More

    ಸಮಾನತೆ ತತ್ವಕ್ಕೆ ಬದ್ಧರಾಗಿ ಜೀವಿಸೋಣ

    ಲೋಕಾಪುರ: ವಿಶ್ವದಲ್ಲಿ ಭಾರತ ಶ್ರೇಷ್ಠ ಸಂವಿಧಾನ ಹೊಂದಿದೆ. ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ವಿ.ಬಿ.ಮಾಳಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ ಕೋರಡ್ಡಿ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜತೆಗೆ ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು.

    ಶಿಕ್ಷಕ ಮಂಜು ಪಾಟೀಲ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತನು, ಮನ, ಧನದಿಂದ ಸಹಾಯ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು.

    ಗ್ರೇಡ್-2 ತಹಸೀಲ್ದಾರ್ ಎ.ಕೆ.ಇಂಡಿಕರ್, ಉಪತಹಸೀಲ್ದಾರ್ ಸತೀಶ ಬೇವೂರ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಶಿವಾನಂದ ಉದಪುಡಿ, ಎಂ.ಎಂ. ವಿರಕ್ತಮಠ, ಪ್ರಕಾಶ ಚುಳಕಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ, ಗೋವಿಂದ ಕೌಲಗಿ, ಕಾಶಿಲಿಂಗ ಮಾಳಿ, ಭೀಮನಗೌಡ ಪಾಟೀಲ, ರಮೇಶ ನಿಡೋಣಿ, ಯಶವಂತ ಮಾದರ, ಅಶೋಕ ದೊಡಮನಿ, ಸಿದ್ರಾಮಪ್ಪ ದೇಸಾಯಿ, ಬಿ.ಎಲ್.ಬಬಲಾದಿ, ಮಹೇಶ ಹುಗ್ಗಿ, ಮಹೇಶ ಮಳಲಿ, ಕುಮಾರ ಕಾಳಮ್ಮನವರ, ರಮೇಶ ದೇವರಡ್ಡಿ, ಬೀರಪ್ಪ ಮಾಯನ್ನವರ, ಅರುಣ ಮುಧೋಳ, ಸುರೇಶ ಹುಗ್ಗಿ, ರವಿ ರೊಡ್ಡಪ್ಪನವರ, ಕೃಷ್ಣಾ ಭಜಂತ್ರಿ, ದುರಗಪ್ಪ ಕಾಳಮ್ಮನವರ, ದುರಗಪ್ಪ ಮಾದರ, ನಾಗರಾಜ ಜೀರಗಾಳ, ರೆಹಮಾನ ತೊರಗಲ್ಲ, ಠಾಣಾಧಿಕಾರಿ ಮೃಂತ್ಯುಜಯ್ಯ ಮಠದ, ಸಿಆರ್‌ಪಿ ಕೆ.ಎಲ್.ಮಾಳೇದ, ಆರ್‌ಬಿಜಿ ಶಾಲೆಯ ಮುಖ್ಯಗುರು ಸಿ.ವಿ.ಬನ್ನಿ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಡಿ.ಎಂ. ಬಸವಂತಪುರ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಲೋಕಾಪುರ ಪಟ್ಟಣದ ಮುಖಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಪಂ ಸಿಬ್ಬಂದಿ ಇದ್ದರು.

    ಲಕ್ಷಾನಟ್ಟಿ ಆದರ್ಶ ಶಾಲೆಯಿಂದ ಹೊರಟ ವಿವಿಧ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ, ಭಿತ್ತಿ ಚಿತ್ರಗಳ ಮೆರವಣಿಗೆ ಸುಭಾಷನಗರ, ಮೇನಬಜಾರ್, ದೇಸಾಯಿ ವಾಡೆ, ಬಸವೇಶ್ವರ ವೃತ್ತ, ಜಾಲಿಕಟ್ಟಿ, ಠಾಣಿಕೇರಿ, ವೆಂಕಟೇಶ್ವನಗರ ಸೇರಿ ಎಲ್ಲ ಕಡೆ ಸಂಚರಸಿ ಎಪಿಎಂಸಿ ಆವರಣದಲ್ಲಿ ಮುಕ್ತಾಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts