More

    ಸಂವಿಧಾನದಿಂದ ದೇಶದಲ್ಲಿ ಸಮಾನತೆ

    ಬೆಳಗಾವಿ: ಧರ್ಮ, ಭಾಷೆ ಹಾಗೂ ಜಾತಿ ಸೇರಿದಂತೆ ಯಾವುದೇ ಭೇದ-ಭಾವ ಇಲ್ಲದೆ ಎಲ್ಲರಿಗೂ ಎಲ್ಲದರಲ್ಲೂ ಸಮಾನ ಅವಕಾಶ ನೀಡುವ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ವಿಶೇಷ ಸಂವಿಧಾನವಾಗಿದೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಉಪಕುಲಪತಿ ಡಾ.ವಿವೇಕ ಎ.ಎಸ್. ಅಭಿಪ್ರಾಯ ಪಟ್ಟಿದ್ದಾರೆ.

    ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್(ಕೆಹರ್)ನ ಅಕಾಡೆಮಿ ಆಫ್ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿ, ಎಲ್ಲ ನಾಗರಿಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಪಾಲಿಸಲು ಇದು ನಕ್ಷೆಯಾಗಿದೆ. ಅಲ್ಲದೆ, ಎಲ್ಲರಿಗೂ ಸಮಾನತೆ ಸಾರುತ್ತಿದೆ ಎಂದರು.

    ಇದಕ್ಕೂ ಮುನ್ನ ಗಣ್ಯರು ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕುಲಸಚಿವ ಡಾ. ವಿ.ಎ. ಕೋಟಿವಾಲೆ, ಕಾನೂನು ಸಲಹೆಗಾರರಾದ ಜ್ಯೋತಿ ಕೆ. ಸೇರಿದಂತೆ ಕೆಹರ್‌ನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಅಶ್ವಿನಿ ನರಸಣ್ಣವರ ಹಾಗೂ ಡಾ.ಆರತಿ ಮಹಿಶಲೆ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts