More

    ಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ

    ಚನ್ನರಾಯಪಟ್ಟಣ: 2019ರ ಡಿಸೆಂಬರ್​ನಲ್ಲಿ ದೇಶಕ್ಕೆ ಕಾಲಿಟ್ಟ ಮಹಾಮಾರಿ ಕರೊನಾ ಇನ್ನೂ 30 ವರ್ಷ ಇರಲಿದೆ. ಸದ್ಯ ಆ ಸೋಂಕಿಗೆ ಹೊಂದಿಕೊಂಡೇ ಬದುಕು ನಡೆಸಬೇಕು ಎಂದು ಬ್ರಹ್ಮಾಂಡ ಗುರೂಜಿ ಡಾ.ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದರು.

    ಎಂ.ಕೆ.ಚಿಕ್ಕೇನಹಳ್ಳಿ ಗ್ರಾಮದಲ್ಲಿ ಶ್ರೀ ಪಟ್ಟಾಭಿರಾಮಚಂದ್ರಸ್ವಾಮಿ ದೇಗುಲದ ಲೋಕಾರ್ಪಣೆಯ ಧಾರ್ಮಿಕ ವೇದಿಕೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮೈಸೂರಿಗೆ ಒಬ್ಬ ಅಮ್ಮ ಬಂದಿದ್ದಾಳೆ, ಅವಳ ದರ್ಶನ ಇನ್ನೂ ಯಾರಿಗೂ ಆಗಿಲ್ಲ. ಲೋಕಕಲ್ಯಾಣಕ್ಕಾಗಿಯೇ ಅಮ್ಮ ಭೂಮಿಯ ಮೇಲೆ ಪಾದಸ್ಪರ್ಶ ಮಾಡಿದ್ದಾಳೆ. ಸ್ವಲ್ಪ ದಿನದಲ್ಲಿಯೇ ಧಾಮಿರ್ಕ ಸಮಾಜಕ್ಕೆ ಅವಳನ್ನು ತೋರಿಸುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.

    ಇದನ್ನೂ ಓದಿರಿ ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

    ದುರಾಹಂಕಾರ ಮತ್ತು ಅಹಂಕಾರವನ್ನು ಹೊದ್ದು ಮಲಗಿರುವವರಿಗೆ ಎಚ್ಚರಿಸಲು ಆ ಶನೈಶ್ಚರನೇ ಈ ರೂಪದಲ್ಲಿ ಬಂದಿದ್ದಾನೆ. ಭಗವಂತನನ್ನು ಸ್ಮರಿಸಿ ಪೂಜೆ ಹಾಗೂ ಜಪ ಮಾಡದೆ ಇರುವವರಿಗೆ ಬಂದೊದಗಿದೆ ವಕ್ರಕಾಲ. ದೇವರನ್ನು ಮರೆತವರಿಗೆ ಇನ್ನುಮುಂದೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

    ಮುಂದಿನ ದಿನಗಳಲ್ಲಿ ಎಲ್ಲಿಯೂ ಕಂಡು ಕೇಳರಿಯದಂತಹ ಭೂಕಂಪ, ಜಲಪ್ರಳಯ ಹಾಗೂ ತರ್ಕಕ್ಕೆ ನಿಲುಕದ ರೋಗ-ರುಜಿನಗಳು ಬಂದೊದಗಲಿವೆ. ಎರಡು ಮುಕ್ಕಾಲು ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 18 ಕೋಟಿ ಜನರು ಸಾಂಕ್ರಾಮಿಕ ರೋಗದಿಂದಲೇ ಮೃತಪಡಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದರು.

    ಮಾಸ್ಕ್​ ಧರಿಸಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಬೇವು, ಅರಳಿ ಹಾಗೂ ಹೊಂಗೆ ಮರವನ್ನು ಮುಂಜಾನೆ 11 ಸುತ್ತು ಪ್ರದಕ್ಷಿಣೆ ಹಾಕಿ, ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿ, ಸಾಧ್ಯವಾದಷ್ಟು ಉಪ್ಪು ಮಿಶ್ರಿತ ಬಿಸಿನೀರು ಕುಡಿಯಿರಿ, ದಿನದಲ್ಲಿ ಒಮ್ಮೆ ಕಷಾಯ ಕುಡಿಯುವುದನ್ನು ರೂಢಿಸಿಕೊಳ್ಳಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಇದನ್ನು ಪಾಲಿಸಿದರೆ ಕರೊನಾ ಹೇಗೆ ಬರುತ್ತೆ ನೋಡೋಣಾ ಎಂದು ಸವಾಲು ಹಾಕಿದರು.

    9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts