More

    ಚಂದ್ರಯಾನದ ಅಜ್ಜನಿಗೆ ನಾಲ್ಕನೇ ವಿವಾಹ! 30ರ ಯುವತಿಯನ್ನು ವರಿಸಿದ 94ರ ಮಾಜಿ ಗಗನಯಾತ್ರಿ

    ಲಾಸ್ ಏಂಜಲೀಸ್: ಚಂದ್ರನಲ್ಲಿಗೆ ಮಾನವ ಸಹಿತ ಮೊದಲ ಪಯಣ ಕೈಗೊಂಡ 1969ರ ಅಪೋಲೋ- 11 ಮಿಷನ್​ನಲ್ಲಿ ಹೋಗಿಬಂದಿರುವ ಬಜ್ ಅಲ್ಡ್ರಿನ್ 93ನೇ ಜನ್ಮದಿನದಂದೇ ನಾಲ್ಕನೇ ವಿವಾಹವಾಗಿದ್ದಾರೆ.

    ಪತ್ನಿ ಡಾ. ಆಂಕಾ ಫೌರ್ ಅವರ ಚಿತ್ರವನ್ನು ಬಜ್ ಶನಿವಾರ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು, ಬಹುಕಾಲದ ಗೆಳತಿ ಅಂಕಾ ಫೌರ್ ಜತೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್​ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹ ಆಗಿರುವುದಾಗಿ ಬರೆದಿದ್ದಾರೆ. ಈ ಪೋಸ್ಟ್ ಗೆ 22 ಸಾವಿರ ಮೆಚ್ಚುಗೆಗಳು ವ್ಯಕ್ತವಾಗಿದ್ದು, 10.80 ಲಕ್ಷ ಜನರು ಪೋಸ್ಟ್ ವೀಕ್ಷಿಸಿದ್ದಾರೆ. ಅಭಿನಂದನೆಯ ಸುರಿಮಳೆಯೇ ಹರಿದುಬಂದಿದೆ.

    ಬಜ್ ಈ ಹಿಂದೆ ಮೂರು ಸಲ ವಿವಾಹವಾಗಿದ್ದು, ಮೂವರು ಪತ್ನಿಯರಿಗೂ ವಿಚ್ಛೇದನ ನೀಡಿದ್ದಾರೆ. ಅಪೋಲೋ-11 ನೌಕೆಯಲ್ಲಿ ಚಂದ್ರನಂಗಳಕ್ಕೆ ಕಾಲಿಟ್ಟ ಮೂವರ ಪೈಕಿ ಬಜ್ ಮಾತ್ರ ಈಗ ಬದುಕಿದ್ದಾರೆ. ಚಂದ್ರನಲ್ಲಿ ನೀಲ್ ಆರ್ಮ್​ಸ್ಟ್ರಾಂಗ್​ ಇಳಿದ 19 ನಿಮಿಷದ ನಂತರ ಬಜ್ ಇಳಿದಿದ್ದರು. ನೌಕೆಯ ಪೈಲಟ್ ಆಗಿದ್ದವರು ಮೈಕಲ್ ಕಾಲಿನ್ಸ್. (ಏಜೆನ್ಸೀಸ್​)

    ಮತ್ತೆ ಈ ರೀತಿ ನಡೆದ್ರೆ ನಿನ್ನನ್ನು ಕೊಲ್ತೀನಿ… ಚಿರತೆ ದಾಳಿಗೆ ಮೊಮ್ಮಗ ಬಲಿ, ಅರಣ್ಯಾಧಿಕಾರಿಗೆ ತಾತನ ಎಚ್ಚರಿಕೆ

    ನ್ಯಾಯದೇವತೆ| ತಂದೆಯ ಆಸ್ತಿಯಲ್ಲಿ ಎರಡನೇ ಹೆಂಡತಿಗೆ ಭಾಗ ಇರುತ್ತದೆಯೇ?

    ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ ಹಾರ್ದಿಕ್​ ಪಾಂಡ್ಯರ ಹಳದಿ ಬಣ್ಣದ ಸ್ಮಾರ್ಟ್​ಫೋನ್! ಕೊನೆಗೂ​ ಸಿಕ್ತು ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts