More

    ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ ಹಾರ್ದಿಕ್​ ಪಾಂಡ್ಯರ ಹಳದಿ ಬಣ್ಣದ ಸ್ಮಾರ್ಟ್​ಫೋನ್! ಕೊನೆಗೂ​ ಸಿಕ್ತು ಮಾಹಿತಿ

    ನವದೆಹಲಿ: ಟೀ ಇಂಡಿಯಾದ ಟಿ20 ನಾಯಕ ಹಾರ್ದಿಕ್​ ಪಾಂಡ್ಯ ಅವರು ವಿಶ್ವದ ಪ್ರಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಕಳೆದ ಬಾರಿಯ ಐಪಿಎಲ್​ ವಿಜೇತ ನಾಯಕರಾಗಿರುವ ಹಾರ್ದಿಕ್​, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 24 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಇದ್ದಾರೆ. ಅದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಹಾರ್ದಿಕ್​ 2023ರ ಐಸಿಸಿ ವಿಶ್ವಕಪ್​ಗೆ ತಯಾರಿ ನಡೆಸುತ್ತಿದ್ದಾರೆ.

    ಇತ್ತೀಚೆಗೆ ನಿಗೂಢ ಹಳದಿ ಬಣ್ಣದ ಸ್ಮಾರ್ಟ್​ಫೋನ್ ಬಳಸುತ್ತಿರುವ ಹಾರ್ದಿಕ್​ ಅವರ ಫೋಟೋ ವೈರಲ್​ ಆಗಿತ್ತು. ಮೊಬೈಲ್​ ನೋಡಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಫೋಟೋ ವೈರಲ್​ ಆಗುತ್ತಿದ್ದಂತೆ ಆ ಫೋನ್​ನ ಮಾಡೆಲ್​ ಯಾವುದು? ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಕ್ಯಾಮೆರಾ ಮಾಡ್ಯೂಲ್​ ಮೇಲೆ ಗಮನ ಹರಿಸಿದ್ದಾರೆ. ಒಂದಿಷ್ಟು ಮಂದಿ ರೀರ್​ ಪ್ಯಾನೆಲ್​ ಮೇಲೆ ಕಣ್ಣಿಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಯಾವ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಎಂಬುದನ್ನು ತಿಳಿಯಲು ನೀವು ಬಯಸಿದ್ದರೆ ಮುಂದೆ ಓದಬಹುದು. ​

    ನೀವು ಸ್ಮಾರ್ಟ್‌ಫೋನ್ ವ್ಯಾಮೋಹ ಹೊಂದಿರುವವರಾಗಿದ್ದರೆ, ಹಾರ್ದಿಕ್​ ಅವರ ಸ್ಮಾರ್ಟ್‌ಫೋನ್ ಪೊಕೊ ಬ್ರಾಂಡ್‌ಗೆ ಸೇರಿದೆ ಎಂದು ಗುರುತಿಸುವುದು ತುಂಬಾ ಸುಲಭ. ಈ ಬ್ರ್ಯಾಂಡ್‌ನ ಎಲ್ಲಾ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಹಿಂಭಾಗದಲ್ಲಿ ದೊಡ್ಡ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಳನ್ನು ಹೊಂದಿದ್ದು ಅದು ಹಾರ್ದಿಕ್ ಪಾಂಡ್ಯ ಅವರ ಫೋನ್‌ನಲ್ಲಿ ಹೋಲುತ್ತದೆ. ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ಕೈಯಲ್ಲಿರುವ ಫೋನ್ Poco X5 Pro ಆಗಿದ್ದು ಅದು ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.

    ಬಹುಶಃ ಹಾರ್ದಿಕ್ ಪಾಂಡ್ಯ ಅವರು ಈ ಫೋನ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿರಬಹುದು ಅಥವಾ ಬಿಡುಗಡೆಯಾಗದ ವಿಶೇಷ ಉತ್ಪನ್ನಗಳನ್ನು ಪಡೆದುಕೊಳ್ಳುವುದು ಅವರಿಗೆ ಕಷ್ಟವೇನಲ್ಲ. ಕೆಲವರು ಇದು ಮಾರ್ಕೆಟಿಂಗ್ ಸ್ಟಂಟ್ ಆಗಿರಬಹುದು ಎಂದು ಶಂಕಿಸಿದ್ದಾರೆ. ಸದ್ಯ Poco X5 Pro ಚೀನಾದಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಭಾರತಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.

    ಸದ್ಯಕ್ಕೆ ಕಂಪನಿಯು ಈ ಸ್ಮಾರ್ಟ್‌ಫೋನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಆದರೆ, ವದಂತಿಗಳು ನಿಜವಾಗಿದ್ದರೆ, ಮುಂಬರುವ ತಿಂಗಳುಗಳಲ್ಲಿ ನಾವು ಹಾರ್ದಿಕ್​ ಬಳಸುತ್ತಿರುವ ಸ್ಮಾರ್ಟ್​ಫೋನ್​ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. (ಏಜೆನ್ಸೀಸ್​)

    ಕಾನ್​ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಡಾಕ್ಟರೇಟ್​, ಎಲ್​ಎಲ್​ಬಿ, ಎಂಎಸ್ಸಿ, ಎಂ.ಟೆಕ್​ ಪದವೀಧರರು!

    ಟಿ.ನರಸೀಪುರ ತಾಲೂಕಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನನ್ನು ಎಳೆದೊಯ್ದ ಚಿರತೆ, ಶವ ಪತ್ತೆ, ಗ್ರಾಮಸ್ಥರ ಆಕ್ರೋಶ

    ಮುಸ್ಲಿಂ ಯುವಕನ ಜತೆ 4 ಮಕ್ಕಳ ತಾಯಿ ಎಸ್ಕೇಪ್​ ಪ್ರಕರಣ: ಮಹಿಳೆ ಹೇಳಿಕೆಯಲ್ಲಿ ಅನುಮಾನ, ಪತ್ನಿಗಾಗಿ ಗಂಡನ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts