More

    ಮಹಿಳಾ ಸಮಾನತೆ ಕನಸು ಕಂಡ ಮಹಾನ್ ನಾಯಕ

    ಲೋಕಾಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ಇಡೀ ಭಾರತ ದೇಶದಲ್ಲಿ ಅಸ್ಪಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಧೀಮಂತ ನಾಯಕರು ಎಂದು ಬಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

    ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರತಿಯೊಬ್ಬರೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

    ವಾಯುಪುತ್ರ ಬ್ಯಾಂಕ್ ಅಧ್ಯಕ್ಷ ಲೋಕಣ್ಣ ಕತ್ತಿ ಮಾತನಾಡಿ, ಅಂಬೇಡ್ಕರ್ ಅವರು ಮಹಿಳಾ ಸಮಾನತೆ ಪ್ರಗತಿಯ ಕನಸು ಕಂಡ ಮಹಾ ನಾಯಕ, ಅಸ್ಪಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾ ನಾಯಕ ಎಂದರು.

    ಯುವ ಮುಖಂಡ ಗುರುರಾಜ ಉದಪುಡಿ, ಪ್ರಕಾಶ ಚುಳಕಿ, ಲಕ್ಷ್ಮಣ ಮಾಲಗಿ, ಯುಮನಪ್ಪ ಹೊಟ್ಟಿ, ಮಹೇಶ ಹುಗ್ಗಿ, ಗೋವಿಂದಪ್ಪ ಕೌಲಗಿ, ಪಿಎಸ್‌ಐ ರಾಕೇಶ ಬಗಲಿ, ಸುರೇಶ ಪೂಜಾರಿ, ಶಿವಪ್ಪ ರೊಡ್ಡಪ್ಪನವರ, ರವಿ ರೊಡ್ಡಪ್ಪನವರ, ಯಶವಂತ ಮಾದರ, ದುರಗಪ್ಪ ಕಾಳಮ್ಮನವರ, ಮೋಹನ ರೊಡ್ಡಪ್ಪನವರ, ರಂಗನಾಥ ಚಿಪ್ಪಲಕಟ್ಟಿ, ಅರುಣ ಮುಧೋಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts