More

    ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಿ

    ರಾಣೆಬೆನ್ನೂರ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭಿಸಬೇಕು. ರಾಣೆಬೆನ್ನೂರ ತಾಲೂಕಿನ ಅಡಕೆ ಬೆಳಗಾರರಿಗೂ ಸಬ್ಸಿಡಿ ಹಣದಲ್ಲಿ ಡ್ರಿಪ್ ವಿತರಣೆ ಮಾಡಬೇಕು ಎಂದು ತಾಲೂಕಿನ ಮಾಕನೂರ ಗ್ರಾಮದ ರೈತರು, ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಒತ್ತಾಯಿಸಿದರು.
    ತಾಲೂಕಿನ ಮಾಕನೂರ ಕ್ರಾಸ್ ಬಳಿ ಸಚಿವರನ್ನು ಭೇಟಿ ಮಾಡಿದ ರೈತರು, ತಾಲೂಕಿನ 26 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ, ಕರೊನಾ ಲಾಕ್​ಡೌನ್​ನಿಂದ ಖರೀದಿದಾರರು ಏಕಾಏಕಿ ಬೆಲೆ ಕುಸಿತ ಮಾಡಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆದು, ಭತ್ತ ಖರೀದಿಸಬೇಕು.
    ಜತೆಗೆ ಹಿರೇಕೆರೂರ ತಾಲೂಕಿನ ಅಡಕೆ ಬೆಳೆಗಾರರಿಗೆ ನೀಡುತ್ತಿರುವ ಸಬ್ಸಿಡಿಯಂತೆ ರಾಣೆಬೆನ್ನೂರ ತಾಲೂಕಿನ ಅಡಕೆ ಬೆಳೆಗಾರರಿಗೂ ಸಬ್ಸಿಡಿ ಹಣದಲ್ಲಿ ಡ್ರಿಪ್ ವಿತರಿಸಬೇಕು ಎಂದು ಒತ್ತಾಯಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ, ನರೇಗಾ ಯೋಜನೆಯಡಿ ಅಡಕೆ ಬೆಳೆಗಾರರಿಗೆ ಡ್ರಿಪ್ ವಿತರಿಸಲು ಹಾಗೂ ಅಡಕೆ ಬೆಳೆಗೆ ಡ್ರಿಪ್ ಅಳವಡಿಸಲು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರಗೆ ಸೂಚಿಸಿದರು.
    ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡುವ ಕುರಿತು ಕೂಡಲೆ ಮುಖ್ಯಮಂತ್ರಿಯವರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
    ರೈತರಾದ ಈರಣ್ಣ ಮಾಕನೂರ, ಚಂದ್ರು ಭರಮಗೌಡರ, ಹನುಮಂತಪ್ಪ ಕುಂಬಳೂರು, ಹನುಮಂತಪ್ಪ ಆರ್ಯರ, ಭೀಮಪ್ಪ ಪೂಜಾರ, ಶಂಕರಗೌಡ ಭರಮಗೌಡರ, ಸತೀಶಗೌಡ ಮಲ್ಲನಗೌಡರ, ಸುರೇಶ ನಲವಾಗಲ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts