ತುಂಗಾ ನೀರು ಶೀಘ್ರ ಶಿಕಾರಿಪುರಕ್ಕೆ

blank

ಶಿಕಾರಿಪುರ: ತುಂಗಾ ನೀರನ್ನು ಶಿವಮೊಗ್ಗದ ಹೊಸಳ್ಳಿಯಿಂದ ಚೋರಡಿ, ಅಂಜನಾಪುರ ಜಲಾಶಯದ ಮೂಲಕ ತಾಲೂಕಿನ ಜನತಗೆ ಒದಗಿಸುವ ಸಲುವಾಗಿ ಏತ ನೀರಾವರಿ ಕಾಮಗಾರಿ ನಡೆಯುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು

blank

ಪಟ್ಟಣದ ಗಗ್ರಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಗುರುವಾರ ಪತ್ನಿ ಸಮೇತ ಭೇಟಿ ನೀಡಿದ್ದ ಅವರು, ಸಮಿತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಯಿಂದ ಸಿಎಂ ಆಧುನಿಕ ಭಗೀರಥ ಎನಿಸಿದ್ದಾರೆ ಎಂದರು.

ತಾಲೂಕಿನ ಜನತೆ ಈ ಹಿಂದೆ ಬರಗಾಲ ಅನುಭವಿಸಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ಉದ್ಭವವಾಗಿತ್ತು. ಕಳೆದ ನಾಲ್ಕೈದು ದಶಕಗಳಲ್ಲಿ ಕಾಲ ಕಾಲಕ್ಕೆ ಮಳೆಯಾಗದೆ ರೈತರು ನೊಂದಿದ್ದರು. ಭತ್ತದ ಕಣಜವಾಗಿದ್ದ ತಾಲೂಕಿನಲ್ಲಿ ಮಳೆ ಅಭಾವದಿಂದ ಭತ್ತದ ಬೆಳೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಸಿಎಂ ಮಠ ಮಂದಿರಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ದೇವಸ್ಥಾನಗಳು ನಮ್ಮ ನಾಡಿನ ಶ್ರದ್ಧಾಕೇಂದ್ರಗಳು. ಅವುಗಳ ಜೀಣೋದ್ಧಾರ ಮತ್ತು ರಕ್ಷಣೆ ಹೊಣೆ ನಮ್ಮದಾಗಿರಬೇಕು. ತಾಲೂಕಿನ ಹಲವು ದೇಗುಲಗಳ ಜೀಣೋದ್ಧಾರಕ್ಕೆ ಅನುದಾನ ನೀಡಲಾಗಿದೆ. ದೈವಾನುಗ್ರಹ ಇದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತೇಜಸ್ವಿನಿ ರಾಘವೇಂದ್ರ, ದೇವಾಲಯ ಸಮಿತಿ ಅಧ್ಯಕ್ಷ ಅಶೋಕಣ್ಣ, ಪುರಸಭೆ ಮಾಜಿ ಸದಸ್ಯೆ ಜ್ಯೋತಿ ಹರಿಹರದ, ಮುಖಂಡರಾದ ಸಿದ್ದು ಹರಿಹರದ, ಜಯರಾಮ್ ಹದಡಿ ಮಂಜುನಾಥ್ ಇದ್ದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank