವನ ಕೊನೆಯಾಗಬಾರದು ಎಂಬ ಉದ್ದೇಶದಿಂದ ಪಕ್ಷ ನನಗೆ ಈ ಸ್ಥಾನ ನೀಡಿದೆ. ನನ್ನ ಸಿನಿರಂಗದ ಪಯಣ ಈ ಹುದ್ದೆ ದೊರಕಲು ನೆಪವಾಯಿತು. ನಾನು ಸಚಿವ ಸ್ಥಾನ ಕೇಳಿಲ್ಲ. ಆದರೆ, ಸಂಪುಟದಲ್ಲಿ ಸ್ಥಾನ ಸಿಗುವ ಭರವಸೆಯಿದೆ ಎಂದರು.

    ನನಗೆ ತಾಲೂಕಿನ ಅಭಿವೃದ್ಧಿ ಮುಖ್ಯ. ಕ್ಷೇತ್ರದ ಶಾಸಕರಿಗೆ ಸಹಕಾರ ನೀಡುವ ಜತೆಗೆ ತಾಲೂಕಿಗೆ ಆಗಬೇಕಾದ ಕೆಲಸಗಳ ಬಗ್ಗೆ ಗಮನ ನೀಡುತ್ತೇನೆ. ಆ ಉದ್ದೇಶದಿಂದಲೇ ಅಧಿಕಾರ ಸಿಕ್ಕ ತಕ್ಷಣ ನನ್ನ ಊರಿಗೆ ಬಂದಿದ್ದೇನೆ ಎಂದರು.

    ಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts